ಜಿಲ್ಲೆ

ಸನ್ಮಾರ್ಗ ಕಾಲೇಜಿನಲ್ಲಿ ಪುನಃಶ್ಚೇತನ ಕಾರ್ಯಕ್ರಮ

ಗದಗ : ಜ್ಞಾನಾರ್ಜನೆಯಲ್ಲಿ ಶ್ರದ್ಧೆ, ವಿಶ್ವಾಸ, ಸಾಧಿಸಬೇಕೆನ್ನುವ ಛಲ ಇದ್ದಾಗ ಸಾಧನೆ ಸುಲಭ ಸಾಧ್ಯ ಎಂದು ಪ್ರೊ. ರೋಹಿತ ಒಡೆಯರ ಹೇಳಿದರು.

ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ಪ್ರವೇಶ ಪಡೆದ ವಿದ್ಯಾಥಿರ್ಗಳಿಗೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ಬೆಳೆದು ಬಂದ ಹೆಜ್ಜೆ ಗುರುತುಗಳನ್ನು ವಿವರಿಸಿದರು. ವಿದ್ಯಾಥಿರ್ಗಳು ಸಾಧನೆ ಮಾರ್ಗದಲ್ಲಿ ಮುಂದುವರೆಯಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯ ಪ್ರೊ. ರಾಜೇಶ ಕುಲಕಣಿರ್ ಮಾತನಾಡಿ, ವಿದ್ಯಾಥಿರ್ಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಮತ್ತು ಕಾಲೇಜು ಸದಾ ಸನ್ನದ್ಧವಾಗಿದೆ. ಇದರ ಸದುಪಯೋಗವನ್ನು ವಿದ್ಯಾಥಿರ್ಗಳು ಪಡೆದು ಯಶಸ್ಸಿನ ಮೆಟ್ಟಿಲನ್ನು ಹತ್ತಬೇಕು ಎಂದರು.

ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ವಿದ್ಯಾಥಿರ್ಗಳಲ್ಲಿ ಶಿಸ್ತು, ಸಂಸ್ಕಾರ ಉತ್ತಮ ನೈತಿಕತೆ ಇರಬೇಕು ಎಂದರು.

ಪ್ರೊ. ಪುನೀತ ದೇಶಪಾಂಡೆ, ಪ್ರೊ. ರಾಹುಲ ಒಡೆಯರ, ಪ್ರೊ. ಸೈಯದ ಮತ್ತಿನ ಮುಲ್ಲಾ, ಎಂ. ಸಿ. ಹಿರೇಮಠ, ಪ್ರೊ. ಹೇಮಂತ ದಳವಾಯಿ ಇತರರು ಇದ್ದರು.