ಗದಗ: ಆನ್‌ಲೈನ್ ಬೆಟ್ಟಿಂಗ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳಿಂದ ಆಗುತ್ತಿರುವ ಅನಾಹುತಗಳನ್ನು ತಡೆಯುವ ಹಾಗೂ ಆನ್‌ಲೈನ್ ಬೆಟ್ಟಿಂಗ್ ಗೇಮ್ ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ನಮ್ಮ ಕರ್ನಾಟಕ ಸೇನೆ ಗದಗ ಜಿಲ್ಲಾಧ್ಯಕ್ಷರಾದ ಭೀಮಣ್ಣ ಇಂಗಳೆ ಇವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ನಮ್ಮ ಕರ್ನಾಟಕ ಸೇನೆ ಗದಗ ಜಿಲ್ಲಾಧ್ಯಕ್ಷರಾದ ಭೀಮಣ್ಣ ಯ. ಇಂಗಳೆಯವರು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಎಂ. ಬಸವರಾಜ ಪಡಕೋಟಿ ಸುಮಾರು 20 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯಾದ್ಯಂತ ಕಳೆದ ದಿನಗಳಿಂದ ಆನಲೈನ್ ಬೆಟ್ಟಿಂಗ್ ಮತ್ತು ಆನ್‌ಲೈನ್ ಗೇಮ್ ವೆಬ್‌ಸೈಟ್‌ಗಳಿಂದ ಆಗುತ್ತಿರುವ ಅನಾಹುತಗಳಿಂದ ಹಲವಾರು ವಿದ್ಯಾರ್ಥಿಗಳು, ಯುವಕರು ಇದನ್ನೆ ಚಟವಾಗಿಸಿಕೊಂಡಿದ್ದರಿAದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಹಾಗೂ ಹಲವಾರು ಯುವಕರು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಈಗಾಗಲೇ ಸೈಬರ್ ಕ್ರೆöÊಮ್ (ಕಮರ್ಷಿಯಲ್ ಪೊಲೀಸ ಠಾಣೆ) ಠಾಣೆಯಲ್ಲಿ ಅನಿಧಿಕೃತವಾಗಿ ಬೆಟ್ಟಿಂಗ್ ವ್ಯವಸ್ಥೆಯನ್ನು ನಡೆಸುತ್ತಿದ್ದ ಇಬ್ಬರ ಬುಕ್ಕಿಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಇದರ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಹಾಗೂ ಈ ರೀತಿಯಾಗಿ ಮೋಸ ಮಾಡುವ ಉದ್ದೇಶದಿಂದಲೇ ಜನರನ್ನು ವಂಚಿಸುತ್ತಿರುವ ಆನಲೈನ್ ಗೇಮಿಂಗ್ ವೆಬಸೈಟ್ ಹಾಗೂ ಅ್ಯಪ್‌ಗಳನ್ನು ನಿಷೇಧಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಭೀಮಣ್ಣ ಇಂಗಳೆ ಜಿಲ್ಲಾಧ್ಯಕ್ಷರು, ಶಾಮೀದ ಮಾಲ್ದಾರ ಜಿಲ್ಲಾ ಉಪಾಧ್ಯಕ್ಷರು, ಕಳಕಪ್ಪ ಜಿಲಜಿರಿ ತಾಲೂಕ ಅಧ್ಯಕ್ಷರು ಗದಗ, ವಿರೇಶ ಶಿವಶಿಂಪಿಗೇರ, ಈರಣ್ಣ ಮ್ಯಾಗೇರಿ ತಾಲೂಕ ಅಧ್ಯಕ್ಷರು ನರಗುಂದ, ಪ್ರಕಾಶ ಇಂಗಳೆ, ಯಶವಂತ ಸಾಬಳೆ, ಹನಮಂತ ರೋಣ, ರವಿ ಚಿಂತಾಲ, ಕಳಕಪ್ಪ ಮೋರೆ, ಭೀಮಣ್ಣ ಕಾಟೆ, ಮಹಾಂತೇಶ ಬೂದಿಹಾಳ, ಬಸವರಾಜ ಪೂಜಾರ, ತಾಜು ಮಾಳುತ್ತರ ಯಮನೂರ ಗೌಡ್ರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.