ಜಿಲ್ಲೆ

ಶಾಮಿಯಾನ ಪೂರೈಕೆದಾರ ಸಂಘದಿಂದ ರಾಜ್ಯಮಟ್ಟದ ಮಹಾ ಅಧಿವೇಶನ, ಕೃತಪುರ ಉತ್ಸವ

ಗದಗ

ನಗರದ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಆ.17 ಮತ್ತು 18 ರಂದು ಉತ್ತರ ಕರ್ನಾಟಕ ಶಾಮಿಯಾನಾ ಪೂರೈಕೆದಾರರು, ಲೈಟಿಂಗ್, ಧ್ವನಿವರ್ಧಕ, ಡೆಕೋರೇಷನ್ ಮಾಲೀಕರ ಸಂಘ ಹಾಗೂ ಜಿಲ್ಲಾ ಶಾಮಿಯಾನ್ ಪೂರೈಕೆದಾರ ಸಂಘದ ಸಹಯೋಗದಲ್ಲಿ ಕೃತಪುರ ಉತ್ಸವ ಮತ್ತು 3ನೇ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಎನ್. ರಾಮರಾವ್ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆ.17 ರಂದು ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ, 11 ಕ್ಕೆ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಹಾಗೂ ರಕ್ತದಾನ ಶಿಬಿರ ಉದ್ಘಾಟನೆ ಜರಗುವುದು. ಮಧ್ಯಾಹ್ನ 3 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯಗಯಜ್ಜನವರ ತುಲಾಭಾರ ಕಾರ್ಯಕ್ರಮ ಜರಗುವುದು. ಸಂಜೆ 5ಕ್ಕೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಸಚಿವ ಎಚ್.ಕೆ. ಪಾಟೀಲರು ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಇತರರು ಉಪಸ್ಥಿತಿ ಇರುವ ಎಂದು ತಿಳಿಸಿದರು.

ಆ.18 ರಂದು ಬೆಳಗ್ಗೆ 10ಕ್ಕೆ ಸನ್ಮಾನ ಹಾಗೂ ನೆನಪಿನ ಕಾಣಿಕೆ ಕಾರ್ಯಕ್ರಮ, ಸಂಜೆ 5ಕ್ಕೆ ತೋಂಟದ ಸಿದ್ದರಾಮ ಶ್ರೀಗಳು ಮತ್ತು ಶಿವಾನಂದ ಮಠದ ಶಿವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಜರಗುವುದು. ಶಾಸಕ ಸಿ.ಸಿ. ಪಾಟೀಲ, ಎಸ್.ವಿ. ಸಂಕನೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತಿ ಇರುವರು. ರಾತ್ರಿ 8.30 ರಿಂದ  10.30ರ ವರೆಗೆ ನಟರಂಗ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗುತ್ತವೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ, ಪೂರ್ಣಚಂದ್ರರಾವ್, ಗೌರವಾಧ್ಯಕ್ಷ ನರಸಿಂಹಮೂರ್ತಿ (ಅಪ್ಪಣ್ಣ) ಅಮರೇಶ ಹಿರೇಮಠ, ಎನ್.ರಾಮರಾವ್, ಪ್ರಧಾನ ಕಾರ್ಯದರ್ಶಿ ರವೀಂದ್ರಬಾಬು ಮೆಣಸಿನಕಾಯಿ, ನಾಗಪ್ಪ ಚುರ್ಚಿಹಾಳ, ರವಿರಾಜ ಮಾಳೇಕೊಪ್ಪಮಠ ಇತರರು ಇದ್ದರು.