ಗದಗ: ವಿಶ್ವ ಕಲ್ಯಾಣ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಗಜೇಂದ್ರಗಡದ ಪಟ್ಟೇದ ಕುಟುಂಬದವರು ಕಲಿಕಾ ಸಾಮಗ್ರಿ, ಸಿಹಿ ಹಾಗೂ ಹಣ್ಣುಗಳನ್ನು ದೇಣಿಗೆ ನೀಡಿದರು.
ಮುಖ್ಯ ಅಥಿತಿಗಳಾಗಿ ಶ್ರೀ ಸುಹಾಸ ಪಟ್ಟೇದವರು ಮಾತನಾಡಿ, ವಿಶೇಷ ಮಕ್ಕಳಿಗೆ ವೈಜ್ಞಾನಿಕವಾಗಿ ತರಬೇತಿ ನೀಡಿ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ. ಇದು ಸಮಾಜಕ್ಕೆ ಅತ್ಯಂತ ಅವಶ್ಯವಾದ ಸೇವಾ ಕಾರ್ಯ. ಇಂದು ಸಾಂಕೇತಿಕವಾಗಿ ಕಲಿಕಾ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದೇವೆ. ಮುಂದೆಯೂ ಕೂಡಾ ಈ ಸೇವಾ ಕಾರ್ಯಕ್ಕೆ ನಾನು ಸಹಾಯ-ಸಹಕಾರ ಮಾಡುತ್ತೇನೆಂದು ಹೇಳಿದರು.
ಅಥಿತಿಗಳಾಗಿ ಶ್ರೀ ಶಶಿಧರ ಎಸ್.ಶಿರೂರವರು ಮಾತನಾಡಿ, ದೇವರು ಯಾವ ದೇವಸ್ಥಾನ ಇಲ್ಲಾ ಇಲ್ಲಿಯೇ ಇದ್ದಾನೆ, ಇಂತಹ ಮಕ್ಕಳಲ್ಲಿರುವ ಸೂಪ್ತವಾದ ಕೌಶಲ್ಯವನ್ನು ಹೊರಹೊಮ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಶರಣ ಸಂತರು ಮೆಚ್ಚುವಂತಹ ಸೇವಾ ಕಾರ್ಯವಾಗಿದೆ. ಇಂತಹ ಮಕ್ಕಳಿಗೆ ಸೇವೆ ಮಾಡುತ್ತಿರುವ ಈ ಸಂಸ್ಥೆಗೆ ಮೊದಲ ಆಧ್ಯತೆಯಾಗಿ ಸಹಾಯ ಸಹಕಾರ ಮಾಡಬೇಕೆಂದು ಕರೆ ನೀಡಿ, ಹೇಳಿ, ನಾನು ಈ ಸೇವಾ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರು ವಹಿಸಿ ಮಾತನಾಡಿ, ಇಲ್ಲಿ ಎಲ್ಲ ಸಮುದಾಯ ಹಾಗೂ ಎಲ್ಲ ಕೋಮಿನ ಮಕ್ಕಳಿಗೆ ನಿಸ್ವಾರ್ಥದಿಂದ ಸೇವಾ ಕಾರ್ಯ ನಡೆಯುತ್ತಿದೆ. ಈ ಮಕ್ಕಳು ಭಗವಂತನ ಪ್ರತಿ ರೂಪವೇ ಇವರಿಗೆ ಈಡೀ ಸಮಾಜವೇ ತಂದೆ-ತಾಯಿ ಸ್ಥಾನದಲ್ಲಿ ನಿಂತು ಸಹಾಯ ಸಹಕಾರ ನೀಡಬೇಕು. ಈ ಮಕ್ಕಳೊಂದಿಗೆ ಕು. ಪ್ರಾಚಿ ಪಟ್ಟೇದವರು ಬೆರೆತು ಇವರು ನಮ್ಮಂತೆ ಎಂಬ ಭಾವನೆಯೊಂದಿಗೆ ಸಮನ್ವಯತೆಯ ಬೆಳಕು ಮೂಡಿಸಿದ್ದಾರೆ. ಅನುಕಂಪ ತೊರಿಸದೇ ಇವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟೇದ ಕುಟುಂಬಸ್ಥರು ವಿಶೇಷ ಮಕ್ಕಳಿಗೆ ಕಲಿಕಾ ಸಾಮಗ್ರಿ, ಸಿಹಿ ಹಾಗೂ ಹಣ್ಣುಗಳನ್ನು ಹಂಚಿದರು. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಎಮ್‌ಎಸ್‌ಡಬ್ಲö್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಬಸವರಾಜ ಗಾಡಿವಡ್ಡರ, ಮಧು ಬನ್ನಿಕೊಪ್ಪ, ಶಾಂತಮ್ಮಾ ಹೂಗಾರ ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು,