ಗದಗ: ಬೆಟಗೇರಿ ಪಿ ಬಿ ರೋಡ್ ಹತ್ತಿರ ಇರುವ ವಚನ ಪಿತಾಮಹ ದೇವರ ದಾಸಿಮಯ್ಯನವರ 31ನೇ ಹುಣ್ಣಿಮೆ ವಚನ ಕಾರ್ಯಕ್ರಮವನ್ನು ದಿವಸ ನೂಲ ಹುಣ್ಣಿಮೆ ದಿವಸ ನೆರವೇರಿಸಲಾಯಿತು. ಪ್ರತಿಯೊಬ್ಬ ಮಹಿಳೆಗೆ ಮಹಿಳೆಗೆ ಹಿಂದೂ ಧರ್ಮದಲ್ಲಿ ಅನಾಧಿಕಾಲದಿಂದಲೂ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಶಕ್ಯಾನುಸಾರ ಹಲವಾರು ಕ್ಷೇತ್ರಗಳಲ್ಲಿ ಸ್ತ್ರೀ ಮೇಲ್ಪಂತ್ತಿಯಲ್ಲಿದ್ದಾಳೆ. ಎಲ್ಲ ಜಂಜಾಟಗಳ ಜವಾಬ್ದಾರಿಗಳ ಜೊತೆಗೆ ಮಹಿಳೆ ತನಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮೆರೆಯಬೇಕು. ಇದು ಸಮಾಜಕ್ಕೂ ಕುಟುಂಬಕ್ಕೂ ದೇಶಕ್ಕೂ ಒಳ್ಳೆಯದು ಇತ್ತೀಚಿನ ದಿನಮಾನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆ ಸಾಧಿಸುತ್ತಿರುವುದು ಸಂತಸದ ಸಂಗತಿ ರಾಜಕೀಯ, ಸಾಹಿತ್ಯ, ಕ್ರೀಡೆ ,ವಿಜ್ಞಾನ ,ಸಮಾಜ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ
ವಚನ ಪಿತಾಮಹ ಆಗಿದ್ದ ದೇವರ ದಾಸಿಮಯ್ಯನವರ ಹೆಂಡತಿ ಸಹ ದುಗ್ಗಳೆ ಸಹ ಪತಿಗೆ ಸರಿ ಸಮಾನವಾಗಿ ಸಾಹಿತ್ಯದಲ್ಲಿ ಸಹಕಾರ ನೀಡಿದ್ದರಿಂದ ನೇಕಾರ ಸಮಾಜದ ಒಬ್ಬ ಮಹಾನ್ ವ್ಯಕ್ತಿ ಪ್ರಥಮ ಪ್ರಥಮ ವಚನಕಾರ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಗದಗ್ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ ನಂದಾ ಹಣಬರ ಹೇಳಿದರು
ಹುಣ್ಣಿಮೆ ವಚನ ವಾಚನ 31ನೇ ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಬಣ್ಣದ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಅವರು ಸಮಾಜದ ಪರವಾಗಿ ಸಮಾಜ ಕಲ್ಯಾಣ ಜಿಲ್ಲಾ ಅಧಿಕಾರಿಯವರನ್ನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಶಂಕರಪ್ಪ ಗಂಜಿ ಅವರು ಎಲ್ಲರನ್ನು ಸ್ವಾಗತಿಸಿದರು . ಗದಗ್ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ದಶರಥ ರಾಜ ಕೊಳ್ಳಿ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಅನಿಲ ಗಡ್ಡಿ ಸಂಕಣ್ಣ ಹಾದಿಮನಿ ಶಂಕ್ರಪ್ಪ ತೊಂಡಿಹಾಳ ಎನ್ ಜೆ ಪಟ್ಟದಕಲ್ಲ ಜ್ಯೋತಿಶ್ರೀ ಯರಗಣವಿ ಸರೋಜಾ ಮುದುಗಲ್ಲ ಮುಂತಾದ ಸಮಾಜ ಗಣ್ಯರು ಉಪಸ್ಥಿತರಿದ್ದರು