ಜಿಲ್ಲೆ

ಶಂಕರಚಾರ್ಯರ ತತ್ವ ಆದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು:ಸಿ ಎನ್ ಶ್ರೀಧರ

Gadag - Shivanand Hiremath
Gadag: ನಗರದ ಶ್ರೀ ಶಂಕರ ಮಠದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಆಶ್ರಯದಲ್ಲಿ ಆದಿಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತಾಡಿದರು.
 ಆದಿ ಶಂಕರಾಚಾರ್ಯರು ತಮ್ಮ ನಿಶ್ಚಲ ಧರ್ಮಭಾವನೆಯಿಂದ ಭಾರತ ದೇಶವನ್ನೆಲ್ಲಾ ಸಂಚರಿಸಿ, ಹಿಂದೂ ಧರ್ಮದ ತತ್ತ್ವವನ್ನು ಜನಮಾನಸದಲ್ಲಿ ಬಿತ್ತಿದರು. ಅವರು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾವಾಕ್ಯದ ಮೂಲಕ ಈ ಜಗತ್ತಿನ ಪ್ರತಿ ಜೀವಿಯಲ್ಲೂ ದೈವತ್ವವಿದೆ ಎಂಬ ಸತ್ಯವನ್ನು ಸಾರಿದರು. “ನಾನು ದೇವನು” ಎಂಬ ಅರ್ಥದ ಈ ವಾಕ್ಯ, ಅಹಂಕಾರವಲ್ಲ – ಅದು ಮಾನವೀಯತೆ ಹಾಗೂ ಆತ್ಮಜ್ಞಾನದ ಪರಮೋನ್ನತ ತತ್ತ್ವವಾಗಿದೆ ಎಂದು ಹೇಳಿದರು.
 ಅವರು ಬೋಧಿಸಿದಂತೆ, ನಾವೆಲ್ಲರೂ ಒಳಗೆ ದೈವತ್ವವನ್ನು ಧರಿಸಿಕೊಂಡವರಾಗಿದ್ದೇವೆ. ಈ ತತ್ತ್ವವನ್ನು ಜೀವನದೊಳಗೆ ಅಳವಡಿಸಿಕೊಂಡಾಗ, ಪ್ರಪಂಚವೇ ಒಂದು ದೇವಮಯ ತಳಮಳವಾಗುತ್ತದೆ. ಶಂಕರರ ತತ್ವದುರ್ದರ್ಶಿತೆಯಿಂದ, ತತ್ತ್ವಪೂರ್ಣವಾದ ಜೀವನದ ದಾರಿಯಲ್ಲಿ ನಾವು ಹೆಜ್ಜೆಹಾಕಲು ಸಾಧ್ಯವಾಗುತ್ತದೆ ಎಂದು ನುಡಿದರು.
 ಸಂಸ್ಕೃತಿ ಚಿಂತಕ ಡಾ ಶಶಿಧರ ನರೇಂದ್ರ ಉಪನ್ಯಾಸ ನೀಡಿ ಶಂಕರಚಾರ್ಯರು ತಮ್ಮ ಸಣ್ಣ ವಯಸ್ಸಿನಲ್ಲಿ ವೇದ ಪರಿಷತ್ ಪುರಾಣಗಳನ್ನು ಅರಿತುಕೊಂಡು ಹಿಂದು ಧರ್ಮವನ್ನು ಉಳಿಸಬೇಕು ಎಲ್ಲರಿಗೂ ಅರಿವು ಮೂಡಿಸಬೇಕೆಂದು ಭರತ ಖಂಡವನ್ನು ಪಾದ ನಡೆಗೆಯಿಂದ ಸನಾತನ ಧರ್ಮವನ್ನು ಪುನರ್. ಸ್ಥಾಪಿಸಬೇಕು ಎಂದು ಸಂಚರಿಸಿ ಮಠಗಳನ್ನು ಸ್ಥಾಪಿಸಿ ಇಂದಗೂ ಜಾಗೃತಿ ಕಾರ್ಯವಾಗುತ್ತಿದೆ ಎಂದು ಹೇಳಿದರು.
 ಜೀವನದಲ್ಲಿ ನಮ್ಮ ವಯಕ್ತಿಕ ಕೆಲಸಗಳಲ್ಲಿ ಮೂಳುಗಿ ಹೋಗಿದ್ದೇವೆ ಇದನ್ನು ಹೋರತು ಪಡಿಸಿ ಸನಾತನ ಧರ್ಮದ ಉಳಿವಿಗೆ ನಾವೆಲ್ಲರೂ ಪಣ ತೊಡಬೇಕು ,ಪ್ರಾಚ್ಯಾತ್ಯರ ಅನುಕರಣೆಯನ್ನು ಕಡೆಮೆ ಮಾಡಬೇಕು ನಮ್ಮ ದೇಶವು ಎಲ್ಲದರಲ್ಲಿಯೂ ಸಬಲ ಎನ್ನುವುದರ ಬಗ್ಗೆ ಕುರುಹುಗಳನ್ನು ಹೊಂದಿದೆ ಎಂದರು.
 ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ. ಅಕ್ಬರಸಾಬ ಬಬರ್ಚಿ,ಮಾಜಿ ಶಾಸಕ ಡಿ ಆರ್ ಪಾಟೀಲ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ಬಿ ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸಿ ಆರ್ ಮುಂಡರಗಿ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ವೀರಯ್ಯಸ್ವಾಮಿ ,ರತ್ನಾಕರ ಭಟ ,ಶ್ರೀನಿವಾಸ ಹುಯಿಲಗೋಳ,ಸೇರಿದಂತೆ ಗಣ್ಯರು ಹಾಜರಿದ್ದರು. ಡಾ ವೆಂಕಟೇಶ ಕುಲಕರ್ಣಿ ಹಾಗೂ ತಂಡ ಭಕ್ತಿ ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ಉಪನ್ಯಾಸಕ ಅನಿಲ ವೈದ್ಯ. ಪ್ರಾಸ್ತವಿಕವಾಗಿ ಮಾತನಾಡಿ ಶಂಕರ ಮಠದಲ್ಲಿ ಜಯಂತಿಯನ್ನು ಆಚರಿಸಿದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಗಣ್ಯರನ್ನು ಸ್ವಾಗತಿಸಿದರು, ಸುಮನ್ ಪಾಟೀಲ ನಿರೂಪಿಸಿದರು.