ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿ 3ನೇ ವಾಷಿರ್ಕೋತ್ಸವ
ವಿಜಯವಾಣಿ ಸುದ್ದಿಜಾಲ ಗದಗ
ಇಂದಿನ ದಿನಗಳಲ್ಲಿ ಮಕ್ಕಳು ದೇಶಿಯ ಕಲೆಗಳಿಂದ ದೂರವಾಗುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಮೊಬೈಲ್ಗಳನ್ನು ನೀಡದೆ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ವಿದುಷಿ ನಾಗರತ್ನ ಹಡಗಲಿ ಹೇಳಿದರು.
ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ ಮೂರನೇ ವಾಷಿರ್ಕೋತ್ಸವದ ಅಂಗವಾಗಿ ಜರುಗಿದ ನಾಟ್ಯಾಂಜಲಿ&24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಟ್ಯಕಲೆ ನಮ್ಮ ದೇಶದ ಸಂಸತಿಯಾಗಿದೆ. ಪಾಲಕರು ಮಕ್ಕಳಿಗೆ ನೃತ್ಯ ಕಲೆಗಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಡಾ. ಎಸ್. ಸಿ. ಚವಡಿ ಮಾತನಾಡಿ, ಈ ಹಿಂದೆ ನಾಟ್ಯ ಕಲೆ ರಾಜರುಗಳ ಗೌರವವಾಗಿತ್ತು. ಅದರೆ, ಈಗ ಸರ್ಕಾರದಿಂದ ಅದನ್ನು ಉಳಿಸಿ ಬೆಳಸಲು ಪ್ರೋತ್ಸಾಹ ನೀಡಬೇಕಾಗಿದೆ. ನೃತ್ಯಕಲೆಯನ್ನು ಉಳಿಸಿ ಬೆಳಸಲು ಅಕಾಡೆಮಿಯ ನಿರ್ದೇಶಕಿ ಜ್ಯೋತಿಶ್ರೀ ಅವರು ಶ್ರಮವಹಿಸಿ ಶಿರಹಟ್ಟಿ ಮುಂಡರಗಿ, ಮುಳಗುಂದ ಭಾಗಗಳಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ನೂರಾರು ಮಕ್ಕಳು ಈ ನೃತ್ಯಕಲೆಯನ್ನು ಕಲಿಯುತ್ತಿರುವುದು ಇದಕ್ಕೆ ಸಾಯಾಗಿದೆ ಎಂದು ಹೇಳಿದರು.
ಪತ್ರಕರ್ತ ವೆಂಕಟೇಶ ಇಮರಾಪೂರ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳನ್ನು ಮಾರ್ಕ್ಸ ಮಶೀನ್ ಎಂದು ತಿಳಿದು ಅವರಿಗೆ ಒತ್ತಡದಲ್ಲಿ ಬದುಕುತ್ತಿರುವದನ್ನು ಕಲಿಸುತ್ತಿದ್ದಾರೆ. ಅವರ ಆಸಕ್ತಿಯನ್ನು ಗುರುತಿಸಿ ಸಂಗೀತ, ನೃತ್ಯ, ನಾಟಕ, ಕ್ರೀಡೆ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕು. ಜೊತೆಗೆ ಇಂದಿನಗಳಲ್ಲಿ ಎಲ್ಲ ೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಇರುವದರಿಂದ ಮಕ್ಕಳಿಗೆ ಒತ್ತಡ ರಹಿತಜೀವನ ನಡೆಸಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳು ನೃತ್ಯ ಕಲೆಯನ್ನು ಪ್ರದಶಿರ್ಸಿದರು.
ಡಾ. ನಾರಾಯಣ ಹಿರೇಕೊಳಚಿ, ಅಮೃತತ ಭಾತಖಂಡೆ, ವಿಜಯಕ್ಷಿ$್ಮ ಪುರಾಣಿಕ, ಷಡಾರಿ ಟಿ. ವಿ, ನಾಗರತ್ನಾ ಕುಂಬಾರ ಇತರರು ಇದ್ದರು.