ಜಿಲ್ಲೆ

ರೋಟರಿ ಗದಗ ಸೆಂಟ್ರಲ್ ಕ್ಲಬ್‌ದಿಂದ ರಕ್ತದಾನ ಶಿಬಿರ

Gadag - Shivanand Hiremath

ರಕ್ತದಾನ ಶ್ರೇಷ್ಠ ದಾನ : ದಾನಪ್ಪಗೌಡ್ರ

ಗದಗ: ರೋಟರಿ ಗದಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯು ಗದುಗಿನ ಅಂಬಿಕಾ ರಕ್ತ ಭಂಡಾರದಲ್ಲಿ ಎರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 20ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಗದಗ ಸೆಂಟ್ರಲ್ ಕ್ಲಬ್‌ನ ಅಧ್ಯಕ್ಷ ಆರ್.ಬಿ.ದಾನಪ್ಪಗೌಡ್ರ ರಕ್ತದಾನವು ಎಲ್ಲ ದಾನಕ್ಕಿಂತ ಶ್ರೇಷ್ಠವಾದದ್ದು. ಕನಿಷ್ಠ ಒಂದೆರಡು ದಿನ ನೀರು-ಆಹಾರ ಇಲ್ಲದೆ ಜೀವಿಸಬಹುದು ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗೆ ತುರ್ತಾಗಿ ರಕ್ತ ಹಾಕದಿದ್ದರೆ ಬದುಕುವದು ಕಷ್ಟ ಎಂದರು.
ರಕ್ತದಾನ ಎಂದರೆ ದಾನಿಗಳಿಗೆ ಜೀವ ದಾನ ಮಾಡಿದಷ್ಟೇ ಸಂತೃಪ್ತ ಭಾವನೆ ಮೂಡುವದು. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಗೆ ಅವಕಾಶ ಕಲ್ಪಿಸಿದಂತಾಗುವದು, ಆರೋಗ್ಯದಲ್ಲಿ ಚೈತನ್ಯವೂ ಬರುವದು ಆದ್ದರಿಂದ ಪ್ರತಿಯೊಬ್ಬರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಬೇಕೆಂದರು.
ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯ ಅಧ್ಯಕ್ಷ ಪ್ರದೀಪ ಕುಲಕರ್ಣಿ ಅವರು ಮಾತನಾಡಿ ರಾಷ್ಟಿçÃಯ ದಿನಾಚರಣೆ, ಜನ್ಮದಿನಾಚರಣೆ, ಮದುವೆ ವಾರ್ಷಿಕೋತ್ಸವ ಹೀಗೆ ವಿಶೇಷ ಸಂದರ್ಭವನ್ನು ನೆಪವಾಗಿಟ್ಟುಕೊಂಡು ಎಲ್ಲರೂ ರಕ್ತದಾನ ಮಾಡುವ ಪರಿಪಾಠ ಹೊಂದಬೇಕು ಎಂದರು.
ವೇದಿಕೆಯ ಮೇಲೆ ಡಾ.ಮುರಳಿಕೃಷ್ಣ, ಘನಂದಮೂರ್ತಿ ತಿಪಟೂರ, ಸುರೇಶ ನಿಡಗುಂದಿ, ಕ್ಲಬ್ ಕಾರ್ಯದರ್ಶಿ ಸಿ.ಜಿ.ಹಿರೇಗೌಡ್ರ ಎಂ.ಬಿ.ರಮಣಿ ಉಪಸ್ಥಿತರಿದ್ದರು. ಅಂಬಿಕಾ ರಕ್ತ ಭಂಡಾರದ ಸಿಬ್ಬಂದಿ ವರ್ಗದವರು ರಕ್ತದಾನ ಶಿಬಿರ ಯಶಸ್ವಿಯಾಗಲು ಸಹಕರಿಸಿದರು.