ಗದಗ: ಪಹಲ್ಗಾಮ ಉಗ್ರರ ದಾಳಿಗೆ ಹತ್ಯೆಯಾದವರ ಆತ್ಮಕ್ಕೆ ಶಾಂತಿಗಾಗಿ ಜಿಲ್ಲಾ ಪತ್ರಿಕಾ ವಿತರಕರಿಂದ ಶನಿವಾರ ಬೆಳಗ್ಗೆ ನಗರದಲ್ಲಿ ಕಪ್ಪು ಬಟ್ಟೆ ಧರಿಸಿ ಮೌನಾಚರಣೆ ಮಾಡುವುದರ ಮೂಲಕ ಭಯೋತ್ಪಾದಕರ ದಾಳಿ ಅಟ್ಟಹಾಸ ಮಟ್ಟ ಹಾಕಲು ಕೇಂದ್ರಕ್ಕೆ ಮನವಿ ಮಾಡಲಾಯಿತು.
ಪತ್ರಿಕಾ ವಿತರಕರ ಸಂದ ಅಧ್ಯ ವೀರಯ್ಯ ವಿರಕ್ತಮಠ ಮಾತನಾಡಿ, ಅಮಾಯಕ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿಗೆ ಹತ್ಯೆಯಾದ ಕುಟುಂಬದವರ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ಅಮಾಯಕರ ಹತ್ಯೆಗೆ ಕಾರಣರಾಗಿರುವ ಉಗ್ರಗಾಮಿಗಳಿಗೆ ಕೇಂದ್ರ ಸರ್ಕಾರವು ಕಠಿಣ ಶಿೆ ವಿಧಿಸಲಿ ಎಂದು ಹೇಳಿದರು.
ಪತ್ರಿಕಾ ವಿತರಕರ ೇಮಾಭಿವೃದ್ಧಿ ಸಂದ ರಾಜ್ಯಅಧ್ಯ ಶಂಕರ ಕುದುರಿಮೊತಿ ಮಾತನಾಡಿ, ಉಗ್ರಗಾಮಿಗಳ ದಾಳಿಯನ್ನು ನಮ್ಮ ಸಂದ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪತ್ರಿಕಾ ವಿತರಕರ ಸಂದಿಂದ ಮೇಣದ ಬತ್ತಿಯನ್ನು ಬೆಳಗಿಸುವದರ ಮೂಲಕ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂದ ಎಲ್ಲಾ ಪದಾಧಿಕಾರಿಗಳು, ಪತ್ರಿಕಾ ವಿತರಕರು ಇದ್ದರು.