ಬೆಟಗೇರಿ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಬಸವರಾಜ ಬಳ್ಳಾರಿ ಉದ್ಘಾಟಿಸಿದರು. ನೀಲಕಂಠೇಶ್ವರ ಶ್ರೀಗಳು, ಕೀರ್ತೆಪ್ಪ ಕೋಟುರು, ಜಯಶ್ರೀ ಹಿರೇಮಠ, ಶಶಿಕಲಾ ಶ್ಯಾವಿ, ನಾಗರತ್ನ ಮುಳಗುಂದ, ಲಕ್ಷಿ$್ಮ ಕಾಕಿ, ನಿಂಗಪ್ಪ ಚೇಗೂರ, ಸುಮಿತ್ರಾ ಐಲಿಯವರ, ಪೂಜಾ ಗದಗಿನ, ಶೋಭಾ ಜುಟ್ಲಾ ಸೇರಿದಂತೆ ಹಲವರು ಇದ್ದರು  
ಜಿಲ್ಲೆ

ನೀಲಕಂಠೇಶ್ವರ ಮಠದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಬೆಟಗೇರಿಯ ಸ್ಥಳಿಯ ಕುರಟ್ಟಿಪೇಟೆಯ ನೀಲಕಂಠೇಶ್ವರ ಮಠದಲ್ಲಿ ಗೌರಿಶಂಕರ ಮಹಿಳಾ ವಿವಿದೋದ್ದೇಶಗಳ ಸಂದ ಆಶ್ರಯದಲ್ಲಿ ಬುಧವಾರ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರ ಸಂದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಸರ್ಕಾರ ಸವಲತ್ತುಗಳನ್ನು ಎಲ್ಲಾ ಮಹಿಳೆಯರು ಪಡೆಯಬೇಕು. ಮಹಿಳೆಯರಿಗಾಗಿ ಕೌಶಲ್ಯ ಇಲಾಖೆಯಲ್ಲಿ ವಿಶೇಷ ಸೌಲಬ್ಯಗಳಿವೆ. ಇತರೆ ಇಲಾಖೆಯಲ್ಲೂ ಸಬ್ಸಿಡಿ ನಿಡುವ ಹತ್ತಾರು ಯೋಜನೆಗಳಿಗೆ ಇಲಾಖಾ ಅಧಿಕಾರಿಗಳನ್ನು ಸಂಪಕಿರ್ಸಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನೀಲಕಂಠೇಶ್ವರ ಶ್ರೀಗಳು ಮಾತನಾಡಿ, ಮಹಿಳೆಯರಿಗೆ ಹಿಂದೆಂದಿಗಿಂತಲೂ ಈಗ ಉತ್ತಮ ಅವಕಾಶಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು ಹಾಗೂ ಮನೆಯಲ್ಲಿಯೂ ತಿಳಿಹೇಳಿ ಸಾಮರಸ್ಯದಿಂದ ಬಾಳಬೇಕು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ನಿವೃತ್ತ ಉಪನೀರ್ದೇಶಕ ಕೀರ್ತೆಪ್ಪ ಗೋಟೂರು ಅವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹರೀಶ ಪೂಜಾ, ಜಯಶ್ರೀ ಹಿರೇಮಠ, ಶಶಿಕಲಾ ಶ್ಯಾವಿ, ನಾಗರತ್ನ ಮುಳಗುಂದ, ಲಕ್ಷಿ$್ಮ ಕಾಕಿ, ನಿಂಗಪ್ಪ ಚೇಗೂರ, ಸುಮಿತ್ರಾ ಐಲಿಯವರ, ಪೂಜಾ ಗದಗಿನ, ಶೋಭಾ ಜುಟ್ಲಾ ಸೇರಿದಂತೆ ಹಲವರು ಇದ್ದರು