ಜಿಲ್ಲೆ

ಸಂಗೀತಗಾರರು ಸಂಗೀತದ ಟೆಕ್ನಿಕ್  ಬಗ್ಗೆ ಗಮನಹರಿಸಲು ಸಲಹೆ: ಉಸ್ತಾದ್ ರಯಿಸ್ ಖಾನ್

Gadag - Shivanand Hiremath

ಗದಗ: ಸಂಗೀತ ಒಂದು ಪ್ರದರ್ಶನ ಕಲೆಯಾಗಿದ್ದು ಸಂಗೀತಗಾರರು ಸಂಗೀತದ ಟೆಕ್ನಿಕ್ ಬಗ್ಗೆ ಗಮನ ಹರಿಸಬೇಕು ಎಂದು ಪುಣೆಯ ಖ್ಯಾತ ಸಿತಾರವಾದಕ ಉಸ್ತಾದ್ ರಯಿಸ್ ಖಾನ್  ಅವರು ಹೇಳಿದರು. ಡಾ ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಗೀತ   ಕಾರ್ಯಕ್ರಮದಲ್ಲಿ ಸನ್ಮಾನಗೊಂಡು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಸಂಗೀತಗಾರರು ಎಷ್ಟು ತಾಸು ಹಾಡಬೇಕು ಏನನ್ನು ಕೇಳಬೇಕು   ಎಂಬುವುದನ್ನು ಅರಿತು ಗುರುಗಳ ಬಗ್ಗೆ ಅಪಾರ ಪ್ರೀತಿ ಅಭಿಮಾನ ಇಟ್ಟುಕೊಂಡು ಸಂಗೀತ ಕಲಿಯಬೇಕೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಖ್ಯಾತ ಸಿತಾರವಾದಕ  ಪಂಡಿತ ರಾಜು ಹಿರೇಮಠ ಅವರು ಮಾತನಾಡಿ ಉಸ್ತಾದ್ ರಯಿಸ ಖಾನ್  ಅವರು ಸಂಗೀತ ಕುಟುಂಬದಿಂದ ಬಂದವರಾಗಿದ್ದು ಅವರಿಗೆ ಸಂಗೀತ ರಕ್ತಗತವಾಗಿ ಬಂದಿದೆ ಎಂದು ಅವರು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ವಿ ಎಂ ಗುರುಮಠ ಅವರು ಮಾತನಾಡಿ ಉಸ್ತಾದ್ ರಯಿಸ್ ಖಾನ್ ಅವರು ಮಹಾವಿದ್ಯಾಲಯಕ್ಕೆ ಭೇಟಿಕೊಟ್ಟು ಸಂಗೀತದ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆಯನ್ನು ಪಡೆದು ವಿದ್ಯಾರ್ಥಿಗಳಿಗೆ ಸಂಗೀತದ ಬಗ್ಗೆ  ಸಲಹೆ ಸೂಚನೆಯನ್ನು ನೀಡಿರುವುದು ಉಸ್ತಾದ್  ರಯಿಸ್  ಖಾನ್ ಅವರ ಸರಳತೆಯ ಗುಣ  ಅನುಕರಣಿಯವಾಗಿರುವ ಅಂತ ಎಂದು ಅವರು ಹೇಳಿದರು.
 ವೇದಿಕೆ ಮೇಲೆ  ಖ್ಯಾತ ವೈದ್ಯರಾದ  ಡಾ. ದೇಸಾಯಿ, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ ,  ರಾಹುಲ್ ರಾಥೋಡ್,  ವಾ ಯಾರ್ ಮೂಲಿಮನಿ, ಡಾ.  ಕೊಡಗಾನೂರ ಹನುಮಂತ್  ಉಪಸ್ಥಿತರಿದ್ದು  ಶರಣಪ್ಪ ಕಲ್ಬುರ್ಗಿ  ಅವರು ತಬಲಾ ಸಾತಿ ನೀಡಿದರು ಕಾರ್ಯಕ್ರಮವನ್ನು ಡಾ. ಎಸ್‌ ಎಸ್ ಗಡ್ಡದ್ಮಠ ನಡೆಸಿ ಕೊನೆಗೆ ವಂದಿಸಿದರು.