ಜಿಲ್ಲೆ

ನಗರಸಭೆ ಚುನಾವಣೆ: ಕಾಂಗ್ರೆಸ್​ ಬಿಜೆಪಿ ನಡುವೆ ರಾಜಕೀಯ ಶೀತಲಸಮರ

Gadag - Shivanand Hiremath

ಕಾಂಗ್ರೆಸ್​ ಬಿಜೆಪಿ ನಡುವೆ ರಾಜಕೀಯ ಶೀತಲಸಮರ

ವಿಜಯವಾಣಿ ವಿಶೇಷ, ಗದಗ

ವಿಳಂಭ ಆಗುತ್ತಿರುವ ಗದಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯು ನಗರದಲ್ಲಿ ಮತ್ತೊಂದು ಮೇಲುಸ್ತರದ ರಾಜಕೀಯ ತಂತ್ರಗಾರಿಕೆಗೆ ವೇದಿಕೆ ಕಲ್ಪಿಸಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಂಬಂಧ ಕಾಂಗ್ರೆಸ್​ ಸಲ್ಲಿಸಿದ ಮೇಲನ್ಮವಿ ಅಜಿರ್ ಹೈಕೋರ್ಟನಲ್ಲಿ ತಿರಸತವಾಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ, ಹೈಕೋರ್ಟ್​ ಆದೇಶ ಪ್ರತಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಕೈಸೇರದ ಹಿನ್ನೆಲೆ ನಗರಸಭೆ ಚುನಾವಣೆ ವಿಳಂವಾಗಿದೆ. ಹಾಗಾಗಿ, ಬಹುಮತ ಇರುವ ಬಿಜೆಪಿಯ ಆತ್ಮಸ್ಥೆರ್ಯ ಕುಂದಿದೆ.

ಮೀಸಲಾತಿ ರೋಸ್ಟರ್​ ನಲ್ಲಿ ಅನ್ಯಾಯ ಆಗಿದೆ ಎಂದು ನಗರಸಭೆ ಕಾಂಗ್ರೆಸ್​ ಸದಸ್ಯರು ಕೋರ್ಟ ಮೆಟ್ಟಿಲೇರಿದ್ದರು. ಅಧ್ಯಕ್ಷ ಸ್ಥಾನಕ್ಕೆ "ಸಾಮಾನ್ಯ', ಉಪಾಧ್ಯಕ್ಷ ಸ್ಥಾನಕ್ಕೆ "ಸಾಮಾನ್ಯ ಮಹಿಳೆ' ಮೀಸಲು ಪ್ರಕಟ ಆಗಿತ್ತು. ಆದರೆ, 1ನೇ ವಾಡಿರ್ನ್​ ಕಾಂಗ್ರೆಸ್​ ಸದಸ್ಯೆ ಲಕ್ಷಿ$್ಮ ಸಿದ್ಧಮನಹಳ್ಳಿ, 10ನೇ ವಾಡಿರ್ನ ಕಾಂಗ್ರೆಸ್​ ಸದಸ್ಯ ಇಮ್ತಿಯಾಜ್​ ಶಿರಹಟ್ಟಿ ಅವರು ಮೀಸಲು ವಿರುದ್ಧ ಧಾರವಾಡ ಹೈಕೋರ್ಟ್​ ಪೀಠದಲ್ಲಿ ಮೇಲ್ಮನವಿ ಅಜಿರ್ ಸಲ್ಲಿಸಿದ್ದರು. ಅಜಿರ್ ಪುರಸ್ಕರಿಸಿದ ನಂತರ ಚುನಾವಣೆಗೆ ತಡೆ ನೀಡಲಾಗಿತ್ತು. ಕಳೆದ ಡಿ.13 ರಂದು ಕಾಂಗ್ರೆಸ್​ ಸದಸ್ಯರ ಅಜಿರ್ಯನ್ನು ಹೈಕೋರ್ಟ್​ ತಿರಸ್ಕರಿಸಿದೆ. ಅಜಿರ್ ತಿರಸ್ಕಾರ ಹಿನ್ನೆಲೆ ಸರ್ಕಾರ ನಿಗದಿ ಪಡಿಸಿರುವ ಮೀಸಲು ರೋಸ್ಟರ್​ ಅಂತಿಮ ಆಗಿದ್ದು, ಮೊದಲಿನ ಮೀಸಲಿನಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಬೇಕಿದೆ. ಆದರೆ, ಕೋರ್ಟ್​ ಆದೇಶ ಪ್ರಕಟಗೊಂಡು ತಿಮಗಳು ಸಮೀಪಿಸುತ್ತ ಬಂದಿದ್ದರೂ ಸಹ ಕೊರ್ಟ್​ ಆದೇಶ ಜಿಲ್ಲಾ ಚುನಾವಣಾ ಅಧಿಕಾರಿ ಕೈಗೆ ತಲುಪಿಲ್ಲ. ಹಾಗಾಗಿ ಚುನಾವಣೆ ಜರುಗಿಸುವ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ.

ವಕಾರುಸಾಲು ವರ್ಸಸ್​ ನಗರಸಭೆ ಚುನಾವಣೆ:

ನಗರದಲ್ಲಿ ವಕಾರುಸಾಲು ಪ್ರಕರಣ ವರ್ಸಸ್​ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಎಂಬ ಜಿದ್ದಾಜಿದ್ದಿ ಕಾಂಗ್ರೆಸ್​ ಮತ್ತು ಬಿಜೆಪಿ ಸದಸ್ಯರ ನಡುವೆ ಏರ್ಪಟ್ಟಿದೆ. 32 ಎಕರೆ ವ್ಯಾಫ್ತಿಯ ವಕಾರು ಸಾಲು ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಪ್ರಕ್ರಿಯೆಗೆ ಬಿಜೆಪಿ ಸದಸ್ಯರು ತಮ್ಮ ರಾಜತಾಂತ್ರಿಕ ನಡೆ ಅನುಸರಿಸಿ ತಡೆ ನೀಡಿದ್ದರಿಂದ ಜಿಲ್ಲಾ ಕಾಂಗ್ರೆಸ್​ ಮುಖಂಡರು ಅಸಮಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನಾನಾ ಕಾರಣ ತಂದೊಡ್ಡಿ ತಡೆ ನೀಡುತ್ತಿದ್ದಾರೆ ಎಂಬುದು ಬಿಜೆಪಿಗರ ಆರೋಪ.

ಅಧ್ಯಕ್ಷ ಸ್ಥಾನ "ಸಾಮಾನ್ಯ' ವರ್ಗಕ್ಕೆ ಮಿಸಲಿಟ್ಟ ಕಾರಣ ಬಿಜೆಪಿಯಲ್ಲಿ ನಾಲ್ಕಾರು ಜನ ಪೈಪೋಟಿಗೆ ಇಳಿದಿದ್ದಾರೆ. ಪ್ರಮುಖವಾಗಿ ಹಿರಿಯ ಸದಸ್ಯ ವಿನಾಯಕ ಮಾನ್ವಿ, ಚಂದ್ರು ತಡಸದ, ರಾವೇಂದ್ರ ಯಳವತ್ತಿ, ಪ್ರಕಾಶ ಅಂಗಡಿ ಸೇರಿದಂತೆ ಹಲವರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ "ಸಾಮಾನ್ಯ ಮಹಿಳಾ' ಮೀಸಲು ಇರುವುದರಿಂದ ಸಾಮಾನ್ಯವಾಗಿ ವಿಜಯಲಕ್ಷಿ$್ಮ ದಿಂಡೂರ ಮತ್ತು ವಿದ್ಯಾವತಿ ಗಡಗಿ ಅವರ ನಡುವೆ ಸ್ಪರ್ಧೆ ಏರ್ಪಟಿದೆ. ಇನ್ನೂ, ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಬಕೆಟ್​ ಹಿಡಿಯುವ ಸಂಸತಿ ಆರಂಭವಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ವ್ಯಕ್ತಿನಿಷ್ಠೆಗಿಂತ ಪಕ್ಷ ನಿಷ್ಠೆ ಸದಸ್ಯರಿಗೆ ಜಿಲ್ಲಾ ವರಿಷ್ಠರು ಮಣೆ ಹಾಕಬೇಕು ಎಂಬುದು ಹಲವರ ಅಭಿಪ್ರಾಯ. ನಗರಸಭೆಯಲ್ಲಿ ಬಿಜೆಪಿ 18 ಸದಸ್ಯರು, ಕಾಂಗ್ರೆಸ್​ 17 ಸದಸ್ಯರಿದ್ದಾರೆ. ಬಿಜೆಪಿ ಮೈಮರೆತರೆ "ಆಪರೇಷನ್​ ಕಾಂಗ್ರೆಸ್​' ಆಗುವ ಸಂಭವ ಹೆಚ್ಚಿದ್ದು, ಕಾಂಗ್ರೆಸ್​ ಕೂಡ ಅಧಿಕಾರಕ್ಕೆ ಏರಬಹುದು ಎನ್ನಲಾಗುತ್ತಿದೆ.

ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಮತ ಚಲಾಯಿಸಲು ಗದಗ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಧಾನ್​ ಪರಿಷತ್​ ಸದಸ್ಯರಾದ ಕಾಂಗ್ರೆಸ್ಸಿನ ಸಲೀಂ ಅಹಮ್ಮದ್​, ಬಿಜೆಪಿ ಎಸ್​.ವಿ. ಸಂಕನೂರು ಅಜಿರ್ ಸಲ್ಲಿಸಿದ್ದರು. ಈ ಅಜಿರ್ಗಳು ಎರಡೂ ಪಕ್ಷದ ಸದಸ್ಯರು ಉಪವಿಭಾಗಾಧಿಕಾರಿ ಕೋರ್ಟ್​ ನಲ್ಲಿ ಪ್ರಶ್ನಿಸಿದ್ದರು. ಅಜಿರ್ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾ ಗಂಗಪ್ಪ ಅವರು ಮತದಾನ ಪಟ್ಟಿಗೆ ಸೇರ್ಪಡಿಸುವ ಇಬ್ಬರು ಸದಸ್ಯರ ಅಜಿರ್ಗಳನ್ನು ವಜಾಗೊಳಿಸಿದ್ದರು.