ಜಿಲ್ಲೆ

ಜಮೀರ ಕೈ ಬಿಡದಿದ್ದರೆ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ: ಎಂ. ಎಂ. ಹಿರೇಮಠ

Gadag - Shivanand Hiremath

ಗದಗ: ರಾಜ್ಯ ಕಾಂಗ್ರೆಸ್​ ಸರ್ಕಾರದ ವಕ್ಫ ಖಾತೆ ಸಚಿವ ಜಮೀರ್​ ಅಹ್ಮದರವರನ್ನು ಸಂಪುಟದಿಂದ ಕೈಬಿಡದಿದ್ದರೆ ಕಾಂಗ್ರೆಸ್​ ಪಕ್ಕೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ. ಎಂ. ಹಿರೇಮಠ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಚಿವ ಜಮ್ಮೀರ ಅಹಮ್ಮದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಜಿಲ್ಲಾಧಿಕಾರಿಗಳು ಹಾಗು ತಹಸೀಲ್ದಾರ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೇಶಕ್ಕೆ ಅನ್ನ ನೀಡುವ ರೈತರ ಜಮೀನಿನ ಪಹಣಿಯಲ್ಲಿ ವಕ್ಫ ಆಸ್ತಿ ಎಂದು ನಮೂದು ಮಾಡಲು ಬಹಳಷ್ಟು ಕುಮ್ಮಕ್ಕು ನೀಡಿದ್ದಾರೆ. ಅಲ್ಲದೆ ಮಠ, ಮಾನ್ಯಗಳು ದೇವಸ್ಥಾನ ಸ್ಮ್ಮಶಾನದ ಆಸ್ತಿಗಳ ಮೇಲೂ ವಕ್ಫ ಎಂದು ಹೆಸರನ್ನು ಕೂಡಿಸಿ ಸಾವಿರಾರು ಎಕರೆ ರೈತರ ಜಮೀನುಗಳನ್ನು ವಕ್ಫ ಹೆಸರಿನಲ್ಲಿ ಲೂಟಿ ಮಾಡಲು ಹೊರಟಿರುವ ಸಚಿವ ಜಮೀರ ಅಹ್ಮದ ಖಾನ್​ರವರು ರಾಜ್ಯದಲ್ಲಿ ಅರಾಜುಕತೆಯನ್ನು ಎಬ್ಬಿಸಿದ್ದಾರೆ. ಅಂತಹ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.