ಶಿವಾನಂದ ಹಿರೇಮಠ ಗದಗ
"ಬಾ ನಲ್ಲೆ ಮಧು ಚಂದ್ರಕೆ' ಎಂದು ಪ್ರೇಮಿಸುತ್ತಲೇ ಪ್ರೇಯಸಿ ಮಧುಶ್ರೀಯನ್ನು ಕೊಲೆ ಮಾಡಿ ಹಳ್ಳದಲ್ಲಿ ಹೂತಿಟ್ಟು, ಪೊಲೀಸರ ತನಿಖೆ ದಾರಿ ತಪ್ಪಿಸುತ್ತಿದ್ದ ಪ್ರಕರಣವೊಂದರಲ್ಲಿ ಆರೋಪಿ ಕೊನೆಗೂ ಪೊಲೀಸರ ಅತಿಥಿ ಆಗಿದ್ದಾನೆ. "ಬಾ ನಲ್ಲೆ ಮಧು ಚಂದ್ರಕೆ' ಎಂಬ ಸಿನಿಮಾ ಮಾದರಿಯಲ್ಲೆ ಮೇಘಾಲಯದಲ್ಲಿ ಗಂಡನ ಜತೆ ಮಧುಚಂದ್ರಕೆ ತೆರಳಿದ್ದ ಪತ್ನಿಯು ಗಂಡನನ್ನು ಮದುವೆಯಾದ ಒಂದೇ ವಾರದೊಳಗೆ ಕೊಲೆಮಾಡಿ ಪ್ರಪಾತಕ್ಕೆ ಶವ ಹಾಕಿದ ಪ್ರಕರಣ ದೇಶಾದ್ಯಂತ ಸಂಚಲ ಮೂಡಿಸಿ, ಜನರ ಮನಸಿನಿಂದ ಮಾಸುವ ಮುನ್ನವೇ, ಗದಗ ನಗರದಲ್ಲಿ ಪ್ರೀತಿಸಿದ ಹುಡುಗಿ "ಮಧು' ಎಂಬಾತಳನ್ನು ಕೊಲೆ ಮಾಡಿ ರುಂಡ ಮುಂಡ ಬೇರೆ ಮಾಡಿದ ಪ್ರಕರಣ ಚರ್ಚೆಗೆ ಮುನ್ನೆಲೆಗೆ ಬಂದಿದೆ.
ಕಳೆದ ಐದಾರು ವರ್ಷಗಳಿಂದ ಪ್ರೀತಿಸಿದ ಹುಡುಗಿಯನ್ನು ಕೊಲೆ ಮಾಡಿ, ಭೂಮಿಯಲ್ಲಿ ಮಣ್ಣು ಮಾಡಿದ ನಂತರ ಕೊಳೆತ ಶವದ ರುಂಡವನ್ನು ಬೇರೆಡೆ ಹೂತಿಟ್ಟು ಪೊಲೀಸ್ ತನಿಖೆ ದಿಗ್ಗು ತಪ್ಪಿಸುವ ಯತ್ನವನ್ನು ಆರೋಪಿ ಮಾಡಿದ್ದಾನೆ. ಈ ನಡುವೆ ಪೊಲೀಸರು ತಮ್ಮ ಭಾಷೆಯಲ್ಲಿ ಬೆಂಡೆತ್ತಿದ ನಂತರ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದ "ಮಧು'ವನ್ನು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದು, ಜಿಲ್ಲೆಯಲ್ಲಿ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಂತಾಗಿದೆ.
ಏನಿದು ಪ್ರಕರಣ?
ತಾಲೂಕಿನ ನಾರಾಯಣಪುರ ಗ್ರಾಮದ ಮಧುಶ್ರೀ ಈರಪ್ಪ ಅಂಗಡಿ (23) ಎಂಬ ಯುವತಿಯು ಡಿ. 16 ರಂದು ರಾತ್ರಿ 10ಗಂಟೆಗೆ ಕಾಣೆ ಆಗಿದ್ದ ಕುರಿತು ಯುವತಿಯ ಸಹೋದರ ಜನವರಿ 12, 2025ರಂದು ರಂದು ಬೆಟಗೇರಿ ಬಡಾವಣೆ ಪೊಲೀಸ ಠಾಣೆಗೆ ದೂರು ಸಲ್ಲಿಸಿರುತ್ತಾನೆ. ಅದೇ ಗ್ರಾಮದ ಸತಿಶ ಹಿರೇಮಠ ಎಂಬಾತ ಮೇಲೆ ಅನುಮಾನವನ್ನು ಪಟ್ಟಿರುತ್ತಾರೆ. ಸಿಪಿಐ ದೀರಜ್ ಶಿಂದೆ ನೇತೃತ್ವದಲ್ಲಿ ತಂಡಗಳ ರಚನೆ ಮಾಡಿ, ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಈ ಮರ್ಡರ್ ಮಿಸ್ಟ್ರಿ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆ ವೇಳೆ ಹಲವು ಬಾರಿ ಪೊಲೀಸ್ ತನಿಖೆ ದಿಕ್ಕು ತಪ್ಪಿಸಿದ್ದ ಸತೀಶ ಹಿರೇಮಠ ಕೊನೆಗೂ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಕೊಲೆ ನಂತರದ ಟನೆಗಳು ಕೂಡ ಜನರನ್ನು ಬೆಚ್ಚಿ ಬೀಳಿಸುವಂತಿವೆ.
ತನಿಖೆಯ ಹಾದಿ ತಪ್ಪಿಸಿದ್ದ ಆರೋಪಿ:
ಮಧುಶ್ರೀ ಕಾನೆಯಾದ ದೂರು ಸಲ್ಲಿಸಿದ್ದ ನಂತರ ಅವಳ ಪ್ರಿಯಕರ ನಾರಾಯಣಪೂರ ನಿವಾಸಿ ಸತೀಶ ಹಿರೇಮಠ (28) ಎಂಬಾತನ ಮೇಲೆ ಪೊಲೀಸರಿಗೆ ಸಂಶಯ ಮೂಡಿತ್ತು. ಆರಂಭಿಕ ವಿಚಾರಣೆಯಲ್ಲಿ, ಸತೀಶ್ ಹಿರೇಮಠ ಪೊಲೀಸ ತನಿಖೆ ದಿಕ್ಕು ತಪ್ಪಿಸಿದ್ದ. ಡಿ.16 ರಂದು ಸತೀಶ ಮತ್ತು ಮಧುಶ್ರೀ ಬೈಕ್ ಮೇಲೆ ತೆರಳಿದ್ದ ಸಿಸಿ ಕೆಮಾರ ದೃಶ್ಯಾವಳಿ ಮೂಲಕ ಡಿ.16 ರಂದು ರಾತ್ರಿ ಮಧುಶ್ರೀ ಸತಿಶ ಜತೆಗೆ ಇರುವುದು ಪೊಲೀಸರಿಗೆ ದೃಢಪಟ್ಟಿತ್ತು. ಸತೀಶನ್ನು ವಿಚಾರಿಸಿದಾಗ ಡಿ.16ರ ರಾತ್ರಿ ಹಾತಲಗೇರಿ ಗ್ರಾಮದಲ್ಲಿ ಮಧುಶ್ರೀಯನ್ನು ಬಿಟ್ಟು ಬಂದಿರುವುದಾಗಿ ಹೇಳಿಕೆ ನೀಡಿದ್ದನ್ನು. ಸೂಕ್ತ ಸಾಾಧಾರ ಕೊರತೆ ಕಾಡುತ್ತಿದ್ದ ಪೊಲಿಸರು ಸತೀಶನಿಗೆ ಪೊಲೀಸ್ ಭಾಷೆ ತಿಳಿಸಿಕೊಟ್ಟ ನಂತರ ಅಪಘಾತದಲ್ಲಿ ಮಧುಶ್ರೀ ತೀರಿಕೊಂಡಿದ್ದಾಳೆ. ಅವಳನ್ನು ಸಮೀಪದ ಹಾತಲಗೇರಿ ಗ್ರಾಮದ ಬಳಿ ಹಳ್ಳದಲ್ಲಿ ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದನ್ನು. ಹಾತಲಗೇರಿ ಗ್ರಾಮದ ಹಳ್ಳದಲ್ಲಿ ಸ್ಥಳ ಮಹಜರಿನ ವೇಳೆ ಶವ ಸಿಕ್ಕಿರಲಿಲ್ಲ.
ತನಿಖೆ ಹಾದಿ:
ಸಾಾಧಾರ ಕಲೆಹಾಕಲು ಸತೀಶ ಮೊಬೈಲ್ ನಂಬರ್ ಲೊಕೆಷನ್ ತಡಕಾಡಿದ್ದ ಪೊಲೀಸರಿಗೂ ಸಾಕ್ಷ$್ಯಗಳು ದೊರೆತಿರಲಿಲ್ಲ. ಆದರೆ, ಎಂತಹ ಆರೋಪಿ ಆಗಿದ್ದರೂ ಕೂಡ ಒಂದು ಸಾಕ್ಷ$್ಯ ಬಿಟ್ಟಿರುತ್ತಾನೆ ಎಂಬುದಕ್ಕೆ ಸತೀಶ ಒಂದೇ ಪೋನಿನಲ್ಲಿ ಬಳಸುತ್ತಿದ್ದ ಇನ್ನೊಂದು " ಡೆಡ್ ಸಿಮ್' ಪೊಲೀಸರಿಗೆ ಸಾಕ್ಷ$್ಯವನ್ನು ನೀಡಿತ್ತು. ಒಂದೇ ೋನಿನಲ್ಲಿ ಸತೀಶ್ ಎರಡು ಸಿಮ್ ಬಳಸುತ್ತಿದ್ದ. ಒಂದು ಸಿಮ್ ಮೂಲಕ ಪೊಲೀಸರಿಗೆ ಸೂಕ್ತ ಸಾಕ್ಷ$್ಯ ದೊರೆತಿರಲಿಲ್ಲ. ಹಾಗಾಗಿ ಸಿಡಿಆರ್ ತಂತ್ರಾಂಶದ ಮೂಲಕ ಮತ್ತೊಂದು ಸಿಮ್ ಬಳಸುತ್ತಿದ್ದನ್ನು ಪೊಲೀಸರು ಕಂಡು ಹಿಡಿದ್ದರು ಮತ್ತು ಮಧುಶ್ರೀ ಕೊಲೆಯಾದ ದಿನವೇ ಕಂಪನಿಯಿಂದ ಸಿಮ್ ಗೆ ಮೆಸೆಜ್ ಬಂದಿತ್ತು. ಈ ಮೆಸೆಜ್ ನಾರಾಯಣಪುರ ಗ್ರಾಮದ ಲೊಕೆಷನ್ ತೋರಿಸಿತ್ತು. ಈ ಮೆಸೆಜ್ ಜಾಡು ಹಿಡಿದು ಸತೀಶನನ್ನು ವಿಚಾರಣೆ ನಡೆಸಿದಾಗ ನಾರಾಯಣಪುರ ಗ್ರಾಮದ ಹಳ್ಳದಲ್ಲಿ ಮಧುಶ್ರಿಯನ್ನು ವ್ಹೇಲ್ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮುಚ್ಚಿದ್ದಾಗಿ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆ. ಮಧುಶ್ರೀ ಭಟ್ಟೆ ಹಾಗೂ ಚಪ್ಪಲಿಯನ್ನು ಸುಟ್ಟು ಹಾಕಿದ್ದಾನೆ. ಪೊಲೀಸರಿಗೆ ತಲೆಬಿಸಿಯಾಗಿದ್ದ ಪ್ರಕರಣದಲ್ಲಿ 6 ತಿಂಗಳ ನಂತರ ಆರೋಪಿ ಬಲೆಗೆ ಬಿದ್ದಿದ್ದಾನೆ.
ಕೊಲೆ ನಂತರವೂ ಮೇಲುಸ್ತುವಾರಿ:
ಕೊಲೆ ಮಾಡಿ ಶವ ಮುಚ್ಚಿ ಹಾಕಿದ್ದ ಸತೀಶ ಹಿರೇಮಠ, ಕೊಲೆ ನಂತರವು ಹಗಲು ರಾತ್ರಿ ಅನ್ನದೇ ಮೂರ್ನಾಲ್ಕು ದಿನಕ್ಕೊಮ್ಮೆ ತೆರಳಿ ಶವ ಹೂತಿಟ್ಟ ಸ್ಥಳದ ಮೇಲುಸ್ತುವಾರಿ ಮಾಡುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆತಂಕದಲ್ಲಿ ಭೂಮಿ ಮೇಲ್ಭಾಗದಲ್ಲೇ ಶವ ಹೂತಿಟ್ಟಿದ್ದ ಪರಿಣಾಮ ನಾಯಿ ನರಿಗಳು ಎಳೆದಾಟದಿಂದ ಶವ ಹೊರಗಡೆ ಬಂದಿತೇ ಎಂಬ ಭಯವು ಸತೀಶನನ್ನು ಕಾಡಿತ್ತು. ಹಾಗಾಗಿ, ಶವ ಹೂತಿಟ್ಟ ಸ್ಥಳ ವೀಕ್ಷಣೆ ಮಾಡಿ ಬರುತ್ತಿದ್ದ ಎಂದು ಹೇಳಿಕೆ ನೀಡಿದ್ದಾನೆ. ಈ ನಡುವೆ ನಾರಿ ನರಿಗಳು ಶವವನ್ನು ಕಚ್ಚಿ ಕಾಲು ಕೈ ಇತರೆ ಅಂಗಾಗಳನ್ನು ಹೊರಗೆಳೆದಿವೆ. ನಾರಿ ನರಿ ಕಡಿತದಿಂದ ದೇಹದಿಂದ ಬೇರ್ಪಟ್ಟ ಭಾಗಗಳನ್ನು ಅಣತಿ ದೂರದಲ್ಲಿ ಮತ್ತೊಮ್ಮೆ ಹೂತಿಟ್ಟಿದ್ದಾನೆ. ಕೆಲ ದಿನ ನಂತರ ನಾಯಿ ನರಿ ಕಡಿತದಿಂದ ದೇಹದಿಂದ ತಲೆಯು ಬೇರ್ಪಟ್ಟು ಭೂಮಿ ಮೇಲ್ಭಾಗಕ್ಕೆ ಬಂದಿದೆ. ಭಯಬಿದ್ದ ಸತೀಶ ಕೂಗಳತೆ ದೂರದಲ್ಲಿ ತಲೆಯನ್ನು ಪ್ರತ್ಯೇಕ ಹೂತಿಟ್ಟಿದ್ದಾನೆ. ಪೊಲೀಸ್ ತನಿಖೆಯಲ್ಲಿ ಈ ವರೆಗೆ ಮಧುಶ್ರೀ ದೇಹದ ಕೆಲ ಅಂಗಾಂಗಳು ಮತ್ತು ತಲೆ ಬುರುಡೆ ಸಿಕ್ಕಿಲ್ಲ. ಬೆಟಗೇರಿ ಬಡಾವಣೆ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಲೆಬುರುಡೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕೋಟ್:
ಒಂದು ಹಂತದದವರೆಗೂ ತನಿಖೆ ಮುಕ್ತಾಯವಾಗಿದೆ. ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆರೋಪಿಯಿಂದ ಇನ್ನೂ ಕೆಲ ಮಾಹಿತಿಗಳನ್ನು ಕಲೆ ಹಾಕಬೇಕಿದೆ. ಆರಂಭದಲ್ಲಿ ಈ ಪ್ರಕರಣ ಬೇದಿಸುವುದು ಕ್ಲಿಷ್ಟ ವಾಗಿತ್ತು. ಆದರೆ, ಜಿಲ್ಲಾ ಪೊಲೀಸ್ ತಂಡ ಉತ್ತಮ ಕಾರ್ಯ ಮಾಡಿ, ಸಾಗಳ ಸಮೇತ ಆರೋಪಿಯನ್ನು ಬಂದಿಸಿದ್ದಾರೆ.
ಬಿ.ಎಸ್. ನೇಮಗೌಡ, ಎಸ್ಪಿ ಗದಗ