ಜಿಲ್ಲೆ

ರವಿ ಗುಂಜೀಕರ ಅವರ ನಿವೃತ್ತಿ ಅಭಿನಂದನಾ ಸಮಾರಂಭ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ತಮ್ಮ ಸುದೀರ್ ಸೇವಾ ಅವಧಿಯಲ್ಲಿ ರವಿ ಗುಂಜೀಕರ ಅವರು ನೌಕರರ ಸಾರ್ವಜನಿಕರ ಅಪಾರ ಪ್ರೀತಿಯನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಅವರ ನಿವೃತ್ತಿ ಸಮಾರಂಭವೇ ಸಾಯಾಗಿದೆ. ಸಮಾಜಮುಖಿ ವ್ಯಕ್ತಿತ್ವವುಳ್ಳ ರವಿ ಗುಂಜೀಕರ ಅವರ ಸೇವೆ ನಿವೃತ್ತಿ ನಂತರವೂ ಮುಂದುರೆಯಲಿ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾ ಅಧಿಕಾರಿ ಹಾಗೂ ಸರ್ಕಾರಿ ನೌಕರರ ಸಂದ ನಿಕಟಪೂರ್ವ ಅಧ್ಯ ರವಿ ಗುಂಜೀಕರ ವಯೋನಿವೃತ್ತಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡಿದ ರವಿ ಗುಂಜೀಕರ ತಮ್ಮ ಸೇವಾ ಅವಧಿಯಲ್ಲಿ ನೊಂದವರು ಹಿಂದುಳಿದವರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರಿ ನೌಕರರ ವೃಂದದಲ್ಲಿ ಸ್ಥಿರತೆ ಇದ್ದು, ಉಳಿದ ಜಿಲ್ಲೆಗಳ ನೌಕರ ವರ್ಗಕ್ಕಿಂತ ಭಿನ್ನವಾಗಿ ಇಲ್ಲಿನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಸಂವನ್ನು ಹಲವು ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ ಶ್ರೇಯಸ್ಸು ಗುಂಜೀಕರ ಅವರದ್ದಾಗಿದೆ. ಸರ್ಕಾರಿ ಸೇವೆಯಿಂದ ನಿವೃತ್ತಿಯಾದರೆ ಸಾಮಾಜಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಬೇಕಿಲ್ಲ ಎನ್ನುವುದಕ್ಕೆ ಗುಂಜೀಕರ ಅವರು ನಿದರ್ಶನವಾಗಿದ್ದಾರೆ ಎಂದರು.

ವಿಧಾನ ಪರಿಷತ್​ ಹಿರಿಯ ಸದಸ್ಯ ಎಸ್​. ವಿ. ಸಂಕನೂರ ಮಾತನಾಡಿ, ಅಪರೂಪದ ವ್ಯಕ್ತಿತ್ವ ಹೊಂದಿರುವ ರವಿ ಗುಂಜೀಕರ ತಮ್ಮ ನಿವೃತ್ತಿಯನ್ನು ವಿಶಿಷ್ಠವಾಗಿ ವಿಧಾಯಕವಾಗಿ ಆಚರಿಸಲು ಮನಸ್ಸು ಮಾಡಿದ್ದು ಹೊಸ ಪರಂಪರೆಗೆ ನಾಂದಿ ಹಾಡಿದೆ. ರಕ್ತದಾನ, ಪೌರಕಾಮಿರ್ಕರಿಗೆ ಸನ್ಮಾನ, ಮಹಿಳಾ ದಿನಾಚರಣೆ, ಪರಿಸರ ದಿನ ಹೀಗೆ ಏಳು ದಿನಗಳ ಕಾಲ ಸಮಾಜಮುಖಿ ಕಾರ್ಯಗಳನ್ನು ರವಿ ಗುಂಜೀಕರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದು, ವಿಶೇಷವಾಗಿ ತಾವು ಕಲಿತ ಶಾಲೆಯನ್ನೇ ರವಿ ಗುಂಜೀಕರ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದರು.

ರಾಜ್ಯ ನೌಕರರ ಸಂದ ರಾಜ್ಯಾಧ್ಯ ಸಿ. ಎಸ್​. ಷಡಾರಿ ಮಾತನಾಡಿ, ನನ್ನೊಡನೆ 13 ವರ್ಷಗಳಿಂದ ಸರ್ಕಾರಿ ನೌಕರರ ಸಂದ ಹಿತಕ್ಕಾಗಿ ಶ್ರಮಿಸುತ್ತಿರುವ ರವಿ ಗುಂಜೀಕರ ಸಂಟನೆ ಹಾಗೂ ಸರ್ಕಾರಿ ಸೇವೆ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಚತುರರು. ಮೂರು ಬಾರಿ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯರಾಗಿ ಸೇವೆ ಸಲ್ಲಿಸಿರುವ ಗುಂಜೀಕರ ಅವರು ಆ ಸ್ಥಾನದ ಗೌರವ ಹೆಚ್ಚುವ ಹಾಗೆ ಕೆಲಸ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ನೌಕರರ ನಾವಿಕನಾಗಿದ್ದ ರವಿ ಗುಂಜೀಕರ ಇನ್ನು ಮುಂದೆ ಸಮಾಜದ ನಾವಿಕನಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.

ಸಾನ್ನಿಧ್ಯವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ, ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಅವರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರವಿ ಗುಂಜೀಕರ ಅವರು ತಮ್ಮ ಸೇವಾ ಅವಧಿಯಲ್ಲಿ ಬಡವರ ಬಂಧುವಾಗಿ ಕೆಲಸ ಮಾಡಿದ್ದಾರೆ. ಬಡ ವಿದ್ಯಾಥಿರ್ಗಳಿಗೆ ಹಾಸ್ಟೇಲ್​ ಅಗತ್ಯ ಇದ್ದಾಗ ಗುಂಜೀಕರ ಹಾಗೂ ಬಸವರಾಜ ಬಳ್ಳಾರಿಯವರು ಎಂದೂ ಅವರನ್ನು ನಿರಾಸೆಗೊಳಿಸಿಲ್ಲ. ರವಿ ಗುಂಜೀಕರ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.

ಸಮಾಜದ ವಿವಿಧ ೇತ್ರಗಳಲ್ಲಿ ಸೇವೆ ಸಲ್ಲಿಸಿರುವ 60 ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರವಿ ಗುಂಜೀಕರ ಅವರ ಜೀವನ, ಸಾಧನೆಗಳುಳ್ಳ ಅಭಿನಂದನ ಗ್ರಂಥ "ನೌಕರರ ನಾವಿಕ' ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಅಡ್ನೂರು&ರಾಜೂರು ಅಭಿನವ ಪಂಚಾರ ಶಿವಾಚಾರ್ಯ ಮಹಾಸ್ವಾಮಿಗಳು, ಓಂಕಾರಗಿರಿಯ ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಶಾಸಕರಾದ ಸಿ.ಸಿ ಪಾಟೀಲ, ಶಾಸಕರು ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯ ಜಿ. ಎಸ್​. ಪಾಟೀಲ, ಶಾಸಕ ಚಂದ್ರು ಲಮಾಣಿ, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯ ಬಸವರಾಜ ಬಳ್ಳಾರಿ, ವಾಸಣ್ಣ ಕುರಡಗಿ, ರಾಜು ಕುರಡಗಿ, ಮಲ್ಲಿಕಾರ್ಜುನ ಬಳ್ಳಾರಿ, ಐ. ಕೆ. ಕಮ್ಮಾರ, ಅರುಣಕುಮಾರ ಹಿರೇಮಠ ಸೇರಿದಂತೆ ಹಲವರು ಇದ್ದರು.