ಜಿಲ್ಲೆ

ಸರ್ಕಾರಿ ಪದವಿ ಕಾಲೇಜುಗಳಿಗೆ ಜಿಲ್ಲೆಯಿಂದ 18 ಸಹಾಯಕ ಪ್ರಾಧ್ಯಾಪಕರ ಆಯ್ಕೆ: ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ, ಗದಗ

ಕಳೆದ 3 ವರ್ಷಗಳ ಹಿಂದೆ ರಾಜ್ಯದ ಪದವಿ ಕಾಲೇಜುಗಳಿಗೆ 1200 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಗದಗ ಜಿಲ್ಲೆಯಿಂದ 18 ಅಭ್ಯಥಿರ್ಗಳು ಸರ್ಕಾರದಿಂದ ನೇಮಕಾತಿ ಆದೇಶ ಪತ್ರ ಪಡೆದಿರುವುದು ಶ್ಲಾನೀಯ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಂಕನೂರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವೆಉ, ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶ ಮಾಡಿ ಪರೀೆ ನಡೆಸಲಾಗಿತ್ತು. ಪರೀೆಗೆ ಒಟ್ಟು 33 ಸಾವಿರಕ್ಕೂ ಹೆಚ್ಚು ಅಭ್ಯಥಿರ್ಗಳು ಹಾಜರಾಗಿದ್ದರು. ಅದರಲ್ಲಿ 1200 ಅಭ್ಯಥಿರ್ಗಳು ಆಯ್ಕೆ ಆಗಿ ಕಾರಣಾಂತರಗಳಿಂದ ವಿಳಂಬವಾಗಿತ್ತು. ಸದ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದ್ದು ಅಭಿನಂದನಾರ್ಹ. ಅದರಲ್ಲಿ ಗದಗ ಜಿಲ್ಲೆಯಿಂದ 18 ಜನ ಸಹಾಯಕ ಪ್ರಾಧ್ಯಾಪಕರಾಗಿದ್ದು ಗದಗ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.

ಉಪನ್ಯಾಸಕರ ಸಂದ ಅಧ್ಯ ಎಸ್​. ಎಸ್​. ಸೋಮಣ್ಣವರ ಮಾತನಾಡಿ, ಪರೀೆ ಬರೆದು ನೇಮಕಾತಿ ಆದೇಶ ನೀಡಲು 3 ವರ್ಷಗಳ ಕಾಲ ಅಭ್ಯಥಿರ್ಗಳು ಕಾಯಬೇಕಾಯಿತು. ಸದನದ ಒಳಗೆ ಹಾಗೂ ಹೊರಗೆ ಬೆಂಬಲವಾಗಿ ವಿಧಾನ ಪರಿಷತ್​ ಸದಸ್ಯರು ಮತ್ತು ಅದರಲ್ಲೂ ವಿಶೇಷವಾಗಿ ಎಸ್​.ವಿ. ಸಂಕನೂರ ಅವರಿಂದ ಬೆಂಬಲ ದೊರೆಯಿತು. ಸರ್ಕಾರದಿಂದ ನೇಮಕಾತಿ ಆದೇಶ ಪತ್ರ ಕೊಡಿಸುವಲ್ಲಿ ಸಂಕನೂರು ಗುರುಗಳ ಪಾತ್ರ ಬಹಳ ಇದೆ ಎಂದು ಹೇಳಿದರು.

ಎಸ್​. ಎ್​. ಸಿದ್ನೆಕೊಪ್ಪ, ಉಮೇಶ ಅರಹುಣಸಿ, ಎಸ್​. ಎಲ್​. ಗುಳೇದಗುಡ್ಡ, ಕೆ. ಆರ್​. ಬೆಲ್ಲದ, ವೈ. ಆರ್​. ಬೇಲೇರಿ, ರವಿ ಕುಲಕಣಿರ್, ವಿ. ಎಸ್​. ದಲಾಲಿ ಇತರರು ಇದ್ದರು.