ವಿಜಯವಾಣಿ ಸುದ್ದಿಜಾಲ ಗದಗ
ನೌಕರರ ನಾಡಿ ಮಿಡಿತ ಅರಿತು ಮೂರು ಅವಧಿಗೆ ಸರ್ಕಾರಿ ನೌಕರ ಸಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರವಿ ಗುಂಜೀಕರ ಅವರು ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನಲೆ ಅವರ ಅಭಿನಂದನ ಗ್ರಂಥ ಹೊರತರಲು ಸಮಿತಿ ತೀರ್ಮಾನಿಸಿದೆ ಎಂದು ಅಭಿನಂದನ ಗ್ರಂಥ ಸಂಪಾದಕ ಐ ಕೆ ಕಮ್ಮಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಜಟೀಲ ಸಮಸ್ಯೆಗಳನ್ನು ಅರಿತು, ಅವುಗಳನ್ನು ಪರಿಹರಿಸಲು ಗುಂಜೀಕರ ಅವರು ಸದಾ ಮುಂದೆ ಇರುತ್ತಾರೆ. ನಿವೃತ್ತಿ ನಂತರವು ಅವರು ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂಧಿಸಲಿದ್ದಾರೆ. ನಿಲಯ ಮೇಲ್ವಿಚಾರಕರಾಗಿ ಸೇವೆ ಆರಂಭಿಸಿ, ಇಲಾಖೆಯ ಜಿಲ್ಲಾ ಅಧಿಕಾರ ವಹಿಸಿಕೊಳ್ಳುವ ವರೆಗೆ ಅವರ ಸೇವೆ ಸ್ಮರಣೀಯ. ಈ ಭಾಗದಲ್ಲಿ ಅವರು ಜನಮೆಚ್ಚುಗೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ವಿದ್ಯಾಥಿರ್ಗಳಿಗೆ, ಅವರ ಅಭಿಮಾನಿ ಬಳಗಕ್ಕೆ ಅವರ ಮೇಲೆ ಅಪಾರ ಪ್ರೀತಿ ಇದೆ. ಸಾಮಾಜಿಕವಾಗಿ ಅವರ ಹೋರಾಟವನ್ನು ಎಲ್ಲರೂ ಪ್ರಶಂಸಿಸಬೇಕಿದೆ ಎಂದರು.
ನಗರದ ಆಂಗ್ಲೋ ಉರ್ದು ಶಾಲಾ ಮೈದಾನದಲ್ಲಿ ಮೆ 6 ರಂದು ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಿತ್ರದುರ್ಗದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಮಣಕವಾಡದ ಮೃತ್ಯುಂಜಯ ಶ್ರೀಗಳು, ಕಪ್ಪತಗಿರಿ ಶಿವಕುಮಾರ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೊರಟೂರಿನ ಮಲ್ಲಸಮುದ್ರಗಿರಿ ಶ್ರೀಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಚಿವ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ, ಬಸರಾಜ ಹೊರಟ್ಟಿ, ಸಂಸದ ಬಸವಾಜ ಬೊಮ್ಮಾಯಿ ಶಾಸಕ ಎಸ್. ವಿ. ಸಂಕನೂರು, ಸರ್ಕಾರಿ ನೌಕರ ಸಂಗದ ರಾಜಾಧ್ಯಕ್ಷ ಸಿ.ಎಸ್. ಷಡಕ್ಷರಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ ಎಂದು ಐ. ಕೆ. ಕಮ್ಮಾರ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲುಕೂ ಅಧಿಕಾರಿ ಬಸವರಾಜ ಬಳ್ಳಾರಿ ಮಾತನಾಡಿ, ಡಾ. ರವಿ ಗುಂಜೀಕರ ಸ್ನೇಹಜೀವಿಯಾಗಿದ್ದು, ನೌಕರರ ಬೇಕು ಬೇಡಗಳಿಗೆ ಸ್ಪಂದಿಸಿ ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸಿದ್ದಾರೆ. 1998ರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂದ ನಿರ್ದೇಶಕರಾಗಿ, ಸಂಟನಾ ಕಾರ್ಯದಶಿರ್ಯಾಗಿ, ಪ್ರಧಾನ ಕಾರ್ಯದಶಿರ್ಯಾಗಿ ಮತ್ತು 2013ರಿಂದ ಮೂರು ಅವದಿಗಳ ಕಾಲ ಜಿಲ್ಲಾ ಅಧ್ಯಕ್ಷರಾಗಿ, ಕೇಂದ್ರ ಸಂದ ಉಪಾಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಂಥ ಬಿಡುಗಡೆ ಸಮಾರಂಭದಂದು 60 ಸಸಿಗಳನ್ನು ನೆಡುವುದರ ಜತೆಗೆ ಕೃಷಿ, ಸಾಮಾಜಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 60 ಜನ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪ್ರಹ್ಲಾದ ಗೆಜ್ಜಿ, ಮಾರುತಿ ಹಾರೋಗೇರಿ, ಆರ್. ಎಚ್. ಜಂಗನವಾರಿ, ಶಿವಪ್ಪ ಕುರಿ, ಮಂಜುನಾಥ ಮಾಣಿ, ಎಸ್. ಆರ್. ಹಿರೇಮಠ ಇತರರು ಇದ್ದರು.