ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಂಸ್ಕೃತಿಯಲ್ಲಿ ಭಾರತ ದೇಶದ ಸರಿಸಾಟಿಯಾಗಿ ಮತ್ತೊಂದು ದೇಶವಿಲ್ಲ. ಧರ್ಮ ಹಾಗೂ ಧರ್ಮದ ಆಚರಣೆಯಲ್ಲಿ ಭಾರತೀಯರಿಗೆ ವಿಶ್ವಾಸವಿದೆ. ಅಂತಹ ಆಚರಣೆಗಳಲ್ಲಿ ಪ್ರಮುಖವಾಗಿ ಪಾಲಿಸುತ್ತಿರುವ ಆಧ್ಯಾತ್ಮ ವಿಧ್ಯಾಶ್ರಮದ ನೂತನ ಭವನಕ್ಕೆ 4 ಲಕ್ಷ ಅನುದಾನ ನೀಡುತ್ತೇನೆ ಎಂದು ವಿಧಾನಪರಿಷತ್ಯ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ನಗರದ ಆಧ್ಯಾತ್ಮ ವಿದ್ಯಾಶ್ರಮದಲ್ಲಿ ಸತ್ಸಂಗ ಸಮ್ಮೇಳನ, ಆದಿಶಕ್ತಿ ರಥೋತ್ಸವ ಹಾಗೂ ಸದಾಶಿವಾನಂದ ಶ್ರೀಗಳ 128ನೇ ಜಯಂತ್ಯೋತ್ಸವ ಸಮಾರಂಭ ಕಾರ್ಯಕ್ರನದಲ್ಲಿ ಭಾಗವಹಿಸಿ ಮಾತನಾಡಿ ಅವರು, ದೇಶದಲ್ಲಿ 7 ಧರ್ಮ, ಸಾವಿರಾರು ಸಂಖ್ಯೆಯಲ್ಲಿ ಜಾತಿ ಉಪ ಜಾತಿಗಳಿವೆ. ಹೀಗಿದ್ದರೂ ಭಾರತ ದೇಶ ಆಧುನಿಕ ಯುಗದಲ್ಲಿ ಸ್ವಾಲಂಭಿಯಾಗಿದೆ ಇತರೆ ದೇಶಕ್ಕೆ ಸ್ಪರ್ಧೆ ಒಡ್ಡುತ್ತಿದೆ. ಅದಕ್ಕೆ ನಮ್ಮ ಸಂಸ್ಕೃತಿ, ಆಧ್ಯಾತ್ಮ ವೇ ಕಾರಣ ಎಂದರು. ಸಾವಿರಾರು ವರ್ಷಗಳ ಕಾಲ ಪರಕೀಯರು ಆಳಿದರು ಸಹ ನಮ್ಮ ದೇಶದ ಸಂಸ್ಕೃತಿ ನಾಶ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಆಚಾರ ವಿಚಾರಗಳು ಗಟ್ಟಿ ಇರುವ ಕಾರಣದಿಂದಲೇ ನಮ್ಮ ಧರ್ಮ, ಧಾರ್ಮಿಕ ಆಚರಣೆ ನಾಶವಾಗಲಿಲ್ಲ ಎಂದರು.
ದೇಶದ ಮಠಮಾನ್ಯಗಳು, ಜಗದ್ಗುರುಗಳು, ಶಿವ ಶರಣರು, ಮಾತೆಯರು ನಮ್ಮ ಸಂಸ್ಕೃತಿಗಳನ್ನು ಉಳಿಸಿದ್ದರಿಂದಲೇ ನಮ್ಮ ಧರ್ಮ ಆಧುನಿಕ ಯುಗದಲ್ಲಿ ಗಟ್ಟಿಯಾಗಿದೆ ನಿಂತಿದೆ. ಮಠ ಮಾನ್ಯಗಳಿಗೆ ಭಕ್ತರೇ ಆಸ್ತಿ ಆಗಿದ್ದಾರೆ. ಹಾಗಾಗಿ ಮಠ ಮಾನ್ಯಗಳನ್ನು ಉಳಿಸಿ, ಬೆಳೆಸುವ ಕರ್ತವ್ಯ ನಮ್ಮಲ್ಲರದ್ದಾಗಿ ಎಂದು ಎಸ್. ವಿ. ಸಂಕನೂರು ಹೇಳಿದರು.
ನೀಲಮ್ಮ ತಾಯಿ ಅವರ ಕುರಿತು ಮಾತನಾಡಿದ ಅವರು, ನೀಲಮ್ಮ ತಾಯಿ ಅವರು ಶಾಲೆಗೆ ಹೋಗಿಲ್ಲ. ಆದರೂ ಸಂಸ್ಕೃತ ಬಲ್ಲವರು. ಇಡೀ ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅದಕ್ಕಾಗಿ ಅವರಿಗೆ ಚನೈ ವಿವಿ ಅವರಿಗೆ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ ಎಂದು ಸಂಕನೂರು ಹೇಳಿದರು.
ಮಹಾರಾಷ್ಟ್ರ ಬಸವಾನಂದ ಶ್ರೀಗಳು ಮಾತನಾಡಿ, ಪೃಥ್ವಿ ಕರ್ತಾನ ಕಮ್ಮಟ ಆಗಿದೆ. ಪೃಥ್ವಿಯಲ್ಲಿ ಅನ್ಯಾಯ ತಲೆದೋರಿದಾಗ ಶರಣರು ಜನ್ಮತಾಳಿ ಸಮಾಜ ಉದ್ದಾರಕ್ಕೆ ಕಾರ್ಯಪ್ರವೃತ್ತರಾಗುತ್ತಾರೆ. ಸಮಾಜದ ಏಳ್ಗೆಗೆ ಶ್ರಮೀಸುವ ಮಠಗಳಲ್ಲಿ ಆಧ್ಯಾತ್ಮ ವಿದ್ಯಾಶ್ರಮವು ಒಂದಾಗಿದೆ ಎಂದರು.
ದಯಾ ಭಾರತಿ ಮಾತೋಶ್ರೀ ಮಾತನಾಡಿದರು. ನೀಲಮ್ಮ ತಾಯಿ ಅಸುಂಡಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಮಠದ ಹಿರಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಣಕವಾಡದ ಮೃತ್ಯುಂಜಯ ಶ್ರೀಗಳು ಸೇರಿದಂತೆ ಇತರರು ಇದ್ದರು
ಸತ್ಸಂಗ ಸಮ್ಮೇಳನಗಳು ಸಮಜಾದಲ್ಲಿ ಗುಣಾತ್ಮಕ ವಿಚಾರಗಳನ್ನು ಬಿತ್ತಿ, ಉತ್ತಮ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಖ್ಯ ಭೂಮಿಕೆ ಕಲ್ಪಿಸುತ್ತವೆ. ಜನರು, ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿ ಆಗಬೇಕು.
- ನೀಲಮ್ಮ ತಾಯಿ, ಆಧ್ಯಾತ್ಮ ವಿಧ್ಯಾಶ್ರಮ