ಗದಗ ನಿವೃತ್ತ ನೌಕರರ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು, ಬಿ. ಬಿ. ಹೂಗಾರ, ಡಾ. ಎನ್​. ಬಿ. ಪಾಟೀಲ, ಬಿ. ಎ. ವಸ್ತ್ರದ, ಜಿ. ಎಸ್​. ಹಿರೇಮಠ, ಎಂ. ಎಚ್​. ಹುಲ್ಲೂರ ಇತರರು ಇದ್ದರು. 
ಜಿಲ್ಲೆ

ಮುತ್ತಿನಪೆಂಡಿಮಠ ಅವರದ್ದು ಆದರ್ಶ ವ್ಯಕ್ತಿತ್ವ : ಎಸ್​.ವಿ. ಸಂಕನೂರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಗದುಗಿನ ಮಾಜಿ ಶಾಸಕ ದಿ. ಸಿ. ಎಸ್​. ಮುತ್ತಿನಪೆಂಡಿಮಠ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಮಾಜಕ್ಕೆ ಅವರುಆದರ್ಶ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಹೇಳಿದರು.
ನಗರದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂದ ಸಮುದಾಯ ಭವನದಲ್ಲಿ ಮಂಗಳವಾಎ ಏರ್ಪಡಿಸಿದ್ದ ಮಾಜಿ ಶಾಸಕ ಸಿ. ಎಸ್​. ಮುತ್ತಿನಪೆಂಡಿಮಠ ಅವರ 95ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಲ್ಲಸಮುದ್ರ ಗ್ರಾಮದ ಬಳಿಯ ಅಂಜುಮನ್​ ಪಾಲಿಟೆಕ್ನಿಕ್​ ಕಾಲೇಜ್​ ಸೇರಿದಂತೆ ಗದಗ ಪರಿಸರದಲ್ಲಿ ಶಿಣ ೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತುಂಗಭದ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದ ಭಗೀರಥ ಮುತ್ತಿನಪೆಂಡಿಮಠ ಅವರು. ಹಿರಿಯ ರಾಜಕೀಯ ಮುತ್ಸದ್ಧಿ ಅಷ್ಟೇ ಅಲ್ಲದೇ ಹಿರಿಯ ಮುತ್ಸದ್ಧಿ ನ್ಯಾಯವಾದಿಗಳೂ ಆಗಿದ್ದರು. ಹಣ, ಅಧಿಕಾರಕ್ಕಾಗಿ ಜೋತು ಬೀಳದೇ ಸಮಾಜಮುಖಿಯಾಗಿ, ಜನಮುಖಿಯಾಗಿ ಕಾರ್ಯ ಮಾಡಿದ್ದಾರೆ. ಸಹಾಯ, ನ್ಯಾಯ ಕೇಳಿ ಬಂದವರನ್ನು ಹಾಗೇ ಕಳುಹಿಸಿದವರಲ್ಲ. ನನ್ನನ್ನು ಎಂ.ಎಲ್​.ಸಿ ಚುನಾವಣೆಯಲ್ಲಿ ಗೆಲ್ಲಿಸಬೇಕೆನ್ನುವ ಅವರ ಆಸೆ ಕೊನೆಗೂ ಸಾಕಾರಗೊಂಡು ಖುಷಿಪಟ್ಟವರು ಎಂದು ಸಂಕನೂರು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ಜಿಲ್ಲಾ ಟಕದ ಅಧ್ಯ ಶರಣಬಸಪ್ಪ ಗುಡಿಮನಿ ಮಾತನಾಡಿ, ಮುತ್ತಿನಪೆಂಡಿಮಠ ಅವರ ಕಾರ್ಯ ವೈಖರಿ, ಸಾಮಾಜಿಕ ಕಾರ್ಯಗಳು, ನಡೆ, ನುಡಿ ಎಲ್ಲರಿಗೂ ಮಾದರಿಯಾಗಿವೆ. ಮುತ್ತಿನಪೆಂಡಿಮಠ ಅವರ ಜನ್ಮದಿನಾಚರಣೆಯಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸುತ್ತಿರುವದು ಹಿರಿಯ ಜೀವಿಗಳನ್ನೇ ಗೌರವಿಸಿದಂತೆ ಎಂದರು.
ಬಿ. ಬಿ. ಹೂಗಾರ, ಡಾ. ಎನ್​. ಬಿ. ಪಾಟೀಲ, ಬಿ. ಎ. ವಸ್ತ್ರದ, ಜಿ. ಎಸ್​. ಹಿರೇಮಠ, ಎಂ. ಎಚ್​. ಹುಲ್ಲೂರ, ಎಸ್​. ಕೆ. ಖಂಡಪ್ಪಗೌಡರ, ಬಿ. ಎನ್​. ಯರನಾಳ, ಐ. ಕೆ. ಬಲೂಚಗಿ, ಎನ್​. ಆರ್​. ಹೊಸಳ್ಳಿ, ರಾಜಶೇಖರ ಕರಡಿ, ಎಂ. ಎನ್​. ಮಣ್ಣಮ್ಮನವರ, ಎಸ್​. ಕೆ. ಬದಾಮಿ ಇತರರು ಇದ್ದರು.