ಜಿಲ್ಲೆ

ಸಂಗೀತ ಮಹಾವಿದ್ಯಾಲಯದಲ್ಲಿ ಪಂ ರಾಜೀವ ತಾರಾನಾಥ್ ಅವರಿಗೆ ಶ್ರದ್ಧಾಂಜಲಿ

Gadag - Shivanand Hiremath

ಗದಗ: ನಾಡಿನ ಪ್ರಖ್ಯಾತ ವಿಮರ್ಶಕ ಹಾಗೂ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅನನ್ಯ ಎಂದು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ ಅವರು  ಹೇಳಿದರು.

ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ಪಂಡಿತ್ ರಾಜೀವ್ ತಾರಾನಾಥ್ ಅವರ ಹೃದಯ ತಂತಿಯನ್ನು  ಮೀಟುವ ಸಂಗೀತ ಆಳವಾದ ಜ್ಞಾನದಿಂದಾಗಿ ಅವರು ವಿಶ್ವದ ಶ್ರೇಷ್ಠ ಸರೋದವಾದಕರಾಗಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ ಎಂದು   ಹೇಳಿದ ಅವರು ಅನೇಕ ವರ್ಷಗಳ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು ತದನಂತರ ಅವರು ಸಂಗೀತದ ಕಡೆಗೆ ಹೆಚ್ಚು ಗಮನ ಹರಿಸಿ ಸಂಗೀತವನ್ನು ದೇಶವಿದೇಶಗಳೆಲ್ಲ ಸಂಚರಿಸಿ ಸಂಗೀತ ಕಾರ್ಯಕ್ರಮವನ್ನು ನೀಡಿ ಸರೋದ ವಾದನದ ಮುಖಾಂತರ ವಿಶ್ವದಲ್ಲಿ ಹೆಸರುವಾಸಿಯಾದರು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಹುಲ್ ರಾಠೋಡ್, ಯಶೋಧ ಮಾದರ್, ಸುಮತಿ ಮುರುಗೋಡ್, ನಿಕಿತಾ, ಸುರೇಶ್ ಮಡಿವಾಳರ್, ಸಂಗೀತಾ ಡಿ ಎಂ,ರಂಜಿತಾ ಬಡಿಗೇರ್, ವಾಣಿಶ್ರೀ, ವಿಜಯಲಕ್ಷ್ಮಿ ಹಿರೇಮಠ್, ಶೃತಿ ಪವನ್, ವಿಜಯಕುಮಾರ್ ಬೊಶೆಟ್ಟಿ, ಶ್ರೇಯಸ್ ಕೃಷ್ಣಾಪುರ್, ಶ್ರೀ ಶಾಮ್ ರಾವ್ ಫುಲಾರೆ , ವಿ  ಎಂ ಪಟ್ಟದಕಲ್ ,   ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ. ಗಂಗಾಧರ ಹಿಡಿಕಿಮಠ,  ಉಪಸ್ಥಿತರಿದ್ದರು.