ಗದಗ: ಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ನವರಾತ್ರಿ ನಿಮಿತ್ತ 6ನೇ ದಿವಸದ ಕಾರ್ಯಕ್ರಮದಲ್ಲಿ ಸದ್ಗುರು ಶಂಕರಾನAದ ಸ್ವಾಮಿಗಳು ಸಾನಿಧ್ಯವಹಿಸಿ ಪುರಾಣ ಪ್ರವಚನಕಾರರಾಗಿ ಶರಣ ಶ್ರೀ ಮಲ್ಲೇಶಪ್ಪ ಅಣ್ಣಿಗೇರಿ ವಹಿಸಿದ್ದರು. ಉಪನ್ಯಾಸಕರಾಗಿ ಪಂಡಿತ ವಾಸುದೇವಾಚಾರ ಹೂಲಿ ಆಗಮಿಸಿದ್ದರು.
ಸಾನಿಧ್ಯ ವಹಿಸಿದ್ದ ಶ್ರೀಗಳು ನವರಾತ್ರಿಯ ದುರ್ಗಾ ಪೂಜೆಯ 6ನೇ ದಿನ ಇವಳ ಸ್ವರೂಪದ ಉಪಾಸನೆ ಮಾಡಲಾಗುತ್ತದೆ. ಅಂದು ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಯೋಗ ಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವಪೂರ್ಣ ಸ್ಥಾನವಿದೆ. ಈ ಚಕ್ರದಲ್ಲಿ ಸ್ಥಿತವಾದ ಮನಸ್ಸುಳ್ಳ ಸಾಧಕನು ತಾಯಿ ಕಾತ್ಯಾಯಿನಿ ಚರಣಗಳಲ್ಲಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುತ್ತಾನೆ. ಅವಳ ಉಪಾಸನೆಯಿಂದ ಮಾನವನು ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಪೂರ್ಣವಾಗಿ ನಾಶವಾಗುತ್ತವೆ. ಕೊನೆಗೆ ಮುಕ್ತಿ ದೊರಕುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಪಂಡಿತ ವಾಸುದೇವಾಚಾರ ಹೂಲಿ ಸುಗ್ರೀವನ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳುತ್ತ ಈ ದೇವಿ ಪುರಾಣದಲ್ಲಿ ಸುಗ್ರಿವನಿಗೆ ಶ್ರೀದೇವಿ ಶಿಕ್ಷೆ ನೀಡುವದಿಲ್ಲ ಕಾರಣ ಧರ್ಮನಿಷ್ಠನಾಗಿ ನೈತಿಕ ದಾರಿಯಲ್ಲಿ ತನ್ನ ಸೇವೆ ಮಾಡಿ ವಿಶೇಷ ದಾನವನಾಗಿ ಉಳಿಯುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ಬಾಲ ಮಕ್ಕಳಿಂದ ನೃತ್ಯ, ಗಾಯನ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಾರ್ಮೋನಿಯಂ ಶ್ರೀಕಾಂತ ಹೂಲಿ, ತಬಲಾಸಾಥ ಡಾ. ಎಚ್.ಬಿ. ಹೂಗಾರ ನೀಡಿದರು ಪ್ರಸಾದ ಸೇವೆಯನ್ನು ಸಿ.ಎಫ್. ಪಾಟೀಲ, ಆರ್.ಬಿ. ಒಡೆಯರ್, ಜಿ.ಬಿ. ಚನ್ನಪ್ಪಗೌಡರ, ಎಂ.ಸಿ. ಹುಲ್ಲತ್ತಿ ವಹಿಸಿಕೊಂಡಿದ್ದರು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಪುನೀತರಾದರು.
ಕಾರ್ಯಕ್ರಮದ ಆರಂಭದಲ್ಲಿ ಸತೀಶ ಚನ್ನಪ್ಪಗೌಡರ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರ ನಿರೂಪಿಸಿ ವಂದಿಸಿದರು.