ಜಿಲ್ಲೆ

ಮಹಾನ್ "ವ್ಯಕ್ತಿ", "ಸಂಸ್ಥೆ"ಪರಿಚಯಕ್ಕೆ ವಿಶೇಷ  ಚಿತ್ರಾತ್ಮಕ  ಮುದ್ರೆ ಬಿಡುಗಡೆ: ಅಂಚೆ ಅಧೀಕ್ಷಕ ಜಯದೇವ  ಕಡಗಿ

Gadag - Shivanand Hiremath
ಗದಗ: ದೇಶದ ಮಹಾನ ವ್ಯಕ್ತಿ ಮತ್ತು ಸಂಸ್ಥೆ ಪರಿಚಯಿಸಲು ಅಪರೂಪದ ಅವಕಾಶ "ಶಾಶ್ವತ ಚಿತ್ರ ರದ್ದತಿ" ವಿಶೇಷ ಚಿತ್ರಾತ್ಮಕ ಮುದ್ರೆ ಬಿಡುಗಡೆಯಿಂದ ಸಾಧ್ಯವಾಗಲಿದೆ  ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಜಯದೇವ ಕಡಗಿ  ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯು ಗದುಗಿನ ಶ್ರೀ ವೀರನಾರಯಣ ದೇವಾಲಯದಲ್ಲಿ ಮಂಗಳವಾರ ಕರ್ನಾಟಕ ಸಂಭ್ರ‌ಮ-50  ಮಹೋತ್ಸವ ಹಿನ್ನಲೆಯಲ್ಲಿ  ಕುಮಾರವ್ಯಾಸ ಹೆಸರಿನಲ್ಲಿ  "ಶಾಶ್ವತ ಚಿತ್ರ ರದ್ದತಿ"  ಕುಮಾರವ್ಯಾಸರ ವಿಶೇಷ ಚಿತ್ರಾತ್ಮಕ  ಮುದ್ರೆ ಬಿಡುಗಡೆ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ವಿಶೇಷ ವ್ಯಕ್ತಿ  ಮತ್ತು ವಿಶೇಷ ಸಂದರ್ಭದಲ್ಲಿ ಚಿತ್ರಾತ್ಮಕ  ಮುದ್ರೆ  ಲೋಕಾರ್ಪಣೆಯಾಗಿದೆ.ಅಷ್ಟೇ ಅಲ್ಲದೆ, ನಾಡಿನ ಪ್ರಖ್ಯಾತ ಪ್ರವಾಸಿ ತಾಣ ಪರಿಚಯಿಸಲು ಮತ್ತು ಗ್ರಾಹಕರಿಗೆ ತಮ್ಮ ನೆಚ್ಚಿನ ಚಿತ್ರ ಕಳುಹಿಸಲು ಉಪಯೋಗಿಸಬಹುದಾಗಿದೆ. ಇತಂಹ ಮಹತ್ವದ ಕುಮಾರವ್ಯಾಸರ ವಿಶೇಷ
ಚಿತ್ರಾತ್ಮಕ  ಮುದ್ರೆಯಿಂದಾಗಿ ದೇಶದ ಎಲ್ಲೆಡೆ ನಮ್ಮ ನಾಡಿನ ಹೆಮ್ಮೆಯ ಸಾಧಕರ, ಐತಿಹಾಸಿಕ ಮಹತ್ವ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ, ಪ್ರಸಿದ್ಧಿ ಪ್ರಚುರಪಡಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.
ವೀರನಾರಾಯಣ ದೇವಸ್ಥಾನ ಕಮೀಟಿ ಅಧ್ಯಕ್ಷ ಡಾ. ಕುಶಾಲ ಗೋಡ್ಕಂಡಿ ಮಾತನಾಡಿ, ಕರ್ನಾಟಕ ಕಥಾ ಮಂಜರಿಯನ್ನು  ಕುಮಾರವ್ಯಾಸರು ಗದುಗಿನ ವೀರನಾರಾಯಣ ಸನ್ನಿದಿಯಲ್ಲಿ ರಚಿಸಿರುವ ಮತ್ತು ನಮ್ಮ ನಾಡಿಗೆ "ಕರ್ನಾಟಕ " ಎಂದು ನಾಮಕರಣ ಮಾಡಲು ಮೂಲ ಪ್ರೇರಣೆ ಕುಮಾರವ್ಯಾಸರಿಗೆ ಆ ಶ್ರೇಯಸ್ಸು ಸಲ್ಲುತ್ತದೆ.  ಕುಮಾರವ್ಯಾಸರ ಗಮಕ ಸಾಹಿತ್ಯದ ಕೊಡುಗೆ ನಮಗೆ ಹೆಮ್ಮೆಯ ವಿಷಯವಾಗಿತ್ತು. ಇದೀಗ ಈ ಸಾಲಿಗೆ ಕುಮಾರವ್ಯಾಸ "ಶಾಶ್ವತ ಚಿತ್ರ ರದ್ದತಿ" ವಿಶೇಷ ಚಿತ್ತಾತ್ಮಕ ಮುದ್ರೆ ಲೋಕಾರ್ಪಣೆ ನಾಡಿನ ಜನರಿಗೆ ಸಂತಸ ತಂದಿದೆ ಎಂದರು.
ನಾಡಿನ ಎಲ್ಲೆಡೆ ಪ್ರಖ್ಯಾತಿ ಪಡೆದುಕೊಂಡಿರುವ  ಗದುಗಿನ ವೀರನಾರಯಣ ಮತ್ತು ಕುಮಾರವ್ಯಾಸರ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ದೊರಕಲು ಸಹಕಾರಿಯಾಗಿದೆ ಎಂದರು.
ಅಂಚೆ ಚೀಟಿ ಸಂಗ್ರಹಕರಾದ ಎ.ಬೇಲೇರಿ, ಶ್ರೀನಿವಾಸ ದ್ವಾರಪಾಲಕ ಮಾತನಾಡಿದರು. ಅಂಚೆ ಚೀಟಿ ಸಂಗ್ರಹಕ‌ ಸಯ