ಗದಗ: ಸತತ ಏಳು ದಿನಗಳಿಂದ ಜಿಲ್ಲಾಡಳಿತದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆಗಳ ಇಡೆರಿಕೆಗಾಗಿ ರೈತರು ಪಟ್ಟುಹಿಡಿದು ಪ್ರತಿಭಟನೆಗೆ ಕುಳಿತಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ನಮ್ಮ ಈ ಪ್ರತಿಭಟನೆಗೆ ಪ್ರತಿಫಲ ದೊರಕಿಸಿ ಕೊಡುವವರೆಗೂ ನಮ್ಮ ಈ ಧರಣಿ ಕೈ ಬೀಡುವ ಮಾತೆ ಇಲ್ಲ ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
ಉತ್ತರ ಕರ್ನಾಟಕ ಮಹಾಸಭಾದಿಂದ ಬಗರ್ ಹುಕುಂ ಸಾಗುವಳಿದಾರರ ಹಾಗೂ ನಾಗಾವಿ ಆರ್.ಡಿ.ಪಿ.ಆರ್ ಮಹಾವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರ ಅಹೋರಾತ್ರಿ ಧರಣಿಯು ಇಂದಿಗೆ 7ನೇ ದಿನಕ್ಕೆ ಮುಂದುವರಿದಿದೆ. ಶಿರಹಟ್ಟಿಯ ಫಕೀರೇಶ್ವರ ಮಠದಿಂದ 30 ಕಿ.ಮೀ ಪಾದಯಾತ್ರೆ ಮಾಡಿ ಜಿಲ್ಲಾಡಳಿತ ಕಚೇರಿ ತಲುಪಿದ ಬಳಿಕ ಆರಂಭವಾದ ಈ ಧರಣಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ರೈತರು ತಲೆತಲಾಂತರಗಳಿAದ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೇ, ರೈತರನ್ನು ಕಿರುಕುಳಕ್ಕೆ ಒಳಪಡಿಸುತ್ತಿದೆ. ಜೊತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರ ಪೂರ್ವಜರ ಕಾಲದಿಂದ ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿಯನ್ನು ಪರಿಹಾರ ನೀಡದೇ ಒಕ್ಕಲೇಬ್ಬಿಸಿರುವುದು ಖಂಡನೀಯ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮುಂದುವರಿದು, ಜಿಲ್ಲಾ ಉಸ್ತುವಾರಿ ಸಚಿವರು ತಾವು ಈ ಹಿಂದೆ 2023ರಲ್ಲಿ ಜಿಲ್ಲಾಡಳಿತ ಕಛೇರಿ ಎದುರು ಹೋರಾಟ ನಡೆದಾಗ ನಮ್ಮ ಭರವಸೆಗಳನ್ನು ಇಡೇರಿಸುವ ಭರವಸೆಯನ್ನು ನೀಡಿದ್ದರು. ಅವರು ಮಾತು ಕೊಟ್ಟಂತೆ ಈ ಬಡ ರೈತರ ನ್ಯಾಯಯುತವಾದ ಬೇಡಿಕೆಗಳಿಗೆ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಇಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ನಾವು ನಾಗಾವಿಯ ವಿಶ್ವವಿದ್ಯಾಲಯದ ಭೂಮಿಯನ್ನು ಉಳುಮೆ ಮಾಡಲು ಪ್ರಾರಂಭಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ಎದುರು ಕುಳಿತ ಪ್ರತಿಭಟನಾಕಾರರಿಗೆ ಸುರೇಶ ಮಹಾರಾಜ, ಧನ್ನುರಾಮ ತಂಬೂರಿ ಇವರುಗಳು ಭಜನೆಯ ಮೂಲಕ ಆತ್ಮಸ್ಥೆöÊರ್ಯ ತುಂಬಿದರು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಎನ್.ಟಿ.ಪೂಜಾರ, ಕಬಲಾಯತ ಕಟ್ಟಿ ನಾಯಕರು, ನಭಾಪುರ ನಾಯಕತು, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಹಾಗೂ ಇನ್ನಿತರರು ಇದ್ದರು.
------
ಬಾಕ್ಸ್ :
ಶಿರಹಟ್ಟಿ ಶಾಸಕರ ಬೆಂಬಲಿಗರೆAದು ಕರೆ ಮಾಡಿ ಬೇದರಿಕೆ..!
ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆ ಇಡೆರಿಕೆಗಾಗಿ ಪ್ರತಿಭಟನೆಗೆ ಕುಳಿತಿದ್ದು, ಪ್ರತಿಭಟನೆಯ ವೇಳೆ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಇವರಿಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಬೆಂಬಲಿಗರೆದು ಹೇಳಿ ಕರೆ ಮಾಡಿ ಪ್ರತಿಭಟನಾಕಾರರಿಗೆ ಬೇದರಿಕೆ ನೀಡಿರುವ ಘಟನೆ ಭಾನುವಾರ ಜಿಲ್ಲಾಡಳಿತದ ಏದುರು ನಡೆದಿದೆ. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಇದ್ದ ಪೋಲಿಸ ಭದ್ರತಾ ಪಡೆಯು ಈ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
------
ಕೋಟ್ :
ನಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲೆಯ ಹಲವು ವಂಚಿತ ರೈತ ಕುಟುಂಬಗಳು ಮಳೆ, ಗಾಳಿ, ಚಳಿ ಲೆಕ್ಕಿಸದೆ ಹಗಲು-ರಾತ್ರಿ ಎನ್ನದೆ ಈ ಅಹೋರಾತ್ರಿ ಧರಣಿಯಲ್ಲಿ ಕುಳಿತಿದ್ದು, ತಮ್ಮ ಹಕ್ಕಿಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ. ನಾವು ಯಾರ ಬೇದರಿಕೆಗೂ ಹೇದರುವವರಲ್ಲಾ, ಯಾವ ಕರೆಗೂ ಜಗ್ಗೊದಿಲ್ಲಾ..
- ರವಿಕಾಂತ ಅಂಗಡಿ,
ರಾಜ್ಯಾಧ್ಯಕ್ಷರು ಉತ್ತರ ಕರ್ನಾಟಕ ಮಹಾಸಭಾ.