ಜಿಲ್ಲೆ

ಶ್ರವಣಕುಮಾರ ನಾಯಕ ಅವರಿಗೆ ಸೂಕ್ತ ರಕ್ಷಣೆಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತ ಗೃಹ ಸಚಿವರಿಗೆ ಮನವಿ

Gadag - Shivanand Hiremath

ಗದಗ : ಎಸ್.ಸಿ., ಎಸ್.ಟಿ. ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿಯ ರಾಜ್ಯಾಧ್ಯಕ್ಷರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರದ ವಿರುದ್ಧ ಧ್ವನಿ ಎತ್ತಿರುವ ಶ್ರವಣಕುಮಾರ ನಾಯಕ ಅವರು ಹಾಗೂ ಯಾದಗಿರಿ ಜಿಲ್ಲೆ ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷರಾಗಿರುವ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಮರೆಪ್ಪ ನಾಯಕ ಮಗ್ದಂಪುರ ಅವರು ಯಾದಗಿರಿ ಜಿಲ್ಲೆಯ ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ತಳವಾರ, ಪರಿವಾರದ, ಗೊಂಡ, ರಾಜಗೊಂಡ ಹೆಸರಿನಲ್ಲಿ ವ್ಯಾಪಕವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಹೋರಾಟದ ಮೂಲಕ ತಡೆದು ಸಾವಿರಾರು ನಕಲಿ ಜಾತಿ ಪ್ರಮಾಣ ಪತ್ರ ತಡೆದಿರುತ್ತಾರೆ ಎಂದು ಅಖಿಲ  ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ಗದಗ ಅಧ್ಶಕ್ಷರಾದ ಅನಿಲಕುಮಾರ ಸಿದ್ದಮ್ಮನಹಳ್ಳಿ ಹೇಳಿದರು

     ಅವರು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಶದ ಮುಖ್ಶಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿ ಶ್ರವಣಕುಮಾರ ನಾಯಕ ಅವರ ಹೋರಾಟಗಾರರ ಆತ್ಮಸ್ಥೆರ್ಯ ಕುಗ್ಗಿಸಲು ಕೆಲವು ಸಂಘಟನೆಗಳು ಅವರನ್ನು ಗಡಿಪಾರು ಮಾಡಲು ಆಗ್ರಹಿಸಿವೆ. ಹೋರಾಟಗಾರರ ಹೋರಾಟವನ್ನು ಹತ್ತಿಕ್ಕುವಂಥ ಕೆಲಸ ಯಾವದೇ ಬೇರೆ ಸಮಾಜ ಕುಗ್ಗಿಸುವ ಕೆಲಸವನ್ನು ವಾಲ್ಮೀಕಿ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ ಎಂದ ಅವರು ಎಸ್.ಸಿ./ಎಸ್.ಟಿ. ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ಶ್ರೀ ಶ್ರವಣಕುಮಾರ ನಾಯಕ ಹಾಗೂ ಉತ್ತರ ಕರ್ನಾಟಕ ಪ್ರದೇಶ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷರಾದ ಮರೆಪ್ಪ ನಾಯಕ 

ಮಗ್ದಂಪುರ ಅವರಿಗೆ ಗೃಹ ಇಲಾಖೆಯಿಂದ ಸೂಕ್ತ ರಕ್ಷಣೆ ಒದಗಿಸಬೆಕೇಂದು ಅಖಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ಗದಗ ಅಧ್ಶಕ್ಷರಾದ ಅನಿಲಕುಮಾರ ಸಿದ್ದಮ್ಮನಹಳ್ಳಿ ಹಾಗೂ ಪದಾಧಿಕಾರಿಗಳು ಹಿರಿಯರು ಸರ್ವ ಸದಸ್ಯರು ಸೇರಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಶದ ಮುಖ್ಶಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು

     ಈ ಸಂದರ್ಭದಲ್ಲಿ ಗೊವೀಂದರಾಜ ಪನ್ನೂರ ವಸಂತ ವಾಲ್ಮೀಕಿ ರೋಣ ತಾಲ್ಲೂಕ ವಾಲ್ಮೀಕಿ ಸಮಾಜದ ಅಧ್ಶಕ್ಷರಾದ ಬಸವರಾಜ ತಳವಾರ ಶ್ರೀಕಾಂತ ಪೂಜಾರ ಶಿವಣ್ಣ ಬಳ್ಳಾರಿ ರಾಮು ಬಾಗಲಕೋಟೆ ಈಶ್ವರ ರೌಡೂರು ಗೋಪಾಲ ಗಡಾದ ಮಂಜುನಾಥ ವಾಲ್ಮೀಕಿ ಸೋಮು ಕೊರ್ಲವಾಡ ರಮೇಶ ಹೊಟ್ಟಿ ಕಿರಣ ನಾಯ್ಕರ ನಾಗರಾಜ ಕುರಗೋಡ ನಾಗರಾಜ ಯರಗುಡಿ ಅಭಿ ನಾಯ್ಕರ ಪ್ರಕಾಶ ಯರಗುಡಿ ಲಕ್ಷ್ಮಣ ವಾಲ್ಮೀಕಿ ಮಲ್ಲಿಕಾರ್ಜುನ ವಾಲ್ಮೀಕಿ ಭೀಮಪ್ಪ ಹುಣಸಿಮರದ ಷಣ್ಮುಕ ವಾಲ್ಮೀಕಿ ಮಂಜುನಾಥ ಪೂಜಾರ ಅಂಜು ದಾವಣಗೇರಿ ಮಾರುತಿ ಹಾಗೂ ಸಮಾಜದ ಅನೇಕ ಮುಖಂಡರು ಬಾಗವಹಿಸಿದ್ದರು