ಜಿಲ್ಲೆ

ಹಿಂದುಳಿದ ಜನರಿಗೆ ಆಹಾರ ಸಾಮಾಗ್ರಿ ಮತ್ತು ಸೀರೆ ವಿತರಣೆ

ಗದಗ: ನಗರದ ವಿಠಲಾರೂಢ ಸಮುದಾಯ ಭವನದಲ್ಲಿ ಸೆ.೨೩ ರಂದು ಸಾಯಂಕಾಲ ೫ಕ್ಕೆ ಜಿಲ್ಲಾ ಸಹಸ್ರಾರ್ಜುನ ಸೇವಾ ಟ್ರಸ್ಟ್ನಿಂದ ದಸರಾ ಹಬ್ಬದ ಅಂಗವಾಗಿ ಎಸ್‌ಎಸ್‌ಕೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆಹಾರ ಸಾಮಾಗ್ರಿ ಮತ್ತು ಸೀರೆ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಸ್ರಾರ್ಜುನ್ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ ಭಾಂಡಗೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೭ ವರ್ಷದಿಂದ ಆರಂಭವಾದ ಸೇವೆ ಪ್ರಸಕ್ತ ವರ್ಷದಿಂದ ಗದಗ-ಬೆಟಗೇರಿ ಅವಳಿ ನಗರದ ೭೦೦-೮೦೦ ಕುಟುಂಬಕ್ಕೆ ಆಹಾರ ಸಾಮಾಗ್ರಿ ಮತ್ತು ಸೀರೆ ವಿತರಣೆ ಮಾಡಲಾಗುತ್ತದೆ. ಒಂದು ಸುಮಾರು ಒಂದು ಸಾವಿರ ರೂಪಾಯಿ ವೆಚ್ಚದಲ್ಲಿ ಇರುತ್ತದೆ. ಟ್ರಸ್ಟ್ ಸಹಯೋಗದಲ್ಲಿ ವಿವಿಧ ಸಾಮಾಜಿಕ ಸೇವೆ ಮಾಡಲಾಗುತ್ತದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಸಹಸ್ರಾರ್ಜುನ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ ಭಾಂಡಗೆ ವಹಿಸುವರು. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಡಾ.ಶಶಿಕುಮಾರ ಮೇರವಾಡ, ಮಾಜಿ ಶಾಸಕ ಡಿ.ಆರ್.ಪಾಟೀಲ, ಪಿ.ಎಲ್.ಬುರಬುರೆ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಎಸ್.ಎಚ್.ಶಿವನಗೌಡ್ರ, ಪ್ರಕಾಶ ಬಾಕಳೆ, ಆಂಜನೇಯ ಕಟಗಿ, ಡಾ.ವೈ.ಎಸ್. ರಾಯಬಾಗಿ ಭಾಗವಹಿಸುವರು ಎಂದರು.
ಸಹಸ್ರಾರ್ಜುನ ಪ್ರಶಸ್ತಿ:
ಎಸ್‌ಎಸ್‌ಕೆ ಸಮಾಜಕ್ಕೆ ಸಲ್ಲಿಸಿದ ವಿಶಿಷ್ಠ ಸೇವೆಯನ್ನು ಪರಿಗಣಿಸಿ ಸಹಸ್ರಾರ್ಜುನ ಶ್ರೀ ಪ್ರಶಸ್ತಿ ಹೊಸಪೇಟೆ ವೆಂಕಟೇಶ ಜಡಿ ಅವರಿಗೆ
ನೀಡಲಾಗುತ್ತಿದೆ. ನಿಮಿಶಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಅವರಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಂಬಾಸಾ ಪವಾರ, ಪರಶುರಾಮ ಹಬೀಬ, ವಿನಾಯಕ ಶಿದ್ಲಿಂಗ್, ಸಂತೋಷ ಭಾಂಡಗೆ, ವೆಂಕಟೇಶ ಕಾಟೀಗರ, ಶ್ರೀನಿವಾಸ ಭಾಂಡಗೆ, ಚೇತನ ಬಾಕಳೆ, ವಿನೋದ ಭಾಂಡಗೆ, ಷಣ್ಮುಖಸಾ ಬಸವಾ ಸೇರಿದಂತೆ ಇತರರು ಇದ್ದರು.