ಜಿಲ್ಲೆ

ನಾಡಿನ ಸಾಂಸ್ಕೃತಿಕ ಲೋಕಕ್ಕೆ ಗದುಗಿನ ಕೊಡುಗೆ ಅಮೋಘ: ಡಾ.  ರಾಜೇಂದ್ರ ಗಡಾದ

Gadag - Shivanand Hiremath
ಗದಗ: ಸಂಗೀತ ಸಾಹಿತ್ಯ ಕಲೆಗೆ ಗದಗು ಹೆಸರುವಾಸಿಯಾಗಿದ್ದು ನಾಡಿನ ಸಾಂಸ್ಕೃತಿಕ  ಲೋಕಕ್ಕೆ ಗದುಗಿನ ಕಡೆಗೆ ಅಮೋಘ ಎಂದು ಗದಗ್ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಅವರು ಹೇಳಿದರು.
 ಡಾ ಪಿಜಿಎಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತ್ತರ ಕೇಂದ್ರದ 2024- 25 ನೇ ಸಾಲಿನ  ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಹಿಂದುಸ್ತಾನಿ ಸಂಗೀತ ಹಾಗೂ ಕಲೆ ಸಾಂಸ್ಕೃತಿಗೆ ಗದಗ್ ಹೆಸರುವಾಸಿಯಾದ ಸ್ಥಳವಾಗಿದ್ದು ಸಂಗೀತ ಲೋಕದ ಧ್ರುವತಾರೆ ಪಂಡಿತ್ ಪಂಚಾಕ್ಷರ ಗವಾಯಿಗಳವರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಭಾರತ ರತ್ನ ಪಂಡಿತ್ ಭೀಮ್ಸೇನ್  ಜೋಶಿಯವರು ಕ್ರಿಕೆಟ್ ದಿಗ್ಗಜ  ಸುನಿಲ್ ಜೋಶಿ ಅವರು ಪುಸ್ತಕದ ಸ್ವಾಮೀಜಿ  ಎಂದು ಹೆಸರುವಾಸಿಯಾದ ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳು  ಈ ನಾಡನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಅವರು ಹೇಳಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಜಿ ಟಿ ಹಿಡಿಕಿಮಠ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಹಾವಿದ್ಯಾಲಯಕ್ಕೆ ಪ್ರತಿವರ್ಷ  ವಾರ್ಷಿಕ ಪರೀಕ್ಷೆಯಲ್ಲಿ ಸುವರ್ಣ ಪದಕ   ತರುತ್ತಿದ್ದು   ಈ ವರ್ಷ ಎಲ್ಲರೂ  ಶ್ರಮವಹಿಸಿ ಅಭ್ಯಾಸ ಮಾಡಿ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕೆಂದು ಹೇಳಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಕ್ಯಾತ  ಸಂಗೀತಗಾರರಾದ ವಿದುಷಿ ಉಷಾ ಕಾರಂತ್ ಅವರು ಭಕ್ತಿ ಗೀತೆ ಭಾವಗೀತೆ ವಚನ ಗಾಯನವನ್ನು ಸುಸ್ರಾಯವಾಗಿ ಹಾಡಿ ಜನಮನ ರಂಜಿಸಿದರು ಇವರಿಗೆ ಹಾರ್ಮೋನಿಯಂ ಸಾಥ್ ಪಿಎಂ ಪಟ್ಟದಕಲ್ ಅವರು ನೀಡಿದರೆ ತಬಲಾಸಾತಿಯನ್ನು ವಾ ಆರ್ ಮೂಲಿ ಮನೆಯವರು ನೀಡಿದರು.
 ಇದೇ ಸಂದರ್ಭದಲ್ಲಿ ಕ್ಯಾತ ಸಂಗೀತಗಾರರಾದ ಉಷಾ ಕಾರಂತ್, ಡಾ. ರಾಜೇಂದ್ರ ಗಡಾದ್ ಹಾಗೂ ಮಹಾವಿದ್ಯಾಲಯದ ಬೋಧಕ್ಕೆ ತರ   ಸಿಬ್ಬಂದಿಯವರಾದ  ಕುಮಾರ್ ಮುತ್ತಿನಪೆಂಡಿಮಠ, ಎಸ್‌ ಡಿ ಕಾಡನ್ನವರ್, ಪಂಚಾಕ್ಷರ ಹಿಡಿಕಿಮಠ ಹಾಗೂ ಮಂಜುನಾಥ್ ಎಮ್ಮಿ ಅವರನ್ನು ಸನ್ಮಾನಿಸಲಾಯಿತು.
 ವೇದಿಕೆ ಮೇಲೆ ಶಿವರುದ್ರಪ್ಪ ಇಟಗಿ, ಒಕ್ಕೂಟದ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಹೆಗಡೆ, ವಿದ್ಯಾರ್ಥಿಗಳ ಪ್ರತಿನಿಧಿಯಾದ ಕುಮಾರಿ ಶೃತಿ ಪವನ್ ಹಾಗೂ ಸಂಜೆ ಅಕ್ಕಸಾಲಿ ಉಪಸ್ಥಿತರಿದ್ದರು.
 ಪ್ರಾರಂಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು
 ಐಕ್ಯೂಎಸ್ಇ ಕೋರ್ಡಿನೇಟರ್ ಆದ ಡಾ ಎನ ವಿ ಅಕ್ಕಸಾಲಿ ಅವರು ಅತಿಥಿಗಳನ್ನು ಪರಿಚಯಿಸಿದರು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಎಸ್ ಎಸ್ ಗಡ್ಡದ್ಮಠ ಅವರು ಸರ್ವರನ್ನು ಸ್ವಾಗತಿಸಿದರು, ತಬಲಾ ವಿಭಾಗದ ಮುಖ್ಯಸ್ಥರಾದ ಡಾ ಎಚ ಬಿ ಹೂಗಾರರು ಕಾರ್ಯಕ್ರಮ ನಿರೂಪಣೆ ಮಾಡಿದರು.  ಬಾರಿತೋಷಕ ಸಮಾರಂಭವನ್ನು ಎಫ್ ಬಿ ಅಂಗಡಿ ಹಾಗೂ ಮೃತ್ಯುಂಜಯ ಮಠದ ನಡೆಸಿಕೊಟ್ಟರು.