ಜಿಲ್ಲೆ

ಹಿರೇಹಾಳ  ಗ್ರಾಮ ಪಂಚಾಯತಿಯಲ್ಲಿ  ಬಿ.ಬಿ.ಅಸೂಟಿಯವರ ಉಪಸ್ಥಿತಿಯಲ್ಲಿ ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ಹಾಗೂ ಸನ್ಮಾನ

Gadag - Shivanand Hiremath
ರೋಣ:  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ಇತ್ತೀಚಿಗಷ್ಟೇ ಗ್ರಾಮ ಪಂಚಾಯತ್ ಮಟ್ಟದಲ್ಲಿಯು ಕೂಡಾ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯತನಲ್ಲಿಯು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸುವ ಕುರಿತು ನಿರ್ದೇಶನ ನೀಡಿದ ಪ್ರಯುಕ್ತ ಇದೇ ದಿನಾಂಕ 10 ರಂದು ಬೆಳಿಗ್ಗೆ 11 ಘಂಟೆಗೆ ರೋಣ ತಾಲೂಕಿನ ಹಿರೇಹಾಳ್ ಗ್ರಾಮ ಪಂಚಾಯತನಲ್ಲಿ   ಉಪಸ್ಥಿತಿಯಲ್ಲಿ
ಇಂದು ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯನ್ನು ಹಿರೇಹಾಳ ಗ್ರಾಮದ ಪಂಚಾಯತಿಯಲ್ಲಿ ರೋಣ  ತಾಲೂಕಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸಂಗನಗೌಡ (ಮಿಥುನ್) ಜಿ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ ಬಿ ಅಸೂಟಿ ಯವರ ಉಪಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ  ಸಭೆ  ಜರುಗಿತು.
                      ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಉಂಟಾಗುತ್ತಿರುವ ಪ್ರಮುಖ ಸಮಸ್ಯೆಗಳಾದ ಜಿ.ಎಸ್‌.ಟಿ. ಹಾಗೂ ಮನೆ ಯಜಮಾನಿ ನಿಧನ ಹೊಂದಿದವರ ಹೆಸರನ್ನು ಬದಲಾವಣೆ ಮಾಡುವ ಮೂಲಕ ಕುಟುಂಬಸ್ಥರ ಇತರರ ಹೆಸರನ್ನು ನೊಂದಣಿ ಮಾಡಿಸಬೇಕು ಯಾವ ಬಡ ಕುಟುಂಬವು ಮಹಾತ್ವಾಕಾಂಕ್ಷಿ ಯೋಜನೆಯಿಂದ ದೂರ ಉಳಿಯಬಾರದು ಪ್ರತಿ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತರಿಂದ ಸರ್ವೆ ಮಾಡಿಸುವುದು ಕಡ್ಡಾಯ ಅನೇಕ ಸಮಸ್ಯೆಗಳು ಸುದೀರ್ಘ ಚರ್ಚೆ ನಡೆದು ಮುಂದಿನ ದಿನದಲ್ಲಿ ಪ್ರತಿಶತ ನೂರರಷ್ಟು ಗುರಿ ಸಾಧಿಸುವಂತಾಗಬೇಕು.
                 ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಅಕ್ಕಿ .ಜೋಳ
ಸಕಾಲಕ್ಕೆ ಸಮಯಕ್ಕೆ ಸರಿಯಾಗಿ ಎಲ್ಲಾ ಕುಟುಂಬಕ್ಕೆ ವಿತರಣೆ ಮಾಡಬೇಕು ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬೇಕು.
                      ಗ್ರಹ ಜ್ಯೋತಿ ಯೋಜನೆಯು ಎಲ್ಲಾ ಕುಟುಂಬಕ್ಕೂ ಈ ಯೋಜನೆ ತಲುಪಿಸಲು ಅಧಿಕಾರಿಗಳು ಮನೆ ಮನೆಗೆ ಹೋಗಿ ನೊಂದಣಿ  ಮಾಡಿಸಲು ಶ್ರಮವಹಿಸಬೇಕು ಯುವ ನಿಧಿ ಯೋಜನೆ ಸಮರ್ಪಕವಾಗಿ ಪದವಿಗಳನ್ನು ಪಡೆದ ಎಲ್ಲಾ ಯುವಕರಿಗೂ ತಲುಪಿಸಲು ಅಧಿಕಾರಿಗಳು ಪದವಿ ಹೊಂದಿದವರಿಗೆ ನೊಂದಾಯಿಸಿಕೊಳ್ಳಲು ಪದವಿ ಕಾಲೇಜುಗಳಿಗೆ ಹೋಗಿ ಉತ್ತೇಜನ ನೀಡಲು ಪ್ರಚಾರ ಮಾಡಬೇಕು.
                ಶಕ್ತಿ ಯೋಜನೆ ಎಲ್ಲಾ ಮಹಿಳೆಯರಿಗೆ ಪ್ರತಿಶತ ನೂರರಷ್ಟು ಉಪಯೋಗಿಸುತ್ತಿದ್ದು ವಿದ್ಯಾರ್ಥಿಗಳಿಗಾಗಿ ಹಳ್ಳಿಯಿಂದ ರೋಣ ಪಟ್ಟಣಕ್ಕೆ ಬರಲು ಹೋಗಲು ಸಮಯಕ್ಕೆ ಸರಿಯಾಗಿ ಇನ್ನು ಹೆಚ್ಚಿನ ಬಸ್ಸಿನ ವ್ಯವಸ್ಥೆ ಮಾಡಬೇಕು ಮತ್ತು ಬಸ್ ನಿಲ್ದಾಣವನ್ನು ಸ್ವಚ್ಛವಾಗಿ ಇಡಬೇಕು ಮಹಿಳೆಯರಿಗಾಗಿ ಹೆಚ್ಚಿನ ಆಸನ ವ್ಯವಸ್ಥೆ .ಮಕ್ಕಳಿಗೆ .ಶಿಶು ಪಾಲನಾ ಕೇಂದ್ರ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಮಾಡಬೇಕು ಶೌಚಾಲಯಗಳನ್ನು ಸ್ವಚ್ಛವಾಗಿ ಇಡಲು ಅಧಿಕಾರಿಗಳು
ದಕ್ಷವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
                      ಅದರಂತೆ ರೋಣ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಸರ್ವ ಸದಸ್ಯರಿಂದ ಜಿಲ್ಲಾ ಅಧ್ಯಕ್ಷರಾದ ಬಿ ಬಿ ಅಸೂಟಿ, ಹಾಗೂ ರೋಣ ತಾಲೂಕಾ ಅಧ್ಯಕ್ಷರಾದ ಸಂಗನಗೌಡ. (ಮಿಥುನ್) ಜಿ. ಪಾಟೀಲ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
             ರೋಣ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕಾ ಸಮಿತಿಯ ಅಧ್ಯಕ್ಷರಾದ ಸಂಗನಗೌಡ. (ಮಿಥುನ್) ಜಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸದರ ಸಭೆಯಲ್ಲಿ .ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಪರಶುರಾಮ ಅಳಗವಾಡಿ. ತಾಲೂಕ ಗ್ಯಾರಂಟಿ ಸಮಿತಿಯ ಸದಸ್ಯರಾದ . ಶಫೀಕ್ ಮೂಗನೂರ. ಬಿ.ಎಸ್. ರೆಡ್ಡಿರ. ಸಂಗು ನವಲಗುಂದ. ಮೇಘರಾಜ್ ಬಾವಿ .ಸಿದ್ದಪ್ಪ ಯಾಳಗಿ. ಹನುಮಂತಪ್ಪ ಸ್ವಾಲದ. ಶ್ರೀಮತಿ ನಾಜಬೇಗಂ ಎಲಿಗಾರ. ಬಸವರಾಜ್ ತಳವಾರ. ಸುರೇಶ್ ಬಸವ ರೆಡ್ಡಿರ.ಯಲ್ಲಪ್ಪ ಕಿರೆಸೂರು. ಬಸವರಾಜ್ ಜಗ್ಗಲ. ಶಿವಪ್ಪ ಗಾಣಿಗೇರ. ಶ್ರೀಮತಿ. ಗೀತಾ ಕೊಪ್ಪದ. ಶರಣಪ್ಪ ಕುರಿಯವರ.ಹಾಗೂ ತಾಲೂಕ ಮಟ್ಟದ ಪಂಚ ಗ್ಯಾರಂಟಿಗಳ ಯೋಜನೆಗಳ ಅನುಷ್ಠಾನದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.