ಗದಗ: ಅಂದರೆ ಶಿಕ್ಷಣ ನೀಡಿ ಅವರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟ ಕೀರ್ತಿ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸಲ್ಲುತ್ತದೆ ಎಂದು ಪ್ರಾಚಾರ್ಯ ಗಂಗಾಧರ್ ಹಿಡ್ಕಿಮಠ ಅವರು ಹೇಳಿದರು. ಡಾ ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡಾ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಅಂದ ಅನಾಥ ಮಕ್ಕಳ ಆಶ್ರಯ ತಾಣ ವೀರೇಶ್ವರ ಪುಣ್ಯಾಶ್ರಮವಾಗಿದೆ ಎಂದ ಅವರು ಹಾನಗಲ್ಲ ಗುರು ಕುಮಾರೇಶ್ವರರು, ಪಂಡಿತ್ ಪಂಚಾಕ್ಷರ ಗವಾಯಿಗಳವರು, ಡಾ. ಪುಟ್ಟರಾಜ ಕವಿ ಗವಾಯಿಗಳವರು ಈ ಪುಣ್ಯ ಭೂಮಿಯಲ್ಲಿ ಜನಿಸಿ ಸಮಾಜವನ್ನು ಉದ್ದರಿಸಿದ್ದಾರೆ ಎಂದು ಅವರು ಹೇಳಿದರು.