ಗದಗ ಸಂಕನೂರ ಇನ್​ಸ್ಟಿಟ್ಯೂಟ್​ ಆ್​ ನಸಿರ್ಂಗ್​ ಕಾಲೇಜಿನಲ್ಲಿ ಬುಧವಾರ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು. ಡಾ. ಸುರೇಶ ಪಾಟೀಲ, ಡಾ. ಪ್ರಕಾಶ ಸಂಕನೂರ, ಡಾ. ಮೀನಾ ದೇವಾಂಗಮಠ, ಡಾ. ರಾಜೇಶ ಜನ್ನಾ, ಕವಿತಾ ಪವಾರ ಇತರರು ಇದ್ದರು. 
ಜಿಲ್ಲೆ

ಮಾನಸಿಕ ರೋಗಕ್ಕೆ ಒತ್ತಡ ನಿರ್ವಹಣೆ ಮಾಡಲು ಕರೆ: ಡಾ. ಸುರೇಶ ಪಾಟೀಲ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂದು ಸರ್ಕಾರಿ ನಸಿರ್ಂಗ್​ ಕಾಲೇಜಿನ ಪ್ರಾಧ್ಯಾಪಕ ಡಾ. ಸುರೇಶ ಪಾಟೀಲ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಗರದ ಸಂಕನೂರ ಇನ್​ಸ್ಟಿಟ್ಯೂಟ್​ ಆ್​ ನಸಿರ್ಂಗ್​ ಕಾಲೇಜಿನಲ್ಲಿ ಬುಧವಾರ ಮಾನಸಿಕ ರೋಗಿಗಳ ಮಾನವ ಹಕ್ಕುಗಳು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಹದ ಗಾಯಗಳು ಕಾಣುತ್ತವೆ. ಆದರೆ ತೀವ್ರವಾದ ಆಲೋಚನೆಯಿಂದ ಹಾಗೂ ಬೇರೆ ಒತ್ತಡಗಳಿಂದ ಆಗುವ ಮಾನಸಿಕ ಖಿನ್ನತೆ ಕಾಣುವುದಿಲ್ಲ. ರೋಗಿಗೆ ಒತ್ತಡ ನಿರ್ವಹಣೆ ಮಾಡಲು ಹಾಗೂ ರೋಗವನ್ನು ಗುಣಪಡಿಸಲು ಯಾವುದೇ ಬೇಧ&ಬಾವ ಮಾಡದೇ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯತೆ ವಹಿಸಿ ಸಂಕನೂರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಕಾಶ ಸಂಕನೂರ ಮಾತನಾಡಿ, ಮಾನಸಿಕ ರೋಗಿಗಳು ಒತ್ತಡ ನಿರ್ವಹಣೆಗೆ ಮದ್ಯಸೇವನೆ ಹಾಗೂ ಇತರ ಚಟಗಳಿಗೆ ಒಳಗಾಗದೇ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಒತ್ತಡ ನಿರ್ವಹಿಸಲು ಸಾಧ್ಯ ಎಂದರು.
ಡಾ. ಮೀನಾ ದೇವಾಂಗಮಠ, ಡಾ. ರಾಜೇಶ ಜನ್ನಾ, ಕವಿತಾ ಪವಾರ, ರಶ್ಮಿ ಪಾಟೀಲ, ರಾಧಾ ಸರ್ವದೆ, ನೀಹಾ ಹಣಗಿ ಇತರರು ಇದ್ದರು.