ಜಿಲ್ಲೆ

ಅಂದಯ್ಯ ಅರವಟಗಿಮಠಗೆ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’

Gadag - Shivanand Hiremath

ಗದಗ: ಹೊಸ ತಲೆಮಾರಿನ ವಚನ ಸಾಹಿತ್ಯ ಅಧ್ಯಯನಕಾರರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಟಾನ ಜಂಟಿಯಾಗಿ ನೀಡುವ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ ಘೋಷಣೆಯಾಗಿದ್ದು, ರೋಣ ತಾಲ್ಲೂಕಿನ ಡ.ಸ.ಹಡಗಲಿ ಗ್ರಾಮದ ಡಾ. ಅಂದಯ್ಯ ಅರವಟಗಿಮಠ ಅವರಿಗೆ 2024ನೇ ಸಾಲಿನ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ ದೊರತಿದೆ.

ಪ್ರಶಸ್ತಿಯು ₹20 ಸಾವಿರ ನಗದು ಮತ್ತು ಫಲಕ ಒಳಗೊಂಡಿದ್ದು, ನ.18ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ಅಂದಯ್ಯ ಅರವಟಗಿಮಠ ಅವರಿಗೆ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.