ಜಿಲ್ಲೆ

ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ಅಟಲ್​ ಟ್ರೋಪಿ 2025

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮತ್ತು ಸ್ವಾಮೀ ವಿವೇಕಾನಂದ ಜನ್ಮದಿನದ ನಿಮಿತ್ಯ ಬುಧವಾರ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವು ನಗರದ ವಿಜಯ ಪಿಯು ಕಾಲೇಜ್​ ಆವರಣದಲ್ಲಿ ಜರುಗಿತು. ಕಾರ್ಯಕ್ರಮ ಹಿನ್ನೆಲೆ ಯುವಕ ಯುವತಿಯರಿಗೆ ಭಾರತೀಯ ಜನತಾ ಪಾಟಿರ್ ಯುವ ಮೋರ್ಚಾದ ವತಿಯಿಂದ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ಜರುಗಿದವು.

ಮಾಜಿ ಸಚಿವ ಕಳಕಪ್ಪ ಬಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕ ಯುವತಿಯರಲ್ಲಿ ಜೀವನದಲ್ಲಿ ಶಿಸ್ತು ಸಾಧನೆ ಅವಶ್ಯ. ಅವುಗಳ ಪೂರಕವಾಗಿ ಕಬಡ್ಡಿ ಪಂದ್ಯಾವಳಿಯು ಪ್ರೋತ್ಸಾಹ ನೀಡುತ್ತದೆ. ಯುವಕ ಯುವತಿಯರು ಭಾರತದ ಇತಿಹಾಸ, ನಮ್ಮ ಸಂಸತಿ, ಜ್ಞಾನ, ವಿಜ್ಞಾನದ ವೈಭವ ಕುರಿತು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇತಿಹಾಸ ತಿಳಿದುಕೊಳ್ಳದಿದ್ದರೆ, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಜೀವನಕ್ಕೆ ಕ್ರೀಡೆ ಅಮೂಲ್ಯವಾಗಿದೆ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮಾತನಾಡಿ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ದೇಶ ಕಂಡ ದಕ್ಷತೆಯುಳ್ಳ ಅಜಾತಶತ್ರು. ನಮ್ಮ ದೇಶದ ದೇಸಿಯ ಸಂಸತಿ ಭಾಗ ಆಗಿರುವ ಕಬಡ್ಡಿ ಪಂದ್ಯಾವಳಿ ಮೂಲಕ ಅರಿವು ಮೂಡಿಸಲು ಯುವಮೋರ್ಚಾ ನಡೆಸುತ್ತಿರುವ ಕಾರ್ಯಕ್ರಮ ಶ್ಲಾನೀಯ. ವಿವೇಕಾನಂದರು ಹೇಳಿದಂತೆ ಯುವಕರಲ್ಲಿ ಅನಂತ ಶಕಿ ಇದೆ. ಯುವಕರು ಎಲ್ಲವನ್ನು ಸಾಧಿಸಬಹುದು. ಕ್ರೀಡೆ ಸೇರಿದಂತೆ ಯಾವುದೇ ರಂಗದಲ್ಲಿ ಸಾಧಿಸಲು ವ್ಯಕ್ತಿ ದೇಹ ಸದೃಢವಾಗಿರಲು ಕ್ರೀಡೆ ಸಹಕಾರಿ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಯುವಕರಲ್ಲಿ ಧೈರ್ಯ ಸಾಹಸ ಒಗ್ಗಟ್ಟು ಗುಣಗಳನ್ನು ಜೀವನದಲ್ಲಿ ಎದುರಿಸಲು ಕಬ್ಬಡ್ಡಿ ಅಂತಹ ಕ್ರೀಡೆ ಉಪಯುಕ್ತ ಎಂದರು. ಗ್ರಾಮೀಣ ಪ್ರದೇಶಗಳಿಂದ 30ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್​. ಕರಿಗೌಡ್ರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ, ನಗರಸಭೆ ಸದಸ್ಯ ಅನಿಲ್​ ಅಬ್ಬಿಗೇರಿ, ಮುತ್ತಣ್ಣ ಖಡಗದ, ರವಿ ಕರಿಗಾರ, ಬಸವರಾಜ ಸಂಗನಾಳ, ರಾಜೇಶ ಕಟ್ಟಿಮನಿ, ನವೀನ ಕುರ್ತಕೋಟಿ, ಸಚಿನ ಮಡಿವಾಳರ, ಬಸವರಾಜ ನರೇಗಲ, ರೋಹನ ಕುಮಾರ ಕುಂದನಹಳ್ಳಿ, ಚೆನ್ನು ಪಟೇಲ, ಸಂತೋಷ ಚಾವೂರ, ಕಿರಣ ಕಟ್ಟಿಮನಿ ಇತರರು ಇದ್ದರು.

ಪೋಟೋ 09ಜಿಡಿಜಿ01

ನಗರದ ವಿಜಯ ಪಿಯು ಕಾಲೇಜ್​ ಆವರಣದಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮತ್ತು ಸ್ವಾಮೀ ವಿವೇಕಾನಂದ ಜನ್ಮದಿನ ಕಾರ್ಯಕ್ರಮವನ್ನು ಮಾಜಿ ಸಚಿವ ಕಳಕಪ್ಪ ಬಂಡಿ ಉದ್ಘಾಟಿಸಿದರು. ಎಸ್​.ವಿ. ಸಂಕನೂರು, ಸಂತೋಷ ಅಕ್ಕಿ, ಅನಿಲ್​ ಅಬ್ಬಿಗೇರಿ, ಮುತ್ತಣ್ಣ ಖಡಗದ, ರವಿ ಕರಿಗಾರ ಇತರರು ಇದ್ದರು.