Gadag: ಹುಲಕೋಟಿಯ ಶ್ರೀ ರಾಜೇಶ್ವರಿ ವಿದ್ಯಾನಿಕೇತನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಪ್ರಾಚಾರ್ಯರಾದ ಶ್ರೀ ವಿ.ಎ.ರಾಯಭಟ್ಟನವರ, ಶಾಲಾ ಹಿರಿಯ ಶಿಕ್ಷಕರಾದ ಶ್ರೀ ಸಿ.ಬಿ.ಹೊಳೆಯಣ್ಣವರ, ಕಛೇರಿ ವ್ಯವಸ್ಥಾಪಕರಾದ ಶ್ರೀ ಸಿ.ಬಿ.ಪಾಟೀಲ ಅವರು ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ನಿರ್ಮಲಾ ಬಿರಸಲ ಅವರು ವಿಶ್ವ ಪರಿಸರ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಖುಷಿ ಗುಂತಕಲ, ಕುಮಾರಿ ಸೋಫಿ ಮೌಲ್ವಿ ಹಾಗೂ ಕುಮಾರಿ ಅಪೂರ್ವಾ ಯಮನೂರ ಅವರು ಪರಿಸರ ದಿನಾಚರಣೆಯ ಮಹತ್ವ ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ವೈ.ಆರ್.ಶೆಟ್ಟಿ, ಶ್ರೀ ಪ್ರಕಾಶ ಸರಮೊಕದಮ್ ಅವರು ಉಪಸ್ಥಿತರಿದ್ದರು. ಶ್ರೀಮತಿ ನಿರ್ಮಲಾ ಬಿರಸಲ ಅವರ ವಂದಾನಾರ್ಪಣೆಯೊAದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.