ಜಿಲ್ಲೆ

ದುಶ್ಚಟಗಳ ಬಗ್ಗೆ ಆತಂಕ ಬೇಡ, ಅರಿವಿರಲಿ: ಗೋಪಾಲ ಸುರಪುರ

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾಡಳಿತ ವತಿಯಿಂದ ನಗರದ ಸನ್ಮಾರ್ಗ ಪಿಯು ಕಾಲೇಜಿನಲ್ಲಿ ಬುಧವಾರ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಗೋಪಾಲ ಸುರಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂಬಾಕು, ಡ್ರಗ್ಸ್​ ಮುಂತಾದವುಗಳ ಸೇವನೆಯಿಂದ ಆರೋಗ್ಯ ಹಾಲಾಗುತ್ತದೆ. ತಂಬಾಕು ಎನ್ನುವ ವಿಷ ಪದಾರ್ಥ ಹೊಲದಲ್ಲಿ ಬೆಳೆಯುತ್ತದೆ. ಈ ತಂಬಾಕನ್ನು ಯಾವ ವಿಷ ಜಂತು ಸೇವಿಸುವುದಿಲ್ಲ. ಕತ್ತೆಯೂ ಕೂಡಾ ಇದನ್ನು ತಿನ್ನುವುದಿಲ್ಲ. ಆದರೆ ಮಾನವ ಇದಕ್ಕೆ ಸುಲಭವಾಗಿ ದಾಸನಾಗುತ್ತಾನೆ ಎಂಬುದೇ ನಿಗೂಢವಾಗಿದೆ. ತಂಬಾಕನ್ನು ಸೇವಿಸುವುದರಿಂದ ನಮ್ಮ ನರಮಂಡಲ ನಿಷ್ಕ್ರೀಯಗೊಳ್ಳುತ್ತದೆ. ರಕ್ತವು ಅಶುದ್ಧವಾಗಿ ಎಲ್ಲ ನರಮಂಡಲವನ್ನು ಅಶಕ್ತಗೊಳಿಸಿ ಮುಂದೆ ಪಾರ್ಶ್ವವಾಯು, ಕೂದಲು ಉದುರುವಿಕೆ, ಕಣ್ಣಿನ ಪೊರೆ ದೌರ್ಬಲ್ಯ, ಶ್ವಾಸಕೋಶದ ಕ್ಯಾನ್ಸರ್​, ಅಲ್ಸರ್​ ಗ್ಯಾಂಗ್ರೀನ್​, ಗಂಟಲು ಕ್ಯಾನ್ಸರ್​, ದಂತಯ, ಬಾಯಿ ಹುಣ್ಣು, ಬಾಯಿ ಕ್ಯಾನ್ಸರ್​ ಮುಂತಾ ರೋಗಗಳನ್ನು ತಂಬಾಕು ಸೇವಿಸುವವರು ಎದುರಿಸಬೇಕಾಗುತ್ತದೆ ಎಂದರು.

ಗಭಿರ್ಣಿಯರು ತಂಬಾಕು ಹಾಗೂ ಧೂಮಪಾನ ಸೇವನೆ ಮಾಡಿದರೆ ನಿರ್ಜೀವ ಶಿಶುವಿನ ಜನನ, ಶಿಶುವಿನ ಅಕಾಲಿಕ ಜನನ, ಕಡಿಮೆ ತೂಕದ ಶಿಶು ಜನನ ಇದೆಲ್ಲ ಸಂಭವಿಸುತ್ತದೆ. ಆದ್ದರಿಂದ ತಂಬಾಕು ಸೇವನೆ, ಮಧ್ಯಪಾನ ಇಂದೇ ನಿಲ್ಲಿಸಬೇಕು. ನಿಮ್ಮ ನೆರೆಹೊರೆಯ ಪಾಲಕ ಪೋಷಕರಿಗೆ ಈ ವಿಷಯ ಪ್ರಚಾರ ಮಾಡಬೇಕು. ದುಶ್ಚಟಗಳ ಬಗ್ಗೆ ಆತಂಕ ಬೇಡ. ಅರಿವಿರಲಿ ಎಂದು ಸಲಹೆ ನೀಡಿದರು.

ತಂಬಾಕು ಸೇವಿಸದಿದ್ದರೆ ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳುತ್ತದೆ. ಯಾವ ರೋಗವು ಇರುವುದಿಲ್ಲ. ರಕ್ತ ಸಂಚಲನ ಶ್ವಾಸಕೋಶದ ಕ್ರಿಯೆ ಉತ್ತಮ ಆಗಿರುತ್ತದೆ. ಉತ್ತಮ ಆರೋಗ್ಯದಿಂದ ಬದುಕಬಹುದು. ಆದ್ದರಿಂದ ಇಂದಿನಿಂದಲೇ ನಾವೆಲ್ಲರೂ ತಂಬಾಕು, ಧೂಮಪಾನ ಸೇವನೆ ನಿಲ್ಲಿಸಬೇಕು. ಉತ್ತಮ ಸಶಕ್ತ ಭಾರತ ನಿಮಿರ್ಸಲು ಯುವಕರು ತಂಬಾಕು ಮುಕ್ತ ಜೀವನ ನಡೆಸಬೇಕು ಎಂದು ಗೋಪಾಲ ಸುರಪುರ ಹೇಳಿದರು.

ಸಮಾಜ ಸೇವಕ ಬಿ. ಸಿ ಚಿತ್ತರಗಿ ಮಾತನಾಡಿ, ತಂಬಾಕು ಸೇವನೆಯಿಂದ ನಾವು ಆಥಿರ್ಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಕುಗ್ಗಿ ಹೋಗುತ್ತೇವೆ, ಆದ್ದರಿಂದ ಇಂದಿನಿಂದಲೇ ಈ ಸಾಮಾಜಿಕ ಪಿಡುಗನ್ನು ನಿವಾರಿಸಲು ಪಣ ತೋಡಬೇಕು ಎಂದರು.

ಸಭೆಯ ಅಧ್ಯತೆ ವಹಿಸಿದ್ಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ದುಶ್ಚಟಗಳಿಂದ ಮಾನವನಿಗೆ ಅಧಃ ಪತನವೇ ಹೊರತು, ಏನೂ ಪ್ರಯೋಜನವಿಲ್ಲ. ಇದು ಗೊತ್ತಿದ್ದು ಈ ಸಾಂಕ್ರಾಮಿಕ ಪಿಡುಗಿಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ನಾವೆಲ್ಲರೂ ದುಶ್ಚಟಗಳನ್ನು ತ್ಯಜಿಸಿ ಒಳ್ಳೆಯ ನಾಗರಿಕರಾಗೋಣ ಎಂದರು.

ಪ್ರೊ. ರಾಜೇಶ ಕುಲಕಣಿರ್, ಎಂ. ಸಿ. ಹಿರೇಮಠ, ಪ್ರೊ. ರಾಹುಲ ಒಡೆಯರ, ಪ್ರೊ. ರೋಹಿತ ಒಡೆಯರ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ಎಸ್​. ಎಸ್​. ವಜ್ರಬಂಡಿ ಇತರರು ಇದ್ದರು.