ಜಿಲ್ಲೆ

ಮರ್ಚಂಟ್ಸ್ ಅರ್ಬನ್ ಬ್ಯಾಂಕ್ ಗ್ರಾಹಕರ ವಿಶ್ವಾಸ ಪಡೆದಿದೆ : ಡಿ. ಆರ್.ಪಾಟೀಲ

Gadag - Shivanand Hiremath

ಮರ್ಚಂಟ್ಸ್ ಅರ್ಬನ್ ಬ್ಯಾಂಕ್‌ನ ಶಾಖೆ ಉದ್ಘಾಟನೆ : ದಿನದರ್ಶಿಕೆ ಬಿಡುಗಡೆ-ಸನ್ಮಾನ

ಗದಗ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಸಹಕಾರಿ ಬ್ಯಾಂಕ್‌ಗಳಲ್ಲಿ ತನ್ನದೇ ಆದ ವೈಶಿಷ್ಠö್ಯತೆಯನ್ನು ಹೊಂದಿರುವ ದಿ.ಮರ್ಚಂಟ್ಸ್ ಅರ್ಬನ್ ಕೋ-ಆ ಬ್ಯಾಂಕ್‌ನ ಪ್ರಥಮ ಶಾಖೆಯನ್ನು ತೆರೆಯುವ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿರುವ ಅಭಿನಂದನೀಯ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ಅವರು ಶುಕ್ರವಾರ ನಗರದ ನಡವಲಗುಡ್ಡ ಕಾಂಪ್ಲೇಕ್ಸ್ದಲ್ಲಿ ಗದುಗಿನ ದಿ.ಮರ್ಚಂಟ್ಸ್ ಅರ್ಬನ್ ಕೋ-ಆ ಬ್ಯಾಂಕ್‌ನ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭ, ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಹಾಗೂ ಗ್ರಾಹಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕ್‌ಗಳಲ್ಲಿ ಯಾವ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿದೆಯೋ ಅದು ಸದ್ವಿನಿಯೋಗ ಆಗಬೇಕು ಇಲ್ಲವಾದರೆ ಸಾಲವನ್ನು ಮರುಪಾವತಿ ಮಾಡಲು ಬಹಳಷ್ಟು ಕಷ್ಟವಾಗುವದು. ಸಾಲ ಪಡೆದವರು, ಸಾಲಕ್ಕೆ ಜಾಮೀನು ಆದವರು ಸಾಲವನ್ನು ಸರಿಯಾಗಿ ಮರುಪಾವತಿಸಲು ಬದ್ಧರಾಗಿರಬೇಕು ಎಂದರು.

ದಿ.ಮರ್ಚAಟ್ಸ್ ಅರ್ಬನ್ ಕೋ-ಆ ಬ್ಯಾಂಕ್ ಕಳೆದ ೭೦ ವರ್ಷಗಳಿಂದ ಗದಗ ಪರಿಸರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬಂದಿದೆ. ಬ್ಯಾಂಕ್‌ನ ಸಂಸ್ಥಾಪಕರು ಹಾಗೂ ಅವರ ತರುವಾಯ ಬ್ಯಾಂಕ್ ಅಧ್ಯಕ್ಷರಾದವರು, ನಿರ್ದೆಶಕರು ಬ್ಯಾಂಕ್‌ನ ಪ್ರಗತಿ ಹಾಗೂ ಘನತೆಯನ್ನು ಹೆಚ್ಚಿಸಿದ್ದು ಅವರು ಸದಾವಕಾಲ ಸ್ಮರಣೀಯರು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ಎಸ್.ಜಿ.ಪಲ್ಲೇದ ಮಾತನಾಡಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲ ನಿರ್ದೆಶಕರು ಅನುಭವಿಕರೂ ಹಾಗೂ ಬ್ಯಾಂಕಿAಗ್, ಲೆಕ್ಕಪತ್ರ ಕ್ಷೇತ್ರದಲ್ಲಿ ಅಪಾರವಾದ ಅನುಭವಿಗಳಾಗಿರುವದು ಬ್ಯಾಂಕ್‌ನ ಪ್ರಗತಿ, ಭದ್ರತೆಗೆ, ಉತ್ತಮ ಸೇವೆಗೆ ಕಾರಣವಾಗಿದೆ ಹೀಗಾಗಿ ಈ ಬ್ಯಾಂಕ್ ಎಲ್ಲ ಗ್ರಾಹಕರ ಮೆಚ್ಚುಗೆ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಬ್ಯಾಂಕ್‌ನ ಹಿರಿಯ ಸದಸ್ಯರಾದ ಸಿದ್ರಾಮಪ್ಪ ಭೂಸದ ಮಾತನಾಡಿ ಬ್ಯಾಂಕ್‌ನ ಪ್ರಪ್ರಥಮ ಖಾತೆದಾರ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಅಂದಿನಿAದ ಇಂದಿನವರೆಗೆ ಕಳೆದ ೭೦ ವರ್ಷಗಳಿಂದಲೂ ಬ್ಯಾಂಕ್‌ನೊAದಿಗೆ ಸಂಪರ್ಕ ಹೊಂದಿರುವ ನನಗೆ ಇಂದು ಹೊಸ ವರ್ಷದ ದಿನದರ್ಶಿಕೆಯನ್ನು ನನ್ನಿಂದ ಬಿಡುಗಡೆ ಮಾಡಿಸಿದ್ದು ನನಗೆ ಅತೀವ ಸಂತೋಷವನ್ನುAಟು ಮಾಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಬ್ಯಾಂಕ್ ಮೊದಲ ಶಾಖೆಯನ್ನು ತೆರೆದಿದ್ದು ಮುಂದಿನ ದಿನಮಾನಗಳಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯುವ, ಬ್ಯಾಂಕ್‌ಗೆ ಸ್ವಂತ ಕಟ್ಟಡ ಹಾಗೂ ಸಧ್ಯ ಇರುವ ಠೇವಣಿಯನ್ನು ೧೦೦ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದ್ದು ಇದಕ್ಕೆ ನಮ್ಮೆಲ್ಲ ಗ್ರಾಹಕರು ನಮ್ಮ ಬ್ಯಾಂಕ್ ಮೇಲಿಟ್ಟಿರುವ ವಿಶ್ವಾಸದಿಂದ ಸಾಕಾರಗೊಳ್ಳುವ ಭರವಸೆ ನಮ್ಮದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಕೆ.ಎಸ್.ಚೆಟ್ಟಿ ಮಾತನಾಡಿ ಈಗಾಗಲೇ ಬ್ಯಾಂಕ್‌ನ ಆಡಳಿತದಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆಯನ್ನು ತರಲಾಗಿದ್ದು ಗ್ರಾಹಕರ ಅಪೇಕ್ಷೆಯ ಮೇರೆಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಆಡಳಿತ ವರ್ಗ ಬದ್ಧತೆಯಿಂದ ಕಾರ್ಯ ಮಾಡಲಿದೆ ಎಂದರು.

ಸಾನಿಧ್ಯ ವಹಿಸಿದ್ದ ಗದುಗಿನ ಶಿವಾನಂದ ಬೃಹನ್ಮಠದ ಪೂಜ್ಯ ಜ.ಅಭಿನವ ಶಿವಾನಂದ ಮಹಾಸ್ವಾಮಿಗಳು ಉತ್ತಮ ಸೇವೆ ಹೆಸರಾಗಿರುವ ಈ ಬ್ಯಾಂಕ್ ಇಲ್ಲಿ ಶಾಖೆಯೊಂದನ್ನು ತೆರೆದು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ಮುಂದಾಗಿದೆ. ಈ ಪ್ರದೇಶದಲ್ಲಿ ಬ್ಯಾಂಕ್ ಇಲ್ಲದ ಕೊರತೆಯನ್ನು ನಿಗಿಸಿದಂತಾಗಿದೆ ಎಂದರು.

ಸಣ್ಣ ವ್ಯಾಪಾರಸ್ಥರಾದ ರೇಖಾ ಪವಾರ, ಪುಷ್ಪಾವತಿ ಹರ್ಲಾಪೂರ, ಪರಪ್ಪ ಬುದ್ದಾಪೂರ, ವಿಜಯಲಕ್ಷಿö್ಮÃ ಭದ್ರಾಪೂರಮಠ ಅವರಿಗೆ ಸಾಲ ವಿತರಣೆಯ ಪತ್ರ ವಿತರಿಸಲಾಯಿತು.

ಬ್ಯಾಂಕ್‌ನ ಹಿರಿಯ ಗ್ರಾಹಕರಾದ ದೇವಪ್ಪ ನಡವಲಗುಡ್ಡ, ಮಹೇಶಚಂದ್ರ ಕಬಾಡರ, ಎಫ್.ಸಿ.ಹಿರೇಮಠ, ರಾಹುಲ್ ಮುನವಳ್ಳಿ, ಅಕ್ಕಮಹಾದೇವಿ ಸವಡಿ, ಚಿನ್ನಪ್ಪ ಜಕಾತಿ, ಚನ್ನಬಸಪ್ಪ ಕಾರದಕಟ್ಟಿ, ತುಕಾರಾಮಸಿಂಗ್ ಜಮಾದಾರ, ವೀರನಗೌಡ ಪೊಲೀಸ್‌ಪಾಟೀಲ, ದೀಪಕ ನಗರೇಶಿ, ರುಕ್ಮಿಣಿ ಸಾವಕಾರ, ಶರಣಪ್ಪ ಅಕ್ಕಿ, ಜಯರಾಜ ಮುಳಗುಂದ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಬ್ಯಾಂಕ್‌ನ ನಿರ್ದೆಶಕರಾದ ಸಚಿನ್ ಪಟ್ಟಣಶೆಟ್ಟಿ, ಅಶೋಕ ಹಂಜಗಿ, ಶಾಂತೇಶ ಅರಮನಿ, ಶಾಂತಾ ಹಲವಾಗಲಿ, ಶಿವಕುಮಾರ ಭೂಸನೂರಮಠ, ಸುನೀತಾ ತಡಸ, ಮಹೇಶ್ವರಪ್ಪ ಕಂಪಗೌಡ್ರ, ಶರಣಪ್ಪ ಗಡಾದ, ಲಿಂಗರಾಜ ತೋಟದ, ಈರಣ್ಣ ಮುದಗಲ್ಲ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮುತ್ತು ನಾಯ್ಕರ್ ಪ್ರಾರ್ಥಿಸಿದರು, ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು, ಎಲ್.ಬಿ.ತೋಟದ ವಂದಿಸಿದರು. ವ್ಯವಸ್ಥಾಪಕ ನಿರ್ದೆಶಕ ಬಸವರಾಜ ನಾಯಕವಾಡಿ, ವ್ಯವಸ್ಥಾಪಕರಾದ ಶೈಲಜಾ ಹೊಸಂಗಡಿ, ಶಾಖಾಧಿಕಾರಿ ವಿಜಯಕಾಂತ ನರಗುಂದ ಸೇರಿದಂತೆ ಬ್ಯಾಂಕ್‌ನ ಸಿಬ್ಬಂದಿ ಗಣ್ಯಮಹನೀಯರು ಪಾಲ್ಗೋಂಡಿದ್ದರು.