ಗದಗ ಕನಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಮಟ್ಟದ ಮೃತ್ಯುಂಜಯಶ್ರೀ ಪ್ರಶಸ್ತಿಯನ್ನು ವೃತ್ತಿರಂಗಭೂಮಿ ಕಲಾವಿದ ಮಹಾದೇವ ಹೊಸೂರ ಅವರಿಗೆ ಪ್ರದಾನ ಮಾಡಲಾಯಿತು. ಅಭಿನವ ಮೃತ್ಯಂಜಯ ಶ್ರೀಗಳು, ಡಾ. ನೀಲಮ್ಮ ತಾಯಿ ಅಸುಮಡಿ, ಕ್ಕಿರಪ್ಪ ಹೆಬಸೂರು, ಐ.ಕೆ. ಕಮ್ಮಾರ ಇತರರು ಇದ್ದರು. 
ಜಿಲ್ಲೆ

ರಾಜ್ಯಮಟ್ಟದ ಮೃತ್ಯುಂಜಯಶ್ರೀ ಪ್ರಶಸ್ತಿ ಪ್ರದಾನ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಕನಕ ಭವನದಲ್ಲಿ ಮಣಕವಾಡದ ಗುರು ಮೃತ್ಯುಂಜಯ ಶ್ರೀಗಳು ಸ್ಮರಣೋತ್ಸವ ಅಂಗವಾಗಿ ಗುರು ಮೃತ್ಯುಂಜಯ ಸೇವಾ ಸಮಿತಿ, ಸೌಹಾರ್ದ ಮಹಾಮನೆ ವೇದಿಕೆ ಸಹಯೋಗದಲ್ಲಿ ರಾಜ್ಯಮಟ್ಟದ ಮೃತ್ಯುಂಜಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ನೀಲಮ್ಮ ತಾಯಿ ಅಸುಂಡಿ ಮಾತನಾಡಿ, ಭಗವಂತನೆ ಮಣಕವಾಡದ ಮಹಿಮಾ ಪುರುಷರ ರೂಪದಲ್ಲಿ ಧರೆಗಿಳಿದು ಬಂದು ತನ್ನ ಕಾರ್ಯವನ್ನು ಪೂರೈಸಿ, ಮಣಕವಾಡದ ನೆಲದಲ್ಲಿ ತನ್ನ ಶಕ್ತಿಯ ಬೀಜವನ್ನು ಬಿತ್ತಿದ್ದಾನೆ. ಮಣಕವಾಡದ ಮೃತ್ಯುಂಜಯ ಶ್ರೀಗಳು ಬಿತ್ತಿದ ಬೀಜದಿಂದ ಆ ಪರಿಸರದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆ ರೂಪುಗೊಳ್ಳುತ್ತಿದೆ. ಅಭಿನವ ಮೃತ್ಯುಂಜಯ ಶ್ರೀಗಳು ರಚನಾತ್ಮಕ ಕೆಲಸ ಮಾಡುವ ಮೂಲಕ ಗುರುಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದರು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಬಂಜೆ ತೊಟ್ಟಿಲು, ಹೇಮರಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ ನಾಟಕಗಳ ಮೂಲಕ ಸಿಥಪಾತ್ರಕ್ಕೆ ಜೀವ ತುಂಬುವ ಮಹದೇವ ಹೊಸೂರ ಅವರಿಗೆ ಮೃತ್ಯುಂಜಯಶ್ರೀ ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯ. ಒಬ್ಬ ಶ್ರೇಷ್ಠ ಕಲಾವಿದನನ್ನು ಗುರುತಿಸಿ ಗುರು ಮೃತ್ಯುಂಜಯ ಶ್ರೀ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಸಾಹಿತಿ ಐ.ಕೆ. ಕಮ್ಮಾರ ಹಾಗೂ ಸಂಟಕರ ಕಾರ್ಯ ಅಭಿನಂದನೀಯ ಎಂದರು.
ಕಾರ್ಯಕ್ರಮವನ್ನು ಸಚಿವ ಎಚ್​.ಕೆ. ಪಾಟೀಲ ಉದ್ಘಾಟಿಸಿದರು. ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಕುರುಬ ಸಮಾಜದ ಮುಖಂಡ ಫಕೀರಪ್ಪ ಹೆಬಸೂರ, ಶ್ರೀ ಗುರು ಮೃತ್ಯುಂಜಯ ಸೇವಾ ಸಂಸ್ಥೆ ಹಾಗೂ ಸೌಹಾರ್ದ ಮಹಾಮನೆಯ ಪದಾಕಾರಿಗಳು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರಧಾನ
ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂದಲ್ಲಿ ಹಲವು ವರ್ಷಗಳಿಂದ ಸ್ತ್ರಿ ಪಾತ್ರಧಾರಿ ಆಗಿರುವ ಬಾಗಲಕೋಟರ ಜಿಲ್ಲೆಯ ಜಮಖಂಡಿ ತಾಲೂಕಿನ ಮಹದೇವ ಹೊಸೂರ ಅವರಿಗೆ ರಾಜ್ಯಮಟ್ಟದ ಮೃತ್ಯುಂಜಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ 10 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ.

ಗದಗ ಕನಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಮಟ್ಟದ ಮೃತ್ಯುಂಜಯಶ್ರೀ ಪ್ರಶಸ್ತಿಯನ್ನು ವೃತ್ತಿರಂಗಭೂಮಿ ಕಲಾವಿದ ಮಹಾದೇವ ಹೊಸೂರ ಅವರಿಗೆ ಪ್ರದಾನ ಮಾಡಲಾಯಿತು. ಅಭಿನವ ಮೃತ್ಯಂಜಯ ಶ್ರೀಗಳು, ಡಾ. ನೀಲಮ್ಮ ತಾಯಿ ಅಸುಮಡಿ, ಕ್ಕಿರಪ್ಪ ಹೆಬಸೂರು, ಐ.ಕೆ. ಕಮ್ಮಾರ ಇತರರು ಇದ್ದರು.