Gadag: ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಶೀಘ್ರ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದರೆ ಅ. 8 ತಂದು ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ವೆಂಕಟೇಶ ಕುಲಕರ್ಣಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಯಿಂದ ಈರುಳ್ಳಿ ಬೆಲೆ ಕುಸಿದಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೆಲೆ ಇಲ್ಲ. ಕ್ವಿಂಟಾಲ ಗೆ 600 ರೂ. ಇದೆ. ಬೆಳೆ ಹಾನಿಯನ್ನು ಸರ್ಕಾರ ನೀಡಲಿದೆ. ಆದರೆ ಬೆಳೆಹಾನಿ ಕೇವಲ 1 ಹೆಕ್ಟೇರ್ ಮಾತ್ರ ನೀಡಲಾಗುತ್ತಿದೆ. ಕನಿಷ್ಠ ನಾಲ್ಕು ಹೆಕ್ಟೇರ್ ಈರುಳ್ಳಿ ಬೆಳೆಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅ.8 ರಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ರೈತ ಸಂಘಟನೆಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು
ರಾಜ್ಯ ಸರ್ಕಾರ ಶೀಘ್ರ ಈರುಳ್ಳಿ ಬೆಳೆಗಾರರ ಪರಿಹಾರಕ್ಕೆಆವರ್ತ ನಿಧಿ 500 ಕೋಟಿ ಬಿಡುಗಡೆ ಮಾಡಬೇಕು. ಆವರ್ತ ನಿಧಿಯನ್ನು ಶೀಘ್ರ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಶಂಕರಗೌಡ ಜಾಯನಗೌಡ ಮಾತನಾಡಿ, ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪ್ರವಾಸ ಮಾಡಿದ್ದೇವೆ. ಈರುಳ್ಳಿ ಜತೆಗೆ ಗೋವಿನಜೋಳವು ಹಾನಿ ಆಗಿದೆ. ಈರುಳ್ಳಿ ಬೆಳೆಹಾನಿ ಬಗ್ಗೆ ಜಿಲ್ಲಾಡಳಿತ ಕ್ಕೂ ಗೊತ್ತಿದೆ. ಆದರೆ ಖರೀದಿ ಕೇಂದ್ರ ಆರಂಭಿಸಿ ಈರುಳ್ಳಿ ಖರೀದಿಸಿ ರೈತರನ್ನು ರಕ್ಷಿಸಬೇಕು ಎನ್ನುವ ಪರಿಜ್ಞಾನ ಜಿಲ್ಲಾಡಳಿತ ಕ್ಕೆ ಇಲ್ಲ ಎಂದು ಆರೋಪಿಸಿದರು.
ಈಗಾಗಲೇ ಬೆಳೆ ಸಮೀಕ್ಷೆ ನಡೆದಿದೆ. ಬೆಳೆ ಸಮೀಕ್ಷೆ ಸಮರ್ಪಕ ಆಗಿಲ್ಲ. ಬೆಳೆ ಸಮೀಕ್ಷೆ ಮತ್ತು ಪರಿಹಾರ ಬಗ್ಗೆ ಗ್ರಾಮಗಳಲ್ಲಿ ಡಂಗುರ ಸೇರಬೇಕು. ಗ್ರಾಪಂ ನಲ್ಲಿ ಪರಿಹಾರ ಕುರಿತು ನೋಟೀಸ್ ಬೋರ್ಡ್ ಗೆ ಮಾಹಿತಿ ಅಂಟಿಸಬೇಕು. ಆದರೆ, ಹಲವು ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆದಿಲ್ಲ. ಹೀಗಿದ್ದಲ್ಲಿ ರೈತರಿಗೆ ಸಮರ್ಪಕ ಬೆಳೆ ಪರಿಹಾರ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ರೂ. ವ್ಯಯಿಸುವ ಸರ್ಕಾರ ಬೆಳೆಹಾನಿ ಪರಿಹಾರಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂದು ಟಿಕೀಸಿದರು.
ವಿಜಯ ಕೋಳೆಕಾರ, ಸಿದ್ದಪ್ಪ ಮುಕ್ಕಾಣಿ, ಮಂಜನಗೌಡ, ಯಲ್ಲಪ್ಪ ಸಲೂಡಿ, ಬಸವೆಂತಪ್ಪ ವೆಂಕಟಾಪುರ, ಈರಪ್ಪ ಕೊಪ್ಪದ. ಸಿದ್ದಪ್ಪ ವಡ್ಡಟ್ಟಿ, ಮಲ್ಲಮ್ಮ ಮುಂಡವಾಡ, ಕಿರಣ ಪವಾರ್ ಇತರರು ಇದ್ದರು.