ಜಿಲ್ಲೆ

ಪ್ರಕಲ್ಪ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಪಾಲಕರ ಸಭೆʼʼ

Gadag - Shivanand Hiremath
Gadag:  ಪ್ರಕಲ್ಪ ಶಿಕ್ಷಣ ಸಂಸ್ಥೆ (ರಿ) ಯ ಪ್ರಾಥಮಿಕ ಹಾಗೂ ಹಿರಿಯ  ಪ್ರಾಥಮಿಕ  ಆಂಗ್ಲ ಮಾಧ್ಯಮ ಶಾಲೆ, ಗದಗ “ ಮಕ್ಕಳ ಕುರಿತು ಪಾಲಕರ ಸಭೆ ”ಯನ್ನು ಹಮ್ಮಿಕೊಳ್ಳಲಾಗಿತು.
            ಈ ಪಾಲಕರರ ಸಭೆಯಲ್ಲಿ ಶ್ರೀ ಎಸ್.‌ ವಿ. ಹುಬ್ಬಳ್ಳಿ  ಅಧ್ಯಕ್ಷರಾಗಿ, ಶ್ರೀಮತಿ ಎಸ್‌.ಎಸ್.ಹುಬ್ಬಳ್ಳಿ ಹಾಗೂ ಕಾರ್ಯದರ್ಶಿಗಳಾದ ಪಿ.ಎಸ್‌.ಹುಬ್ಬಳ್ಳಿ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಮ್.ಎಮ್‌.ಡಂಬಳ, ಸಹ-ಗುರುವೃಂದದವರು ಹಾಗೂ ಪಾಲಕರಾದ ಇಲಿಯಾಸ್‌ ತೋಪಿವಾಲೆ, ಗೋವಿಂದರಾಜ್‌ ಪವಾರ, ಮುರಗೇಶ ರೇವಡಿ, ಶಿವಾನಂದ ಹೊನ್ನಿಕೇರಿ ಇತರೆ ಪಾಲಕರು ಪ್ರಮುಖ ಪಾತ್ರವಹಿಸಿದ್ದರು.
                   ನಮ್ಮ ಶಾಲೆಯ ಸಹಶಿಕ್ಷಕಿರಾದ ವಿ.ಕೆ.ಮಲ್ಲಾಪುರ ಕಾರ್ಯಕ್ರಮವನ್ನು ನಿರೂಪಿಸಿದರು ನಂತರ ಈ ಕಾರ್ಯವನ್ನು ಉದ್ದೇಶಿಸಿ ಅಧ್ಯಕ್ಷರಾದ ಶ್ರೀ ಎಸ್.‌ವಿ.ಹುಬ್ಬಳ್ಳಿರವರು ಬೆಳೆಯುವ ಸಿರಿ ಮೊಳೆಕೆಯಲ್ಲಿ ಕಾಣು ಎಂಬಂತೆ  ಮಕ್ಕಳು ಸಸಿಗಳಂತೆ ಆ ಸಸಿಗಳಿಗೆ ನೀರು ಮತ್ತು ಬೆಳಕು ಕೊಡುವ ಕೆಲಸವನ್ನು ಶಿಕ್ಷಕರು ಮಾಡಿದರೆ, ಗೊಬ್ಬರ ಹಾಕಿ ಅದನ್ನು ಕಾಪಾಡುವ ಕೆಲಸ ಪಾಲಕರು ಮಾಡುವುದು ಅತ್ಯಗತ್ಯ… ಎಂಬುದನ್ನು ಅವರ ಮಾತುಗಳ ಮೂಲಕ ತಿಳಿಸಿದ್ದರು.
               ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಕಾರ್ಯದರ್ಶಿಗಳಾದ  ಪಿ.ಎಸ್.ಹುಬ್ಬಳ್ಳಿರವರು  ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜೊತೆಗೆ, ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಮತ್ತು  ಮಕ್ಕಳಿಗೆ ಇರುವ ಸಮಸ್ಯೆಗಳನ್ನು ನಾವೆಲ್ಲರೂ ತಿಳಿದುಕೊಂಡು ಪರಿಹರಿಸೋಣ  ಎಂದು ತಿಳಿಸಿದರು.
                       ಇತಿಹಾಸ ಓದುವಂತಹ ವ್ಯಕ್ತಿಗಳಾಗಬೇಡಿ ಇತಿಹಾಸ ನಿರ್ಮಿಸುವಂಥ ವ್ಯಕ್ತಿಗಳಾಗಿ…….. ಎಂಬ ನಾಣ್ಣುಡಿಯಂತೆ  ಶಾಲಾ ಶಿಕ್ಷಕವೃಂದದವರು, ಪಾಲಕರು ಸಭೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ.