ಗದಗ : ನಗರದ ಕಳಸಾಪುರ ರಸ್ತೆಯ ಶಿವಾನಂದ ನಗರದ ಬನ್ನಿಕಟ್ಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡುವುದರೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಪ್ರತಿವರ್ಷ ಶ್ರಾವಣ ಮಾಸದ ಮೂರನೇ ಸೋಮವಾರದಂದು ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಅದರಂತೆಯೇ ಇಂದು ಶ್ರಾವಣ ಮಾಸದ ಮೂರನೇ ಸೋಮವಾರದಂದು ಅನ್ನ ಸಂತರ್ಪಣೆ ಹಾಗೂ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅನ್ನಸಂಪರ್ಪಣೆಯಲ್ಲಿ ನೂರಾರು ಸಾರ್ವಜನಿಕರು ಆಗಮಿಸಿ ಅನ್ನಸಂಪರ್ಪಣೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಆನೆ ಹೊಸೂರ, ಸರೋಜಾ ತೋಟಿಗೆರ, ಜಯಶ್ರೀ ರಂಗಣ್ಣವರ, ಅನುಪಮಾ ಸುರಗಿಮಠ, ಗೀತಾ ಭಿಕ್ಷಾವತಿಯಮಠ,ಕುಸುಮಾ ಕದಂ ಸಂಗಡಿಗರಿAದ ನಾಗಪ್ಪನ ಅಭಿಷೇಕ ಹಮ್ಮಿಕೊಂಡು ಭಕ್ತಿಯಿಂದ ನೆರವಾರಸಲಾಯಿತು.