Gadag: ಪ್ರಕಲ್ಪ ಶಿಕ್ಷಣ ಸಂಸ್ಥೆ (ರಿ) ಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಗದಗ ದಿನಾಂಕ:-22/11/2024 ಶುಕ್ರವಾರ ದಂದು “ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದೀಕ್ಷಾ ಸಮಾರಂಭ” ಆಚರಿಸಲಾಯಿತು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದೀಕ್ಷಾ ಸಮಾರಂಭದಲ್ಲಿ ಶ್ರೀ ಎಸ್. ವಿ. ಹುಬ್ಬಳ್ಳಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಶ್ರೀಮತಿ ಎಸ್.ಎಸ್.ಹುಬ್ಬಳ್ಳಿ ಹಾಗೂ ಕಾರ್ಯದರ್ಶಿಗಳಾದ ಪಿ.ಎಸ್.ಹುಬ್ಬಳ್ಳಿ ಮಾರ್ಗದರ್ಶಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಎ.ಎಸ್.ಶಿವಕುಮಾರ, ಎ.ಎಸ್.ಓ.ಸಿ.ಭಾ. ಸ್ಕೌ. ಗೈ. ಕರ್ನಾಟಕ ಜಿಲ್ಲಾ ಸಂಸ್ಥೆ ಗದಗ . ಶ್ರೀಮತಿ ಗೀತಾ ದೇವಾಂಗಮಠ ಎಚ್.ಡಬ್ಯು.ಬಿ. ಗೈಡ್ಸ್ ವಿಭಾಗ, ಗದಗ. ಶ್ರೀಮತಿ ಭಾರತಿ ಎಸ್.ಪವಾರ ಗದಗ ಶಹರ ವಲಯದ ಎಲ್.ಟಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಮ್.ಎಮ್.ಡಂಬಳ, ನಮ್ಮ ಶಾಲೆಯ ಗೈಡ್ಸ್ ವಿಭಾಗದ ನಾಯಕಿ ಶ್ರೀಮತಿ ಪುಷ್ಪಾ ಪಿ. ಮೇಗೇರಿ, ಸಹ-ಗುರುವೃಂದದವರು ಹಾಗೂ ಮುದ್ದು ಮಕ್ಕಳು ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದೀಕ್ಷಾ ಸಮಾರಂಭದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಕಾರ್ಯವನ್ನು ಉದ್ದೇಶಿಸಿ ಶ್ರೀ ಎ.ಎಸ್.ಶಿವಕುಮಾರ, ಎ.ಎಸ್.ಓ.ಸಿ.ಭಾ. ಸ್ಕೌ. ಗೈ. ಕರ್ನಾಟಕ ಜಿಲ್ಲಾ ಸಂಸ್ಥೆ ಗದಗ. ಇವರು “ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಮಕ್ಕಳ ಸ್ವಯಂಪ್ರೇರಿತ ಶೈಕ್ಷಣಿಕ ಆಂದೋಲನವಾಗಿದೆ, ಜನಾಂಗ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ. ಆತ್ಮವಿಶ್ವಾಸ, ಶಿಸ್ತು, ದೈಹಿಕ, ಬೌದ್ದಿಕ, ಭಾವನಾತ್ಮಕ, ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರಾಗುವಲ್ಲಿ ಪ್ರಮುಖ ಪಾತ್ರವಹಿಸಿದೆ ಹಾಗೂ ಪ್ರಗತಿಶೀಲ ಸ್ವ-ಶಿಕ್ಷಣದ ವ್ಯವಸ್ಥೆಯಾಗಿದೆʼʼ ಎಂದು ತಮ್ಮ ಮಾತುಗಳ ಮೂಲಕ ತಿಳಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಎಸ್. ವಿ. ಹುಬ್ಬಳ್ಳಿ ಸರ್ ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜೊತೆಗೆ, ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೆಪಿಸಲಿರುವ ಕಾರ್ಯಕ್ರಮವೇ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯ ಮೂಲೋದ್ದೇಶ ಎಂದು ತಿಳಿಸಿದರು.
“ಪಸರಿಸಲಿ ತರಂಗದ ಕಾಂತಿ ಎಲ್ಲೆಡೆ ತೊಲಗಲಿ, ಅಶಾಂತಿಯ ಅಂಧಕಾರ ಎಂದಿಗೂ ಕೇಳಲಿ, ನಮ್ಮ ಎದೆಯಲಿ ಜನಗಣಮನ ಗೀತೆಯ ಝೇಂಕಾರ, ಸ್ವಾಭಿಮಾನ ಮೆರೆದ ನೆಲದಲ್ಲಿ ನಿಂತು ಹೇಳಿ ಆಗಲಿದೆ ಭಾರತ ಆತ್ಮ ನಿರ್ಭರ.. ʼʼ ಎಂಬ ನಾಣ್ಣುಡಿಯಂತೆ ಶಾಲಾ ಶಿಕ್ಷಕವೃಂದ ಹಾಗೂ ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.