ಗದಗ : ನಗರದ ದತ್ತಾತ್ರೇಯ ರಸ್ತೆಯಲ್ಲಿರುವ ಉಡಚಮ್ಮದೇವಿ ದಸರಾ ಉತ್ಸವ ಕಾರ್ಯಕ್ರಮವು ಅ. 3ರ ಗುರುವಾರ ಘಟಸ್ಥಾಪನೆ ಮೂಲಕ ಪ್ರಾರಂಭಗೊಡಿದ್ದು ಪ್ರತಿದಿನ ದೇವಿಗೆ ವಿಶೇಷ ಅಲಂಕಾರದೊದಿಗೆ ರಾತ್ರಿ 8 ಗಂಟೆಗೆ ಮಂಗಳಾರತಿ ಜರಗುತ್ತಿದೆ.
ಅ.11ರ ಶುಕ್ರವಾರ ಆಯುಧ ಪೂಜೆ ದಿನದಂದು ಬೆಳಿಗ್ಗೆ ದೇವಿಗೆ ಅಭಿಷೇಕ ಜರಗುವುದು, ನಂತರ ಮಂಗಳಾರತಿ, ರಾತ್ರಿ ವಿಶೇಷ ಪುಷ್ಪಾಲಂಕಾರದೊAದಿಗೆ ಮಹಾಮಂಗಳಾರತಿ ಜರಗುವುದು. ಅ.12ರ ಶನಿವಾರ ವಿಜಯದಶಮಿಯಂದು ಬೆಳಿಗ್ಗೆ ಮಂಗಳಾರತಿ ಜರಗುವುದು, ಸಾಯಂಕಾಲ ಅಗ್ನಿ ಹಾಯುವುದು, ನಂತರ ದೇವಿಯ ಪಲ್ಲಕ್ಕಿಯು ಡೊಳ್ಳು ವಾದ್ಯಗಳೊಂದಿಗೆ ತೆರಳಿ ಮುಂಡರಗಿ ರಸ್ತೆಯಲ್ಲಿರುವ ಗೌಡ್ರ ಹೊಲದಲ್ಲಿ ಬನ್ನಿ ಮುಡಿಯುವುದು, ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ಜರಗುವುದು. ಅ.13ರ ರವಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರುವುದು, ಸಾಯಂಕಾಲ ನಗರದ ಪ್ರಮುಖ ದೇವಸ್ಥಾನಗಳಿಗೆ ದೇವಿಯ ಪಲ್ಲಕ್ಕಿ ಉತ್ಸವ ಜರಗುವುದು.
ಕಾರಣ ಭಕ್ತಾದಿಗಳು ಉಡಚಮ್ಮದೇವಿಯ ನವರಾತ್ರಿ ಉತ್ಸವದ ನಿಮಿತ್ಯ ಜರುಗುವ ಸಕಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ವಿನಂತಿಸಿಕೊAಡಿದ್ದಾರೆ.