ಜಿಲ್ಲೆ

ಅಕ್ರಮ ಮರಳು ಗಣಿಗಾರಿಕೆ, ಆರ್​ಕ್ಯೂಪಿ, ಎನ್​ಜಿಟಿ, ಪರಿಸರ ಮತ್ತು ಅರಣ್ಯ ನಿಯಮ ಉಲ್ಲಂಘನೆ

Gadag - Shivanand Hiremath

ರಾಜಕೀಯ ಪ್ರಭಾವಿಗಳೇ ಮೊದಲು

ಶಿವಾನಂದ ಹಿರೇಮಠ, ಗದಗ
ಜಿಲ್ಲೆಯ ಮುಂಡರಗಿ ಭಾಗದಲ್ಲಿ ಕಳೆದ 5 ವರ್ಷಗಳ ಕಾಲ ನಡೆದ ಮರಳು ಗಣಿಕಾರಿಕೆಯಲ್ಲಿ ಹಲವು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಣಿ ಇಲಾಖೆ ನಡೆಸಿದ ಸಮೀೆಯಲ್ಲೂ ಈ ಅಕ್ರಮಗಳ ಕುರಿತು ವರದಿಯಾಗಿದೆ. ಅಕ್ರಮವಾಗಿ ಮರಳು ತೆಗೆಯುವ ಉದ್ದೇಶದಿಂದ ಕೆಲವಡೆ ತುಂಗಭದ್ರ ನದಿ ಪಾತ್ರದ ತಿರುವು ಮಾಡಿರುವುದು ಅಕ್ರಮಕ್ಕೆ ಪುಷ್ಠಿ ನೀಡುತ್ತಿದೆ. ನದಿಯಲ್ಲೇ ರಸ್ತೆ ನಿಮಿರ್ಸಿ ಮರಳು ಸಾಗಾಟ ಮಾಡಿರುವುದು ರಾಷ್ಟ್ರೀ ಹಸಿರು ನ್ಯಾಯಾಧೀಕರಣ ನಿಯಮಗಳ ಉಲ್ಲಂನೆಗೆ ಸಾಯಾಗಿದೆ. ಒಣ ಭೂಮಿಯಲ್ಲಿ ಗಣಿಗಾರಿಕೆ ನಡೆಸದೇ ಹರಿಯುವ ನದಿಯಲ್ಲೇ ಅಕ್ರಮವಾಗಿ ಮರಳು ತೆಗೆದಿರುವುದು ಪರಿಸರ ಇಲಾಖೆ ನಿಯಮಗಳನ್ನು ಮರಳು ಗಣಿಗಾರಿಕೆ ಗುತ್ತಿಗೆ ಪಡೆದ ಮಾಲೀಕರು ಪಾಲಿಸಿಲ್ಲ ಎಂಬುದು ಸಾಭಿತಾಗುತ್ತಿದೆ. ಹಲವರು ಸ್ಥಲಿಯ ರಾಜಕೀಯ ಮುಖಂಡರು ಎಂಬುದು ವಿಶೇಷ. ಅದರಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯಥಿರ್ ಸುಜಾತಾ ದೊಡ್ಡಮನಿ, ಕಾಂಗ್ರೆಸ್​ ಮುಖಂಡ ಗುರುನಾಥ ದಾನಪ್ಪನ್ನವರ, ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರಿಶ ಹಾವನಾಳ ಪ್ರಮುಖರು.
ಕಪ್ಪತಗುಡ್ಡ:
ಮುಂಡರಗಿ ತಾಲೂಕಿನ ಕೆಲ ಮರಳು ಗಣಿಗಾರಿಕೆ ಬ್ಲಾಕ್​ಗಳು ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಕಪ್ಪತಗುಡ್ಡವನ್ನು ಸಂರತ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ನಿಯಮ ಪ್ರಕಾರ ಅಂದಾಜು 1 ಕಿಮೀ ವ್ಯಾಪ್ತಿಯಲ್ಲಿ ಮರಳು ಅಥವಾ ಕಲ್ಲು ಗಣಿಗಾರಿಕೆ ನಡೆಸುವಂತಿಲ್ಲ. ಹೀಗಿದ್ದರೂ ಕೆಲವರಿಗೆ ಮರಳು ಗಣಿಗಾರಿಕೆ ಅನುಮತಿ ಸಿಕ್ಕಿದ್ದ ಹೇಗೆ ಎಂಬುದು ಜನರ ಪ್ರಶ್ನೆ ಆಗಿದೆ. ಶಿಂಗಟಾಲೂರು ಭಾಗದ ಗಣಿಗಾರಿಕೆಗಳು ಕಪ್ಪತಗುಡ್ಡ ವ್ಯಾಪ್ತಿಗೆ ಬರುತ್ತವೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹೆಚ್ಚಾಗಿಯೇ ಇದೆ.
ಆರ್​ಕ್ಯೂಪಿ ಉಲ್ಲಂಘನೆ:
ತುಂಗಭದ್ರ ನದಿ ತಟದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವ ಹಲವು ಬ್ಲಾಕ್​ಗಳಲ್ಲಿ ಆರ್​ಕ್ಯೂಪಿ(ರೆಕಗ್ನಾಯಿಸಡ್​ ಕ್ಲಾಲಿೈಡ್​ ಪರ್ಸನ್​) ನಿಯಮ ಬಹುತೇಕ ಗಾಳಿಗೆ ತೂರಲಾಗಿದೆ. ಗಣಿಗಾರಿಕೆ ಗುತ್ತಿಗೆ ನೀಡುವ ಮೊದಲು ಗಣಿಗಾರಿಕೆ ಯೋಜನೆಗಳನ್ನು ತಯಾರಿಸಲು ಅರ್ಹ ವ್ಯಕ್ತಿ(ಆರ್​ಕ್ಯೂಪಿ) ಮೊದಲು ಸಮೀೆ ನಡೆಸಿ ಗಣಿಗಾರಿಕೆಗೆ ಯೋಗ್ಯ ಎಂದು ಅನುಮತಿಸುತ್ತಾನೆ. ಇಷ್ಟೇ ಸ್ಥಳದಲ್ಲಿ ಅಂದಾಜು ಇಷ್ಟೇ ಮೆಟ್ರಿಕ್​ ಟನ್​ ಮರಳು ಲಭ್ಯತೆ ಕುರಿತು ಆರ್​ಕ್ಯೂಪಿ ತನ್ನ ವರದಿಯಲ್ಲಿ ಉಲ್ಲೇಖಿಸಿರುತ್ತಾರೆ. ಈ ವರದಿ ಆಧಾರದಲ್ಲಿ ಗಣಿ ಇಲಾಖೆ ಗುತ್ತಿಗೆ ನೀಡುತ್ತದೆ. ಆದರೆ, ಗುತ್ತಿಗೆ ಪಡೆದ ಮಾಲೀಕರು ಆರ್​ಕ್ಯೂಪಿ ನೀಡಿದ ವರದಿಗಿಂತಲೂ ಅಧಿಕ ವ್ಯಾಪ್ತಿಯ ಮರಳು ನಡೆಸಿದ್ದರ ಬಗ್ಗೆ ಗಣಿ ಇಲಾಖೆ ಆಕ್ಷೇಪ ಎತ್ತಿದೆ.

ಯಾರಾರಿಗೆ ಎಷ್ಟು ಮೊತ್ತದ ನೊಟೀಸ್​?
ಹೆಸರು -ಬ್ಲಾಕ್​ - ಬಾಕಿ ಮೊತ್ತ
ಹೇಮಗಿರಿಶ ಹಾವನಾಳ - ಕೊರ್ಲಹಳ್ಳಿ - 7.46 ಕೋಟಿ
ಸುಜಾತಾ ದೊಡ್ಡಮನಿ - ಶಿಂಗಟಾಲೂರು - 3.59 ಕೋಟಿ
ರಾಜು ಕಳ್ಳಿ - ಶಿಂಗಾಟಾಲೂರು - 2.13 ಕೋಟಿ
ವಿ.ಸಿ. ಮಲ್ಲಾಡದ - ಗಂಗಾಪೂರು - 1.30 ಕೋಟಿ
ಸುಭಾಷ ಗುಡಿಮನಿ - ಗಂಗಾಪೂರು - 98.64 ಲಕ್ಷ
ಅಶೋಕ ಹಳ್ಳೆಪ್ಪನ್ನವರ - ಹೊಳೆ ಇಟಗಿ - 19.25 ಲಕ್ಷ
ಸುಜಾತಾ ದೊಡ್ಡಮಿನಿ - ಕಲ್ಲಾಗನೂರು - 7.34 ಲಕ್ಷ
ಚಂದ್ರಶೇಖರ ಎಂ.ಎಸ್​ - ಹೊಳೆ ಇಟಗಿ - 12.24 ಲಕ್ಷ
ಶಂಭುಲಿಂಗನಗೌಡ ಡಿ.ಪಿ - ಸಾಸಲವಾಡ - 22.28 ಲಕ್ಷ
ಹೇಮಗಿರೀಶ ಹಾವನಾಳ - ಶಿಂಗಟಾಲೂರು - 10.33 ಲಕ್ಷ

ಏನಿದು ಆರ್​ಕ್ಯೂಪಿ:
ಗಣಿ ಮತ್ತು ಖನಿಜಗಳ ಯೋಜನೆ ರೂಪಿಸಲು ಭಾರತ ಸರ್ಕಾರ ಜ.01, 2004ರಲ್ಲಿ ನಡೆಸಿದ ಸ್ಥಾಯಿ ಸಮಿತಿ ಸಭೆಯಲ್ಲಿ ಯೋಜನೆಗಳನ್ನು ತಯಾರಿಸಲು ಅರ್ಹ ವ್ಯಕ್ತಿಗಳಿಗೆ ಮಾನ್ಯತೆ ನೀಡುವ ಕುರಿತು ನಿರ್ಧರಿಸಿತು. ಈ ಹಿನ್ನೆಲೆ ಪ್ರತಿ ಗಣಿಗಾರಿಕೆ ನೀಡುವ ಮೊದಲು ಅರ್ಹವ್ಯಕ್ತಿಯಿಂದ ಸಮಿೆ ನಡೆಸಲಾಗುತ್ತದೆ. ಈ ಅರ್ಹ ವ್ಯಕ್ತಿಯು ಭೂಶಾಸ್ತ್ರಜ್ಞ, ಭೂವಿಜ್ಞಾನದಲ್ಲಿ ಪರಿಣಿತನಾಗಿರುತ್ತಾನೆ.