ಜಿಲ್ಲೆ

ಕೌಜಗೇರಿಯಲ್ಲಿ ಗುರುವಂಧನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಸ್ಮರಣೀಯವಾದದ್ದು : ಬೈರನಹಟ್ಟಿ ಸ್ವಾಮಿಗಳು

Gadag - Shivanand Hiremath

ರೋಣ : ಸಮಾಜ ಸುಧಾರಿಸುವಲ್ಲಿ ಹಾಗೂ ವಿದ್ಯಾರ್ಥಿಗಳನ್ನು ತಿದ್ದಿ ತಿಡಿ ಉತ್ತಮ ನಾಗರೀಕರನ್ನಾಗಿ ಬದಲಾಯಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಅದರಲ್ಲೂ ಗುರು-ಶಿಷ್ಯರ ಸಂಬAಧ ಅವಿಸ್ಮರಣೆವಾಗಿದೆ ಎಂದು ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯಶ್ರೀ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಜರುಗಿದ ಗುರುವಂಧನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಜೀವನಕ್ಕೆ ಮಾರ್ಗದರ್ಶನ ನೀಡಿ ಬದುಕನ್ನು ಬೆಳಗಿಸಿದ ತಂದೆ- ತಾತಿ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್. ಬಿ. ಮತ್ತಿಕಟ್ಟಿ ಅವರು ಮಾತನಾಡಿ, 1992-93 ನೇ ಸಾಲಿನ ಎಸ್.ಎಸ್.ಎಲ್. ಸಿ. ಬ್ಯಾಚ್‌ನ ವಿದ್ಯಾರ್ಥಿಗಳು ಸುಮಾರು 30 ವರ್ಷಗಳ ನಂತರ ಎಲ್ಲರೂ ಸಮ್ಮಿಲನಗೊಂಡು, ಕಲಿಸಿದ ಎಲ್ಲ ಗುರುಗಳನ್ನು ಒಂದುಗೂಡಿಸಿ ಸ್ಮರಿಸಿ ಗೌರವಿಸುವುದು ತುಂಬಾ ಶ್ರೇಷ್ಠವಾದದ್ದಾಗಿದೆ ಹಾಗೂ ಈ ಐತಿಹಾಸಿಕ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿ ಮೇಲ್ಪಂತಿದAತಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೇಂದ್ರಪ್ಪ ಮೈಸೂರು ಅವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಜೀವನ ಸುಧಾರಣೆಯಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದೆ. ಅಂತಹ ತಾಯಂದಿರು ಆಗಿನ ಸಮಯದಲ್ಲಿ ಊರಲ್ಲಿ ಹಾಸ್ಟೆಲ್ ಇರದೆ ಇದ್ದರೂ ಮಕ್ಕಳಿಗೆ ಮನೆಮನೆ ಕಜ್ಜಾಯ ಎತ್ತಿ ಊಟದ ವ್ಯವಸ್ಥೆ ಮಾಡಿ ಶಿಕ್ಷಣ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಎಸ್. ಆರ್. ಕೊಪ್ಪದ ಅವರು ಮಾತನಾಡಿ, ಕೌಜಗೇರಿ ಗ್ರಾಮದಲ್ಲಿ ಜರುಗಿದ ಅದ್ದೂರಿ ಐತಿಹಾಸಿಕ ಗುರುವಂಧನಾ ಕಾರ್ಯಕ್ರಮ ವ್ಯವಸ್ಥೆ ನೋಡಿ ಮೂಕ ವಿಸ್ಮಿತನಾಗಿದ್ದೇನೆ. ಇಂತಹ ವಿದ್ಯಾರ್ಥಿಗಳು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ನಾವೆಲ್ಲರೂ ಕೃತಜ್ಞತಾರಗಿದ್ದೇವೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ರಾಷ್ಟç ಪ್ರಶಸ್ತಿ ವಿಜೇತರು ಹಾಗೂ ಮಕ್ಕಳ ಸಾಹಿತಿಗಳಾದ ಡಾ. ನಿಂಗು ಸೊಲಗಿ ಅವರು ಮಾತನಾಡಿ, ನಮ್ಮೂರಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಶಾಲಾ ಆವರಣದ ವೇದಿಕೆವರೆಗೂ ಸ್ವಾಗತಿಸಿ ಗೌರವಿಸುವುದನ್ನು ನೋಡಿ ಚಕಿತನಾದೆ. ಕಾರ್ಯಕ್ರಮ ಆಯೋಜಿಸಿ ಬೇರೆಯವರಿಗೂ ಮಾದರಿಯಾದ ಈ ಸ್ನೇಹ ಬಳಗಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಪಿ.ಬಿ.ಪಾಟೀಲ, ಕೆ.ಎಮ್. ದಿವಾನದ, ಆರ್. ಎಲ್. ಕಮ್ಮಾರ, ಎನ್.ಕೆ. ಬೀರಬಿ,್ಬ ಪಿ.ಡಿ. ಯಡಗೋಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶಗೌಡ ಪಾಟೀಲ, ಊರಿನ ಹಿರಿಯರಾದ ಯಲ್ಲಪ್ಪ ಚೋಳನವರ, ಸಂಗನಗೌಡ ಶಿವಳ್ಳಿ, ಬಸವರಾಜ ಸಜ್ಜನರ, ಟಿ.ಎ. ಶಿರೋಳ, ಎಸ್. ಹೆಚ್. ಕರಿಸಕ್ರಣ್ಣವ, ಪಿ. ಎಸ್.ಔದಕ್ಕನವರ, ವಿ.ಎಸ್. ವಾಲಿ, ಎನ್. ಎಸ್. ಹೊಸಮನಿ, ಕಲ್ಲನಗೌಡ ಸುರಕೋಡ, ಕಲ್ಲನಗೌಡ ಹಡಗಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಮಹೇಶ್ವರ ಪಾಟೀಲ ಅವರು ವಹಿಸಿದ್ದರು. ಟಿ.ವಿ. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ. ಬಸವರಾಜ ದಳವಾಯಿ ಕಾರ್ಯಕ್ರಮ ನಿರೂಪಿಸಿದರು. ಮರಿಗೌಡ ಸುರಕೋಡ ಅತಿಥಿಗಳನ್ನು ಸ್ವಾಗತಿಸಿದರು. ಕರಿಯಪ್ಪ ಹೂಗಾರ ವಂದಿಸಿದರು.