ಗದಗ : ಪ್ರಸ್ತುತ ದಿನಮಾನದಲ್ಲಿ ರಾಸಾಯನಿಕ ಕೃಷಿಯಿಂದ ಭೂಮಿಯ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ,ಹಾಗಾಗಿ ಕೇಂದ್ರ ಸರ್ಕಾರ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನವನ್ನು ಆರಂಭಿಸಿದೆ ಎಂದು ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಅವರು ಅಭಿಪ್ರಾಯಪಟ್ಟರು. ಅವರು ಕೋಟುಮಚಗಿ ಗ್ರಾಮದಲ್ಲಿ ಅಭಿಯಾನ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಸಾವಯುವ ಕೃಷಿ ಪದ್ಧತಿಯಿಂದ ಅಳವಡಿಸಿಕೊಳ್ಳುವ ಮೂಲಕ ರೈತರು ಈ ಅಭಿಯಾನ ಯಶಸ್ವಿಗೊಳಿಸಬೇಕು. ಸಾವಯುವ ಕೃಷಿ ಎಂದರೆ ಅದು ಗಟ್ಟಿತನದ ಕೃಷಿ, ಮುಂದಿನ ದಿನಮಾನದಲ್ಲಿ ಎಲ್ಲಾ ರೈತರು ಕೂಡ ಸಾವಯುವ ಕೃಷಿ ಕಡೆಗೆ ಹೊರಳುವ ದಿನ ಬರುತ್ತದೆ ಎಂದರು.
ಗ್ರಾಮದ ಸಾವಯುವ ಕೃಷಿಕ ವೀರೇಶ್ ನೆಗಲಿ ಅವರು ಜೀವಾಮೃತ, ಕುಳ್ಳಿನ ಕಷಾಯ ಸೇರಿದಂತೆ ಹಲವಾರು ಸಾಯಯುವ ಕೃಷಿ ಪದ್ಧತಿಗಳ ಕುರಿತು ಪ್ರತಕ್ಷಿತೆ ತೋರಿಸಿದರು. ದೇಸಿ ಆಕಳು ಸಾಕುವುದರ ಮೂಲಕ ಎಲ್ಲಾ ರೈತರು ಸುಸ್ಥಿರ ಹಾಗೂ ಅರೋಗ್ಯದಾಯಕ ಸಾವಯುವ ಕೃಷಿ ಪದ್ಧತಿ ಅಳವಡಿಸಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಬಸವರಾಜೇಶ್ವರಿ ಪ್ರಸ್ಥಾವಿಕ ಮಾತನಾಡಿದರು. ವಿದ್ಯಾದರ ರಮಾಣಿ ಸ್ವಾಗತಿಸದರು. ಮುತ್ತು ಹಾಲವರ ನಿರೂಪಿಸಿದರು. ಗ್ರಾಮದ ರೈತರು ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.