Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಕನ್ನಡ ವಿಭಾಗದಿಂದ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪದವಿ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾ. ವಿ ಟಿ ನಾಯಕರವರು ಕನ್ನಡಾಂಬೆ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡ ಭಾಷೆಯು ಕರ್ನಾಟಕದ ಅಧಿಕೃತ ಭಾಷೆಯಾಗಿದ್ದು, ಇದು ಶ್ರೀಮಂತ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಇದು ಒಂದು ದ್ರಾವಿಡ ಭಾಷೆಯಾಗಿದ್ದು, ಭಾರತದ ಅತಿ ಹಳೆಯ ಭಾಷೆಗಳಲ್ಲಿ ಎರಡನೆಯ ಸ್ಥಾನದಲ್ಲಿದೆ ಮತ್ತು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಯಾವುದೇ ದ್ರಾವಿಡ ಭಾಷೆಗಳಿಗಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ. ಕನ್ನಡವು ಸಂವಹನ, ಶಿಕ್ಷಣ ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕನ್ನಡ ಭಾಷೆಯ ಇತಿಹಾಸವು ಸುಮಾರು 1500 ವರ್ಷಗಳಷ್ಟು ಹಳೆಯದಾಗಿದೆ, ಇದರ ಅತ್ಯಂತ ಹಳೆಯ ಲಿಖಿತ ಪುರಾವೆಯಾದ ಹಲ್ಮಿಡಿ ಶಾಸನವು ಕ್ರಿ.ಶ. 450 ರಷ್ಟೇ ಹಳೆಯದು. ಇದು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದ್ದು, ಬ್ರಾಹ್ಮಿ ಲಿಪಿಯಿಂದ ಕನ್ನಡ ಲಿಪಿ ರೂಪುಗೊಂಡಿದೆ. ಕನ್ನಡ ಸಾಹಿತ್ಯವು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಕಾಲಘಟ್ಟಗಳಾಗಿ ವಿಂಗಡಿಸಲಾಗಿದೆ. ಇಲ್ಲಿಯವರೆಗೆ 30,000 ಕ್ಕೂ ಹೆಚ್ಚು ಕನ್ನಡ ಶಾಸನಗಳು ಪತ್ತೆಯಾಗಿವೆ, ಮತ್ತು ಕನ್ನಡವು 2008 ರಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಹೊಂದಿದೆ ಹೀಗೆ ಅನೇಕ ವಿಚಾರಗಳನ್ನು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಪಿ ಜೈನರವರು ಮಾತನಾಡಿ ಕನ್ನಡವು ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಮತ್ತು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಇದು ಸಾಹಿತ್ಯ, ಸಂಗೀತ, ನೃತ್ಯ, ಮತ್ತು ಚಲನಚಿತ್ರಗಳಂತಹ ಕಲೆಗಳನ್ನು ಬೆಳೆಸಿದೆ ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯವು ಕಾವ್ಯ, ಗದ್ಯ ಮತ್ತು ನಾಟಕ ಸೇರಿದಂತೆ ಅನೇಕ ಪ್ರಕಾರಗಳನ್ನು ಒಳಗೊಂಡಿದೆ. ಕುವೆಂಪು, ಪಂಪ, ಶಿವರಾಮ ಕಾರಂತ ಮೊದಲಾದ ಲೇಖಕರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.2008 ರಲ್ಲಿ ಭಾರತ ಸರ್ಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ನೀಡಿತು, ಇದು ಅದರ ಪ್ರಾಚೀನತೆ ಮತ್ತು ಸಾಹಿತ್ಯಿಕ ಮಹತ್ವವನ್ನು ತೋರಿಸುತ್ತದೆ ತೋರಿಸುತ್ತದೆ ಎಂಬ ನಾಡು ನುಡಿಯ ಬಗ್ಗೆ ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ವೇದಿಕೆ ಮೇಲೆ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸವಿತಾ ಎಸ್ ಬಂಡಾರ್ಕರ್ ಪ್ರೊ. ಎಸ್ ಬಿ ಜಾದವ್ ಪ್ರೊ. ಸಲ್ಮಾ ಬೆಳಗಾಂ, ಪ್ರೊ. ಮೋಹನ್, ಶ್ರೀ ರವೀಶ್, ಶ್ರೀ ಬಡಿಗೇರ್, ಶ್ರೀ ಶಿವಕುಮಾರ್ ಕಣವಿ, ಶ್ರೀ ಬಸವರಾಜ್ ಹಳ್ಳಿಕೇರಿ ಶ್ರೀ ಕಲಬುರ್ಗಿ ಶ್ರೀ ಯಾವುಗಲ್, ಶ್ರೀ ಪ್ರಶಾಂತ್ ಹೊಂಬಾಳಿ ಪ್ರೊ. ಫಿರೋಜ್ ಖಾನ್, ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.