ಜಿಲ್ಲೆ

ಸಂಗೀತ ಕಲೆ ಸಂವರ್ಧನೆಗೊಳ್ಳಬೇಕು: ಡಾ. ರಾಧಿಕಾ

ವಿಜಯವಾಣಿ ಸುದ್ದಿಜಾಲ ಗದಗ

ಸಂಗೀತ ಸಂವರ್ಧನೆ ಹಾಗೂ ಸಂಗೀತ ಕಲಾವಿದರನ್ನು ಗೌರವಿಸುವ ಕಾರ್ಯ ಮುನ್ನಡೆಯಬೇಕು ಎಂದು ಐಎಂಎ ಮಾಜಿ ಅಧ್ಯೆ ಡಾ.ರಾಧಿಕಾ ಕುಲಕಣಿರ್ ಹೇಳಿದರು.

ಐಎಂಎ ಸಭಾಂಗಣದಲ್ಲಿ ಮಂಗಳವಾರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ವರ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.

ರಾಜಾಶ್ರಯದಲ್ಲಿ ಪೋಷಣೆಗೊಂಡು ಬಂದಿರುವ ಸಂಗೀತ ಕಲೆಯನ್ನು ಸರ್ಕಾರ, ಸಂ ಸಂಸ್ಥೆಗಳು ಪೋಷಿಸಬೇಕು. ತನ್ಮೂಲಕ ಸಂಗೀತ ಹಾಗೂ ಕಲಾವಿದರು ಉಳಿಯಬೇಕು.ತಾಯಿಗಿಂತ ಮಿಗಿಲಾದದ್ದು ಯಾವುದು ಇಲ್ಲ. ಸರ್ವ ಶ್ರೇಷ್ಠವಾದ ತಾಯಿಯ ಸ್ಥಾನವನ್ನು ತುಂಬಲು ಸಾಧ್ಯವೆ ಇಲ್ಲ. ನಮ್ಮ ಯುವ ಜನಾಂಗ ತಾಯಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ತಾಯಿಯ ಸೇವೆ ಮಾಡಿ ತಾಯಿ ಋಣ ತಿರಿಸಬೇಕು ಎಂದರು.

ಐಎಂಎ ಮಾಜಿ ಅಧ್ಯ ಡಾ. ಪ್ಯಾರಅಲಿ ನೂರಾನಿ, ಐಎಂಎ ಕಾರ್ಯದಶಿರ್ ಡಾ.ತುಕಾರಾಮ, ಶ್ರೀಕಾಂತ ಜೋಷಿ, ವಿನಾಯಕ ಕಾಮತ, ವೆಂಕಟೇಶ ರಾಯಭಟ್​ನವರ, ಶ್ರೀಕಾಂತ ಪಾಠಕ, ದೀಪ್ತಿ ಪಾಠಕ ಹಲವರು ಇದ್ದರು.