ಗದಗ:
ನಗರಸಭೆಯ ಪೌರಕಾಮಿರ್ಕರಿಗೆ ಬೆಳಗಿನ ಉಪಹಾರ ವಿತರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಅಧಿಕ ಮೊತ್ತ ನಮುದಿಸಿದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ ಎಂದು ಜಾಗತಿಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋ-ಧಿ ಸಂಟನೆಯ ಕಾರ್ಯದಶಿರ್ ಶಾಂತಯ್ಯ ಮುತ್ತಿನಪೆಂಡಿಮಠ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪೌರ ಕಾಮಿರ್ಕರಿಗೆ ಉಪಹಾರ ವಿತರಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಯವರು ಭಾಗವಹಿಸಿದ್ದರು. ಒಂದು ಸಂಸ್ಥೆಯವರು ಪ್ರತಿ ದಿನ ಒಬ್ಬ ಪೌರ ಕಾಮಿರ್ಕನಿಗೆ 34 ರೂ. ಗಳಂತೆ ಉಪಹಾರ ವಿತರಿಸುವುದಾಗಿ, ಮತ್ತೊಬ್ಬರು 35 ರೂ. ನಂತೆ ವಿತರಿಸುವುದಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ದರಪಟ್ಟಿಯನ್ನು ಲಗತ್ತಿಸಿದ್ದರು. ಈ ಪ್ರಕ್ರಿಯೆಯಲ್ಲಿ ಅತಿ ಕಡಿಮೆ ದರಪಟ್ಟಿ ಲಗತ್ತಿಸಿದ ಸಂಸ್ಥೆಗೆ ತಾಂತ್ರಿಕ ನೆಪ ಹೇಳಿ ಅವರನ್ನು ಟೆಂಡರ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ್ದಾರೆ. ಹೆಚ್ಚಿನ ದರ ನಮೂದಿಸಿದ ಸಂಸ್ಥೆಗೆ ಪೌರಕಾಮಿರ್ಕರಿಗೆ ಉಪಹಾರ ವಿತರಿಸುವ ಟೆಂಡರನ್ನು ನೀಡಿದ್ದಾರೆ. ಈ ಟೆಂಡರ್ ಪ್ರಕ್ರಿಯೆಯು ಗದಗ&ಬೆಟಗೇರಿ ನಗರಸಭೆಯ ಪೌರಾಯುಕ್ತರ ಗಮನಕ್ಕೆ ತರದೆ ಪೌರಾಯುಕ್ತರ ಕೆಳಹಂತದ ಅಧಿಕಾರಿಗಳು ಹಾಗೂ ಕೆಲವು ಸದಸ್ಯರು ಒಳಸಂಚಿನಿಂದ ದರಪಟ್ಟಿ 35 ರೂ. ಗಳಂತೆ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಸ್ಪಷ್ಟವಾಗಿ ಭ್ರಷ್ಟಾಚಾರ ಕಂಡುಬರುತ್ತಿದೆ. ಪವರಾಯುಕ್ತರು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮತ್ತು ಲೋಕಾಯುಕ್ತರಿಗೆ ದೂರನ್ನು ನೀಡುವುದಾಗಿ ಮುತ್ತಿನಪೆಂಡಿಮಠ ಎಚ್ಚರಿಸಿದ್ದಾರೆ.