Gadag: ನಶಾ ಮುಕ್ತ ಭಾರತ ಅಭಿಯಾನ ಇವರ ಸಹಯೋಗದಲ್ಲಿ "ಆಶಾಕಿರಣ ಫೌಂಡೇಶನ್(ರಿ)" ಆಶಾಕಿರಣ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ(ರಿ)", ಗದಗ.ನಲ್ಲಿ ದಿನಾಂಕ 02/10/2025 ರಂದು 156ನೇ ಗಾಂಧೀಜಯಂತಿ ಹಾಗೂ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜಯಂತೋತ್ಸವ ವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಬಾಲಚಂದ್ರ ದೊಡ್ಡಮನಿ ನಿವೃತ್ತ DYSP ರವರು ವಜಿಸಿದ್ದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಡಾ. ಅವರೆಡ್ಡಿ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಗದಗ.ಮತ್ತು ಶ್ರೀಯುತ ಶೇಖರ್ ಕವಳೆಕಾಯಿ, ವರ್ತಕರು ಹಾಗೂ ಆಶಾಕಿರಣ ಫೌಂಡೇಶನನ ಉಪಾಧ್ಯಕ್ಷರು, ಮತ್ತು ಶ್ರೀಯುತ ಮುಂಬರೆಡ್ಡಿ ಗುತ್ತಿಗೆದಾರರು & ಆಶಾಕಿರಣ ಫೌಂಡೇಶನ್ ನ ಕಾರ್ಯದರ್ಶಿಗಳಾದ ಶ್ರೀಯುತ ಶಿವಪ್ರಸಾದ್ ದೊಡ್ಡಮನಿ ಯವರು ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ಗಿಡಕ್ಕೆ ನೀರು ಹಾಕುವ ಮೂಲಕ ಆರಂಭ ಮಾಡಲಾಯಿತು ನಂತರ ಡಾ. ಅವರೆಡ್ಡಿರವರು ಮಾದಕವ್ಯಸನದ ಕುರಿತು ಧೈಹಿಕ ಮತ್ತು ಮಾನಸಿಕ ತೊಂದರೆ ಹಾಗೂ ಅದಕ್ಕೆ ಇರುವಂಥಹ ಚಿಕಿತ್ಸೆ ನಮ್ಮ ಆಶಾಕಿರಣ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಶ್ಲಾಘ ನೆ ಮಾಡಿದರು, ನಂತರ ಶ್ರೀ ಮುಂಬರೆಡ್ಡಿ ಯವರು ಮಾತಾಡಿ ನಶಾ ಮುಕ್ತ ಭಾರತದ ಕನಸು ನನಸಾಗಬೇಕೆಂದು ಮಾಹಿತಿ ತಿಳಿಸಿದರು, ಶ್ರೀ ಶೇಖರ್ ಕವಳಿಕಾಯಿ ಮಾತಾಡಿ ನಮ್ಮ ಆಶಾಕಿರಣ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರದ ಚಟುವಟಿಕೆಯ ಭಾಗವಾದ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯ, ಯೋಗ, ಪಾರ್ಥನೆ ಮತ್ತು ಧ್ಯಾನದ, ಪಾಠಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು, ನಂತರ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಬಾಲಚಂದ್ರ ದೊಡ್ಡಮನಿ ಯವರು ಮಾತಾಡಿ ಮಹಾತ್ಮ ಗಾಂಧೀಜಿ ಯವರು ಕಂಡಂತ ನಶಾ ಮುಕ್ತ ಭಾರತ ನಿರ್ಮಾಣ ಮಾಡೋಣ ಹಾಗೂ ಸಂಸ್ಥೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು ಹಾಗೂ ಚಿಕಿತ್ಸಾರ್ಥಿಗಳಿಗೆ ಉತ್ತಮ ಜೀವನ ನಿರ್ಮಾಣ ಮಾಡಿಕೊಳ್ಳುವ ನೈತಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಕುರಿತು ಮಾಹಿತಿಯನ್ನು ನೀಡಿದರು. ನಂತರ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಶಿವಪ್ರಸಾದ್ ದೊಡ್ಡಮನಿ ಯವರು ನಶಾ ಮುಕ್ತ ಭಾರತ ಅಭಿಯಾನದ "ಪ್ರತಿಜ್ನ್ಯಾ ವಿಧಿ" ಯನ್ನು ಕಾರ್ಯಕ್ರಮದಲ್ಲಿ ಚಿಕಿತ್ಸರ್ಥಿಗಳಿಗೆ ಭೋದನೆ ಮಾಡಿದರು,ಕಾರ್ಯಕ್ರದಲ್ಲಿ ಚಿಕಿತ್ಸಾ ರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರಿಗೂ ಆಶಾಕಿರಣ ಫೌಂಡೇಶನ್ ಸಂಸ್ಥೆಯ ವತಿಯಿಂದ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕಿತ್ಸಾರ್ಥಿಗಳಿಗೆ ಸಿಹಿ ಹಂಚಿ,ಆಶಾಕಿರಣ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಮಾಡಲಾಯಿತು.