10 ವರ್ಷ ಕಳೆದರೂ ಮುಗಿಯದ ಯೋಜನೆ
ಕೆಲವರು ವಂತಿಗೆ ಕಟ್ಟಿಲ್ಲ! ಕೆಲವರು ವಂತಿಗೆ ಕಟ್ಟಿದರೂ ಮನೆ ಹಂಚಿಕೆ ಇಲ್ಲ
ಶಿವಾನಂದ ಹಿರೇಮಠ, ಗದಗ
ಸೂರಿಲ್ಲದ ಬಡವರ ಸೂರಾಗಬೇಕಿದ್ದ ಪ್ರಧಾನಮಂತ್ರಿ ಆವಾಸ ಯೋಜನೆ ಎಂಬುದು ಗೊಂದಲ ಗುಡಾಗಿದೆ. ಯೋಜನೆಯಡಿಯಲ್ಲಿ ನಿರ್ಮಾಣ ಆಗಬೇಕಿದ್ದ ನಗರದ 3630 ಮನೆಗಳಲ್ಲಿ ಭಾಗಶಃ ಮನೆಗಳು ರ್ಪೂಣಗೊಂಡಿಲ್ಲ. ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಸ್ಥಗಿತಗೊಂಡ ಮೂಲ ಕಾರಣವೇ ಅರ್ಥವಾಗುತ್ತಿಲ್ಲ. ಕೆಲವರಿಗೆ ಮನೆ ಹಂಚಿಕೆ ಆಗಿದೆ. ಕೆಲವರು ತಮ್ಮ ಪಾಲಿನ ವಂತಿಗೆ ಕಟ್ಟಿದರೂ ಮನೆ ಹಂಚಿಕೆ ಆಗಿಲ್ಲ. ಕೆಲವರು ವಂತಿಗೆ ಕಟ್ಟದಿದ್ದರೂ ಮನೆ ಪಡೆದಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ. ದಶಕ ಕಳೆದರೂ ತೋಜನೆ ತ್ರಿಶಂಕುಸ್ಥಿತಿಯಲ್ಲಿದ್ದು, ಇಂದು, ನಾಳೆ ಮನೆ ಸಿಗುತ್ತದೆ ಎಂಬ ಭರವಸೆಯಲ್ಲಿರುವ ಅರ್ಹ ಲಾನುಭವಿಗಳು ಆಶಾಭಾವನೆಯಲ್ಲೇ ದಿನ ದೂಡುತ್ತಿದ್ದಾರೆ ವಿನಹ ಮನೆ ಮಾತ್ರ ಸಿಗುತ್ತಿಲ್ಲ.
ಏನಿದು ಯೋಜನೆ:
ಮನೆ ಇಲ್ಲದ ಬಡವರಿಗೆ ಮನೆ ಕಲ್ಪಿಸುವ ಉದ್ದೇಶದಿಂದ 2014ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತು. ಯೋಜನೆ ನೀಲನೆ ಸಿದ್ಧಗೊಂಡು 2018ರಲ್ಲಿ ಯೋಜನೆ ಅನುಷ್ಠಾಗೊಂಡಿತು. ನಗರದ ಗಂಗಿಮಡಿ ಬಳಿ ಕಾಮಗಾರಿ ಆರಂಭಗೊಂಡಿದೆ. 3630 ಮನೆಗಳ ನಿರ್ಮಾಣಕ್ಕೆ ಎರಡು ಹಂತದಲ್ಲಿ ಬೆಂಗಳೂರಿನ ಜತ್ನಾ ಕನ್ಸಟ್ರಕ್ಷನ್ ಅವರಿಗೆ ಗುತ್ತಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ 1008 ಮನೆಗಳ ಕಾಮಗಾರಿ ಆರಂಭಿಸಲಾಯಿತು. ಅದರಲ್ಲಿ 250 ಮನೆಗಳು ರ್ಪೂಣಗೊಂಡು ಹಂಚಿಕೆಯೂ ಆಯಿತು. 768 ಮನೆಗಳಿಗೆ ಅಂತಿಮ ಸ್ಪರ್ಷ ನೀಡುವುದು ಬಾಕಿ ಇದೆ. ಯೋಜನೆಯಂತೆ ಈವರೆಗೂ 90 ಕೋಟಿ ರೂ. ಹಣವನ್ನು ಜತ್ನಾ ಕನ್ಸಟ್ರಕ್ಷನ್ ಅವರಿಗೆ ಪಾವತಿಸಲಾಗಿದೆ. ಆದರೆ, ಮೊದಲ ಹಂತದ ಯೋಜನೆಯಲ್ಲಿ 250 ಜನ ಲಾನುಭವಿಗಳು ತಮ್ಮ ಪಾಲಿನ ವಂತಿಗೆ ಕಟ್ಟಿದಿದ್ದರೂ ಮನೆ ಹಂಚಿಕೆ ಮಾಡಲಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಇನ್ನೂ, ಎರಡನೇ ಹಂತದಲ್ಲಿ 2622 ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಸರ್ಕಾರದ ವಂತಿಗೆ ಬಾಕಿ ಮತ್ತು ಪಲಾನುಭವಿಗಳು ವಂತಿಗೆ ಬಾಕಿ ಇದ್ದ ಕಾರಣ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿಲ್ಲ. ಈ ಹಿನ್ನೆಲೆ 2622 ಮನೆಗಳನ್ನು ಬುನಾದಿ ವರೆಗೆ ನಿಮಿಸಿರ್ (ಪ್ಲಿಂತ್ ಲೇವಲ್) ನಿರ್ಮಾಣ ಕಾರ್ಯ ಕೈಬಿಡಲಾಗಿದೆ.
ಸಮಸ್ಯೆ ಏನಾಗಿದೆ:
ಮನೆ ವಿತರಣೆಗೆ ಲಾನುಭವಿ ಆಯ್ಕೆ ಸಂದರ್ಭದಲ್ಲಿ ಕೆಲವರು ಸರ್ಕಾರಕ್ಕೆ ಪಾವತಿಸಬೇಕಿದ್ದ ವಂತಿಗೆ ಹಣ ಕಟ್ಟಿದ್ದಾರೆ. ಇನ್ನೂ ಹಲವರಿಗೆ ವಂತಿಗೆ ಹಣ ಕಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಅಂತವರಿಗೆ ಮನೆ ಹಂಚಿಕೆ ಮಾಡಿ, ಮನೆ ಮೇಲೆ ಬ್ಯಾಂಕ್ ಸಾಲ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ, ತಾಂತ್ರಿಕ ಮತ್ತು ಆಡಳಿತಾತ್ಮಕ ತೊಂದರೆಯಿಂದ ಬ್ಯಾಂಕ್ ಸಾಲ ನೀಡಲು ಹಿಂಜರಿದಿವೆ ಎನ್ನಲಾಗಿದೆ. ಈ ಹಿನ್ನೆಲೆ ವಂತಿಗೆ ಪಾವತಿ ಆಗಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಗ್ರಹಣ ಹಿಡಿದಿದೆ.
ಈಗಾಗಲೇ ಹಂಚಿಕೆ ಆದ ಮನೆಗಳಲ್ಲಿ ಹಲವರು ಮನೆಗಳನ್ನು ಬಾಡಿಗೆ ರೂಪದಲ್ಲಿ ನೀಡಿ ಬೇರೆಡೆ ವಾಸುಸುತ್ತಿದ್ದಾರೆ. ಕೆಲ ಸ್ಥಳಿಯ ಪ್ರಭಾವಿಗಳಿಗೂ ಮನೆ ಹಂಚಿಕೆ ಮಾಡಲಾಗಿದೆ ಎಂಬ ಆರೋಗಳು ಇವೆ. ಇನ್ನೂ ಹಲವರು ಹಣ ಪಾವತಿಸಿದರೂ ಮನೆ ದೊರೆತಿಲ್ಲ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಕೆಲವರಿಗೆ ಮನೆ ಇದ್ದರೂ ಮನೆ ನೀಡಲಾಗಿದೆ ಎಂಬುದನ್ನು ನಗರಸಭೆ ಮೂಲಗಳು ತಿಳಿಸಿವೆ.
ವಂತಿಗೆ ಪಾವತಿ ಹೇಗೆ:
ಪರಿಶಿಷ್ಠ ಜಾತಿ ಮತ್ತು ಪಂಗಡದ ಅರ್ಹ ಲಾನುಭವಿಗೆ ಮನೆ ನಿರ್ಮಾಣದ ಶೇ. 50 ರಷ್ಟು ಸಬ್ಸಿಡಿ ದೊರೆಯಲಿದೆ. ತಮ್ಮ ಪಾಲಿನ 1.20 ಲಕ್ಷ ಹಣ ಪಾವತಿಸಿ ಮನೆ ಪಡೆಯಬಹುದು. ಸಾಮಾನ್ಯ ವರ್ಗದ ಅರ್ಹರು 1.80 ಲಕ್ಷ ಪಾವತಿಸಿ ಮನೆ ಪಡೆಯಬಹುದು. ಸ್ಥಲಿಯ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಲಾನುಭವಿಗಳ ಆಯ್ಕೆ ಜರುಗಲಿದೆ.
ಮುಖ್ಯಾಂಶಗಳು:
* ವಂತಿಗೆ ಕಟ್ಟದಿದ್ದರೂ ಮನೆ ಹಂಚಿಕೆ
* ದಶಕ ಕಳೆದರೂ ಮುಗಿಯದ ಯೋಜನೆ
* ಅರ್ಧಕ್ಕೆ ನಿಂತ 2622 ಮನೆಗಳ ಕಾಮಗಾರಿ
* ಲಾನುಭವಿಗಳ, ಸರ್ಕಾರದ ವಂತಿಗೆ ಪಾವತಿ ಆಗಿಲ್ಲ.
ಕೋಟ್:
ನನಗೀಗ ವರ್ಗಾವಣೆ ಆಗಿದೆ. ಇನ್ನೂ ಅಧಿಕಾರ ಹಸ್ತಾಂತರ ಆಗಿಲ್ಲ. ಕಾಮಗಾರಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರ ಸ್ವೀಕರಿಸಿ, ನಂತರ ಕಾಮಗಾರಿ, ಯೋಜನೆ ಅಭಿವೃದ್ಧಿ ಬಗ್ಗೆ ತಿಳಿದುಕೊಂಡು ಉತ್ತರಿಸುತ್ತೇವೆ.
ರಾಜು ಪವಾರ, ನಿಯೋಜಿತ ಆಯುಕ್ತರು. ನಗರಸಭೆ
ಕೋಟ್:
ಮನೆ ಹಂಚಿಕೆ ವಿಚಾರದಲ್ಲಿ ರಾಜಕಾರಣ ಬೆರೆತಿದೆ. ಸಂರ್ಪೂಣವಾಗಿ ಅರ್ಹರಿಗೆ ಮನೆ ದೊರೆತಿಲ್ಲ. ಆಯ್ಕೆ ಮಟ್ಟಿಯನ್ನು ಕುಲಂಕುಷವಾಗಿ ಪರಿಶೀಲಿಸಿ ಮನೆ ಹಮಚಿಕೆ ಆಗಬೇಕು ಮತ್ತು ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಬೇಕು
ಅನಿಲ ಅಬ್ಬಿಗೇರಿ, ನಗರಸಭೆ ಸದಸ್ಯ