ಜಿಲ್ಲೆ

ಯಶಸ್ವಿಯಾಗಿ ನಡೆದ ಎನ್​ಸಿಸಿ 38ನೇ ಬಟಾಲಿಯನ್​ ಗದಗ ವಾಷಿರ್ಕ ತರಬೇತಿ ಶಿಬಿರ

Gadag - Shivanand Hiremath

ಗದಗ: ತಾಲೂಕಿನ ಹುಲಕೋಟಿ ರಾಜರಾಜೇಶ್ವರ ವಿದ್ಯಾನಿಕೇತನದಲ್ಲಿ ಇತ್ತೀಚೆಗೆ 38ನೇ ಎನ್​ಸಿಸಿ ಬಟಾಲಿಯನ್​ ವಾಷಿರ್ಕ ತರಬೇತಿ ಕ್ಯಾಂಪ್​ ಯಶಸ್ವಿಯಾಗಿ ಜರುಗಿತು. 5 ವರ್ಷಗಳ ನಂತರ ಗದಗ ಜಿಲ್ಲೆಯಲ್ಲಿ ನೆರವೇರಿದ ಕ್ಯಾಂಪ್​ನಲ್ಲಿ 38 ಕರ್ನಾಟಕ ಬಟಾಲಿಯನ್​ನ 600 ಕೆಡೆಟ್​ಗಳು ಭಾಗವಹಿಸಿ ವಿವಿಧ ರೀತಿಯ ತರಬೇತಿ ಪಡೆದರು. 1000 ರೌಂಡ್​ಗಳ ೈರಿಂಗ್​ನಲ್ಲಿ ತರಬೇತಿ ನೀಡಲಾಯಿತು. ಸಮೀಪದ ಅಸುಂಡಿ ಗುಡ್ಡ ಪ್ರದೇಶದಲ್ಲಿ ಮ್ಯಾಪ್​ ರೀಡಿಂಗ್​ ತರಬೇತಿಯನ್ನು ಆಯೋಜನೆ ಮಾಡಲಾಯಿತು. ಇದರಲ್ಲಿ ಕೆಡೆಟ್​ಗಳಿಗೆ ಮ್ಯಾಪ್​ ರೀಡಿಂಗ್​ ತರಬೇತಿಯ ಕೌಶಲ್ಯವನ್ನು ಕಲಿಸಲಾಯಿತು. ಕ್ಯಾಂಪ್​ನಲ್ಲಿ ಡಿ. ವೈ. ಎಸ್​. ಪಿ ಮಹಾಂತೇಶ ಸಜ್ಜನ ಅವರು ಸೈಬರ್​ ಕೆಂ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ೈರ್​ ೈಟಿಂಗ್​ ತರಬೇತಿಯನ್ನು ಹಾಗೂ ಅಗ್ನಿ ಆಹುತಿ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೆಡೆಟ್​ಗಳಿಗೆ ವಿವಿಧ ಬಂದೂಕುಗಳನ್ನು ಉಪಯೋಗಿಸಿ ೈರಿಂಗ್​ ಮಾಡುವ ಕುರಿತು ತರಬೇತಿ ನೀಡಲಾಯಿತು. ಕೆಡೆಟ್​ಗಳಿಗೆ ಡ್ರಿಲ್​, ದೈಹಿಕ ವ್ಯಾಯಾಮ, ಯೋಗಗಳ ಕುರಿತು ತರಬೇತಿ ನೀಡಲಾಯಿತು.

ಕ್ಯಾಂಪ್​ನಲ್ಲಿ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು. ಸಾಮೂಹಿಕ ಗಾಯನ, ಸಾಮೂಹಿಕ ನೃತ್ಯ, ವಾಲಿಬಾಲ್​, ಥ್ರೋಬಾಲ್​, ಖೋಖೋ ಮುಂತಾದ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಗೋವಿಂದರಡ್ಡಿ, ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ, ಪಿಯು ಉಪನಿರ್ದೇಶಕ ಸಿದ್ಧಲಿಂಗ ಮಾಸ್​ ನಾಯಕ್​, ವೈ. ರಾವೇಂದ್ರ ಶೆಟ್ಟಿ, ಮಂಜುಳಾ ದಾನಿ ಇತರರು ಇದ್ದರು.