ಜಿಲ್ಲೆ

ಅತಿಯಾದ ಮೊಬೈಲ್​ ಬಳಕೆ ಬದುಕನ್ನು ಬೀದಿಗೆ ತರುತ್ತದೆ: ಎಂ. ಐ. ಶಿವನಗೌಡ್ರು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಿರಂತರ ಪುಸ್ತಕ ಓದುವುದರಿಂದ ವಿದ್ಯಾಥಿರ್ ಜೀವನ ಯಶಸ್ಸಿನ ದಾರಿಯಲ್ಲಿ ಸಾಗುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಅತಿಯಾದ ಮೊಬೈಲ್​ ರ್ದುಬಳಕೆಯಿಂದ ಬದುಕು ಬೀದಿಗೆ ಬೀಳುವುದು ನಿಶ್ಚಿತ. ಇದನ್ನರಿತು ವಿದ್ಯಾಥಿರ್ಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಇಂದು ಅತ್ಯವಶ್ಯವಿದೆ ಎಂದು ಹಿರಿಯ ಶಿಕ ಎಂ. ಐ. ಶಿವನಗೌಡ್ರ ಹೇಳಿದರು.

ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುಸ್ತಕದ ಮಹತ್ವ ಹಾಗೂ ಮೊಬೈಲ್​ ಬಳಕೆ ಮತ್ತು ರ್ದುಬಳಕೆಯ ಬಗ್ಗೆ ಹೊರತಂದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕದೊಂದಿಗೆ ನಿರಂತರ ತಮ್ಮ ಸ್ನೇಹ ಇರಬೇಕು. ಓದುವ ಹವ್ಯಾಸ ರೂಢಿಮಾಡಿಕೊಳ್ಳಬೇಖು. ತಲೆ ತಗ್ಗಿಸಿ ಪುಸ್ತಕವನ್ನು ನೋಡಿದರೆ ಸದಾ ತಲೆ ಎತ್ತುವಂತೆ ಮಾಡುತ್ತದೆ. ಆದರೆ, ತಲೆ ತಗ್ಗಿಸಿ ಮೊಬೈಲ್​ ನೋಡುತ್ತ ಕುಳಿತರೆ ಬವಿಷ್ಯದಲ್ಲಿ ತಲೆ ಎತ್ತದಂತೆ ಮಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಮೊಬೈಲ್​ ಬದಿಗೀಟ್ಟು ಪುಸ್ತಕವನ್ನು ಗೆಳೆಯನಾಗಿ ಸ್ವೀಕರಿಸಿ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯ ಜಯಲಕ್ಷಿ$್ಮ ಅಣ್ಣಿಗೇರಿ ಮಾತನಾಡಿ, ವಿದ್ಯಾಥಿರ್ ಜೀವನ ಸುವರ್ಣಕಾಲ. ಇದರ ಸದುಪಯೋಗವನ್ನು ಪಡೆದುಕೊಂಡು ಬಂಗಾರದಂತಹ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾಥಿರ್ ಬದುಕು ಅತ್ಯಂತ ಮಹತ್ವದ ಕಾಲಟ್ಟ. ಈ ಶಾಲೆಯಲ್ಲಿ ನಿಮಗೆ ಎಲ್ಲ ಶೈಣಿಕ ಪರಿಸರ ವಾತಾವರಣನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ಕರಪತ್ರಗಳು ತಮ್ಮ ಬದುಕಿನ ಪಥವನ್ನು ಬದಲಿಸಲಿ ಎಂದು ಹೇಳಿದರು.

ಶಂಕ್ರಮ್ಮ ಹಣಮಗೌಡ್ರು, ಮಂಜುಳಾ ಸಾಮ್ರಾಣಿ, ಸುಮಂಗಲ ಪತ್ತಾರ, ಶಾರದಾ ಬಾಣದ, ಶೋಭಾ ಗಾಳಿ, ರಮೇಶ್​ ಬಸರಿ, ಸಾವಿತ್ರಿ ಗದ್ದನಕೇರಿ, ಎನ್​. ಆರ್​. ಶಿರೋಳ, ಸಬಿಯಾ ಕುಷ್ಟಗಿ, ಗಂಗಾ ಅಳವಂಡಿ, ಮಂಜುಳಾ ಟಿ, ಶಶಿಕಲಾ ಗುಳೇದವರ, ಪದ್ಮಾ ದಾಸರ, ಲಕ್ಷ$್ಮಮ್ಮ ಮಾಳೋತ್ತರ, ಶಾರದಾ ಬಾಣದ, ಸಂಜೀವಿನಿ ಕೂಲಗುಡಿ ಇತರರು ಇದ್ದರು.